ಪತ್ರಕರ್ತರ ಮಕ್ಕಳಿಗೆ ಖಾಸಗಿ ಶಾಲಾ ಮತ್ತು ಕಾಲೇಜುಗಳಲ್ಲಿ ಶುಲ್ಕ ವಿನಾಯಿತಿ ಕೋರಿಕೆ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಮನವಿ| ಶೇ. 50ರಷ್ಟು ಶುಲ್ಕ ವಿನಾಯಿತಿಗೆ ಆಗ್ರಹ; ಸಂಕೀನ್

ಸುರಪುರ ಟೈಮ್ಸ್ ವಾರ್ತೆ

ಯಾದಗಿರಿ: ಜಿಲ್ಲೆಯ ಖಾಸಗಿ ಶಾಲಾ ಮತ್ತು ಕಾಲೇಜುಗಳಲ್ಲಿ ಅಧ್ಯಯನ ಮಾಡುವ ಪತ್ರಕರ್ತರ ಮಕ್ಕಳಿಗೆ ಪ್ರಸ್ತಕ ಶೈಕ್ಷಣಿಕ ವರ್ಷದಿಂದಲೇ ಶುಲ್ಕ ವಿನಾಯಿತಿ ನೀಡುವಂತೆ ಆಗ್ರಹಿಸಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಮನವಿ ಸಲ್ಲಿಸಲಾಯಿತು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಶುಕ್ರವಾರ ಪ್ರತ್ಯೇಕವಾಗಿ ಮನವಿ ಸಲ್ಲಿಸಲಾಯಿತು.

ಜಿಲ್ಲೆಯ ಖಾಸಗಿ ಶಾಲೆಗಳಲ್ಲಿ 1ರಿಂದ 10ನೇ ತರಗತಿ ವರಗೆ ಅಧ್ಯಯನ ಮಾಡುವ ಪತ್ರಕರ್ತರ ಮಕ್ಕಳಿಗೆ ಶೇ. 50ರಷ್ಟು ಶುಲ್ಕ ವಿನಾಯಿತಿ ನೀಡುವ ಮೂಲಕ ಪತ್ರಕರ್ತರಿಗೆ ಅನುಕೂಲ ಮಾಡಿಕೊಡಬೇಕು ಎಂದರು

ಖಾಸಗಿ ಕಾಲೇಜುಗಳಲ್ಲಿ ವಿಜ್ಞಾನ ಮತ್ತು ವಾಣಿಜ್ಯ ಹಾಗೂ ಕಲಾ ವಿಭಾಗದಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೂ ಶೇ 50ರಷ್ಟು ಶುಲ್ಕ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿದರು.

ಸಾಕಷ್ಟು ಪತ್ರಕರ್ತರು ಆರ್ಥಿಕವಾಗಿ ಸಬಲತೆ ಹೊಂದಿಲ್ಲ. ಹೀಗಾಗಿ ಶುಲ್ಕ ವಿನಾಯಿತಿ ನೀಡಲು ಮುಂದಾಗಬೇಕು. ತಾವು ಖಾಸಗಿ ಶಾಲಾ ಮತ್ತು ಕಾಲೇಜು ಶಿಕ್ಷಣ ಸಂಸ್ಥೆಗಳಿಗೆ ಪತ್ರಕರ್ತರ ಸೇವೆ ಮನದಟ್ಟು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಇಲಾಖೆಯ ಅಧಿಕಾರಿಗಳು ನಮ್ಮ ಬೇಡಿಕೆಯನ್ನು ಈಡೇರಿಸಲು ಸಾಕಷ್ಟು ಮುತುವರ್ಜಿ ವಹಿಸಬೇಕು. ಶುಲ್ಕ ವಿನಾಯಿತಿ ಮಾಡಿದರೆ ಪತ್ರಕರ್ತರಿಗೆ ತುಂಬ ಆರ್ಥಿಕವಾಗಿ ಪ್ರಯೋಜನವಾಗಲಿದೆ ಎಂದರು.

ಇದೇ ವೇಳೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್, ಸಾಮಾಜಿಕ ವ್ಯವಸ್ಥೆ ಸುಧಾರಣೆಯಲ್ಲಿ ಪತ್ರಕರ್ತರ ಪಾತ್ರ ಅಮೋಘವಾಗಿದೆ. ಆದರೆ ಬಹುತೇಕ ಪತ್ರಕರ್ತರ ಆರ್ಥಿಕ ಪರಿಸ್ಥಿತಿ ಅಯೋಮಯವಾಗಿದೆ ಎಂದರು

ಖಾಸಗಿ ಶಾಲಾ ಮತ್ತು ಕಾಲೇಜುಗಳಲ್ಲಿ ತುಂಬ ದುಬಾರಿ ಶುಲ್ಕವಿದೆ. ಇದನ್ನು ಭರಿಸಲು ಸಹ ಕೆಲವರಿಗೆ ಭಾರವಾಗಿದೆ ಎಂದು ತಿಳಿಸಿದರು.

ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ ಲಿಂಗೇರಿ, ಜಿಲ್ಲಾ ಖಜಾಂಚಿ ರಾಜು ನಲ್ಲಿಕರ್, ಗಣೇಶ್ ಪಾಟೀಲ್, ಮಹೇಶ ಗಣೇರ್, ನಾಗರಾಜ ಕೋಟೆ, ನರಸಪ್ಪ ನಾರಾಯಣೋರ್, ಶರಭು ನಾಟೇಕರ್, ಲಕ್ಷ್ಮಿಕಾಂತ ಲಿಂಗೇರಿ, ಸುದೀರ್ ಕೋಟೆ, ಮಾನಯ್ಯ ಘಾಳೆಣ್ಣವರ, ನಾಗಪ್ಪ ದೇಸಾಯಿ ಸೇರಿದಂತೆ ಇನ್ನಿತರರಿದ್ದರು.

ಜಿಲ್ಲೆಯಲ್ಲಿ ಬಹತೇಕ ಪತ್ರಕರ್ತರು ಆರ್ಥಿಕವಾಗಿ ಹಿಂದುಳಿದಿದ್ದಾರೆ. ಅವರ ಮಕ್ಕಳ ಶುಲ್ಕ ವಿನಾಯಿತಿ ನೀಡುವ ಮೂಲಕ ಖಾಸಗಿ ಶಾಲಾ ಮತ್ತು ಕಾಲೇಜುಗಳು ಮಾನವೀಯತೆ ಮೆರೆಯುವ ಕೆಲಸ ಮಾಡಬೇಕು. ಇದರಿಂದಾಗಿ ಪತ್ರಕರ್ತರ ಆರ್ಥಿಕ ಹೊರೆ ಕಡಿಮೆಯಾಗುತ್ತದೆ.-ಮಲ್ಲಪ್ಪ ಸಂಕೀನ್, ಜಿಲ್ಲಾಧ್ಯಕ್ಷರು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಯಾದಗಿರಿ

ಮಲ್ಲಪ್ಪ ಸಂಕೀನ್, ಜಿಲ್ಲಾಧ್ಯಕ್ಷರು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಯಾದಗಿರಿ

Leave a Reply

Your email address will not be published. Required fields are marked *

error: Content is protected !!