ಬ್ಲ್ಯಾಕ್ ಮೇಲ್ ಮಾಡುತ್ತಿರುವ ಸಚಿನ್ ಕುಮಾರ್ ನಾಯಕ ವಿರುದ್ಧ ಕ್ರಮಕ್ಕೆ ಸಾಮೂಹಿಕ ಸಂಘಟನೆಗಳ ಮುಖಂಡರ ಬಂಧಿಸಲು ಒತ್ತಾಯ

ಸುರಪುರ ಟೈಮ್ಸ್ ವಾರ್ತೆ
ಸುರಪುರ : ಗ್ರಾಮೀಣ ಪ್ರದೇಶಗಳಲ್ಲಿ ಹಲವಾರು ರೈತರು ತಮ್ಮ ಜಮೀನು ಸಾಗುವಳಿ ಹಾಗೂ ಸಾಕಾಣಿಕೆಗಾಗಿ ಜಾನುವಾರುಗಳನ್ನು ಖರೀದಿ ಮಾಡಿಕೊಂಡು. ಬುಲೇರೋ (ಗೂಡ್ಸ್) ಬಾಡಿಗೆ ವಾಹನದಲ್ಲಿ ಸುರಪುರ ನಗರದ ಕಡೆಗೆ ಹೋಗುತ್ತಿರುವ ಸಂದರ್ಭದಲ್ಲಿ ದಿವಳಗುಡ್ಡ ಸರ್ಕಾರಿ ಶಾಲೆಯ ಹತ್ತಿರ ಸಾಮಾಜಿಕ ಕಾರ್ಯಕರ್ತ ಸಚಿನ್ ಕುಮಾರ್ ನಾಯಕ ಹಾಗೂ ಆತನ ಸಹಚರರು ಸೇರಿಕೊಂಡು.ರೈತರಿಗೆ &ಗೂಡ್ಸ್ ವಾಹನ ಚಾಲಕನಿಗೆ ಹೆದರಿಸಿ ಹೊಡಿಬಡಿ ಮಾಡಿ ವಾಹನಕ್ಕೆ ಅಡ್ಡಗಟ್ಟಿ.ದುಂಡಾವರ್ತನೆ ತೋರಿ ದರ್ಪ ಮೆರೆದು ವಿವಿಧ ಸಂಘಟನೆಯಲ್ಲಿ ನಾನು ಪದಾಧಿಕಾರಿಯಾಗಿದ್ದೇನೆ ಎಂದು ಸುಳ್ಳು ಹೇಳಿ ಅಮಾಯಕ ರೈತರು ಹಾಗೂ ಅಧಿಕಾರಿಗಳ ಹತ್ತಿರ ಹಣಕ್ಕೆ ಬೇಡಿಕೆ ಇಡುವಂತ ಸಾಮಾಜಿಕ ಕಾರ್ಯಕರ್ತ ಸಚಿನ್ ಕುಮಾರ್ ನಾಯಕ & ಆತನ ಸಹಚರರನ್ನು ಕೂಡಲೇ ಗುಂಡಾ ಕಾಯ್ದೆಯಡಿ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗುಳ್ಳುವಂತೆ ಒತ್ತಾಯಿಸಿ.ಇಂದು ಯಾದಗಿರಿ ಜಿಲ್ಲೆಯ ಸುರಪುರ ನಗರದ ತಾಲೂಕು ಪತ್ರಿಕಾ ಭವನದಲ್ಲಿ ಸಾಮೂಹಿಕ ಸಂಘಟನೆಗಳ ಮುಖಂಡರು ಸುದ್ದಿಗೋಷ್ಠಿ.ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ವಿವಿಧ ಸಂಘಟನೆಯ ಮುಖಂಡರು ಮಾಧ್ಯಮಗಳ ಹೇಳಿಕೆ ನೀಡುವ ಮೂಲಕ ಆಗ್ರಹ ಮಾಡಿದರು. ಈ ಸಂದರ್ಭದಲ್ಲಿ ಸಾಮೂಹಿಕ ಸಂಘಟನೆಗಳ ಮುಖಂಡರಾದ ರಮೇಶ್ ದೊರೆ ಆಲ್ದಾಳ, ವೆಂಕಟೇಶ ಬೇಟೆಗಾರ, ವೆಂಕಟೇಶ ಭೈರಿಮಡ್ಡಿ, ನಾಗಪ್ಪ ಕಲ್ಲದೇವನಹಳ್ಳಿ, ಭೀಮನಗೌಡ ಹೆಮನೂರ್, ಮಲ್ಲಿಕಾರ್ಜುನ ರೆಡ್ಡಿ ಅಮ್ಮಾಪೂರ, ಭೀಮರಾಯ ಸಿಂದಿಗೇರಾ, ರಾಹುಲ್ ಹುಲಿಮನಿ,ನಿಂಗಣ್ಣ ದೇವರಗೋನಾಲ, ದಾನಪ್ಪ ಲಕ್ಷ್ಮೀಪುರ, ಶಿವುಲಿಂಗ ಹಸನಾಪುರ, ನಾಗರಾಜ್ ಪ್ಯಾಪ್ಲಿ, ರಂಗನಾಥ ನಾಯಕ ಭೈರಿಮಡ್ಡಿ, ಗೋಪಾಲ ಸತ್ಯಂಪೇಟ, ರವಿನಾಯಕ ಭೈರಿಮಡ್ಡಿ, ಶರಣಪ್ಪ ತಳವಾರಗೇರಾ, ಹಾಗೂ ಸಾಮೂಹಿಕ ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.



