ಬೆಂಕಿ ಅವಘಡದಿಂದ ರೈತ ಸಂಗ್ರಹಿಸಿಟ್ಟ ಹುಲ್ಲು ಭಸ್ಮ
ಸುರಪುರ ಟೈಮ್ಸ್ ವಾರ್ತೆ
ಸುರಪುುರ: ಜಾನುವಾರಗಳಿಗೆ ಸಂಗ್ರಹಿಸಿ ಇಟ್ಟ ಭತ್ತದ ಹುಲ್ಲು ಬೆಂಕಿಗೆ ಆಹುತಿಯಾಗಿದೆ. ಅದೃಷ್ಟವಶಾತ ಪಕ್ಕದಲ್ಲಿರುವ ಜಾನುವಾರಗಳು ಪ್ರಾಣಪಾಯದಿಂದ ಪಾರಾಗಿವೆ.
ಸುರಪುರ ತಾಲ್ಲೂಕಿನ ಬೋನ್ಹಾಳ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ಭೀಮಣ್ಣ ತಂ.ಕಾಮಣ್ಣ ಅವರು ಜಾನುವಾರುಗಳಿಗೆ ಸಂಗ್ರಹಿಸಿ ಭತ್ತದ ಹುಲ್ಲು ಶೇಂಗಾದ ಹೊಟ್ಟು, ಸಜ್ಜಿ ಕಣಿಕ್ಕಿಕ್ಕೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ಪ್ರಮಾಣದ ಹಾನಿಯಾಗಿದೆ.
ಗ್ರಾಮಸ್ಥರು ಬಂದು ಬೆಂಕಿಯನ್ನು ನಂದಿಸುವಷ್ಟರಲ್ಲಿ ಭತ್ತದ ಹುಲ್ಲು ಶೇಂಗಾದ ಹೊಟ್ಟು ಸಜ್ಜಿ ಕಣಿಕ್ಕಿ ಸಂಪೂರ್ಣವಾಗಿ ಸುಟ್ಟು ಕರಕಲವಾಗಿರುವರಿಂದ ಬೋನ್ಹಾಳ ಗ್ರಾಮದ ರೈತ ಭೀಮಣ್ಣ ಕಂಗಾಲಾಗಿದ್ದಾನೆ.

