ತಹಸೀಲ್ದಾರ ಕಚೇರಿಯಲ್ಲಿ ಆಸನ ವ್ಯವಸ್ಥೆ ಇಲ್ಲದೆ ಸಾರ್ವಜನಿಕ ಪರದಾಟ
ಸುರಪುರ ಟೈಮ್ಸ್ ವಾರ್ತೆ
ಸುರಪುರ: ಇಲ್ಲಿನ ತಾಲ್ಲೂಕು ಆಡಳಿತ ಸೌಧ ಕ್ಕೆ ಬರುವ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಕುರ್ಚಿಯೂ ಇಲ್ಲ.
ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಕಚೇರಿಗೆ ಬರುತ್ತಿದ್ದರೂ ಕುಳಿತುಕೋಳಲು ವ್ಯವಸ್ಥೆ ಮಾಡದಿರುವುದು ತಾಲ್ಲೂಕು ಆಡಳಿತದ ನಿರ್ಲಕ್ಷ್ಯ ಎಂದು ರಾಹುಲ್ ಹುಲಿಮನಿ ದೂರಿದ್ದಾರೆ.
ತಾಲ್ಲೂಕು ಕಚೇರಿಯಲ್ಲಿ ಚುನಾವಣಾ ಇಲಾಖೆ, ಖಜಾನೆ ಇಲಾಖೆ, ಆಧಾರ್ ತಿದ್ದುಪಡಿ ಕೇಂದ್ರ, ಕಂದಾಯ ಇಲಾಖೆ, ಆಹಾರ ಇಲಾಖೆ, ಸರ್ವೇ ಇಲಾಖೆ ಮುಂತಾದ ಹಲವು ಶಾಖೆಗಳು ಒಂದೇ ಸೂರಿನಡಿ ಕಾರ್ಯ ನಿರ್ವಹಿಸುತ್ತಿವೆ.
ಎಲ್ಲ ಇಲಾಖೆಗಳು ಒಂದೆಡೆ ಇರುವುದರಿಂದ ಸಹಜವಾಗಿ ತಾಲ್ಲೂಕು ಕಚೇರಿಗೆ ಬರುವವರ ಸಂಖ್ಯೆಯೂ ಹೆಚ್ಚಾಗಿದೆ.
ದೂರದಿಂದ ಬರುವವರಿಗೆ ಕುಳಿತುಕೊಳ್ಳುವ ವ್ಯವಸ್ಥೆಯೂ ಇಲ್ಲದಿದ್ದರೆ ಹೇಗೆ ? ಎನ್ನುವ ಪ್ರಶ್ನೆಯಾಗಿದೆ.
ಸರ್ಕಾರದ ಸೇವೆಗಳನ್ನು ಪಡೆಯಲು ಬರುವ ಸಾರ್ವಜನಿಕರು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ. ಹಿರಿಯ ನಾಗರಿಕರಿಗೆ ಕೂರಲು ಆಸನಗಳ ಕೊರತೆ ಇದೆ. ನಿಂತು ನಿಂತು ಬೇಸತ್ತು ಅನಿವಾರ್ಯವಾಗಿ ನೆಲದ ಮೇಲೆ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲ್ಲೂಕು ಆಡಳಿತ ಮಹಿಳೆಯರ,ಹಿರಿಯ ನಾಗರಿಕ ಹಿತದೃಷ್ಟಿಯಿಂದ ಹೆಚ್ಚುವರಿ ಆಸನಗಳ ವ್ಯವಸ್ಥೆ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ತಾಲ್ಲೂಕು ಕಚೇರಿ ಆವರಣದಲ್ಲಿ ಸಾಕಷ್ಟು ಕುಳಿತುಕೊಳ್ಳಲು ಆಸನದ ಕೆಲಸವೂ ತುರ್ತಾಗಿ ಆಗಬೇಕು.ಅಧಿಕಾರಿಗಳ ಕಚೇರಿಯಲ್ಲಿ ಹಗಲು ಹೊತ್ತಿನಲ್ಲಿಯೇ ಸೊಳ್ಳೆಗಳು ಕಚ್ಚುತ್ತವೆ. ಎಲ್ಲಿ ಬೇಕಲ್ಲಿ ಗುಟ್ಕಾ, ಅಡಿಕೆ–ಎಲೆ ತಿಂದು ಉಗುಳುತ್ತಾರೆ. ಕಚೇರಿ ಕೆಲಸಕ್ಕೆ ಬಂದ ಸಾರ್ವಜನಿಕರಿಗೆ ಕೂರಲು ಆಸನ ವ್ಯವಸ್ಥೆ ಇಲ್ಲದಿರುವುದು ಆಡಳಿತ ಕೇಳಿದ ಕೈಗನ್ನಡಿಯಾಗಿದೆ.
ಆದಷ್ಟು ಬೇಗನೆ ಆಸನದ ವ್ಯವಸ್ಥೆ ಆಗಬೇಕು
ಇನ್ನೊಂದೆಡೆ ಸಾರ್ವಜನಿಕರು ತಮ್ಮ ಕೆಲಸ ಆಗುವವರೆಗೂ ಕಾಯಬೇಕಾದ ಅನಿವಾರ್ಯತೆ ಉಂಟಾದಾಗ ಕುಳಿತುಕೊಳ್ಳಲು ಸೂಕ್ತ ಆಸನದ ವ್ಯವಸ್ಥೆ ಸಹ ಇಲ್ಲದ್ದರಿಂದ ಜನರಿಗೆ ಮತ್ತಷ್ಟು ತೊಂದರೆಯಾಗಿದೆ ಆದಷ್ಟು ಬೇಗನೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಬೇಕು ಇಲ್ಲವಾದರೆ ಮುಂದಿನ ದಿನಮಾನಗಳಲ್ಲಿ ಇದರ ಬಗ್ಗೆ ಪ್ರತಿಭಟನೆ ಮಾಡಲಾಗುತ್ತದೆ ಎಂದು ಸುರಪುರ ಟೈಮ್ಸ್ ವಾರ್ತೆಗೆ ತಿಳಿಸಿದ್ದಾರೆ.



