ಕೊಡೇಕಲ್ ಆರ್‌ಟಿಜೆ ಶಾಲೆಗೆ ಶೇ. 100 ಫಲಿತಾಂಶ
ಸುರಪುರ ಟೈಮ್ಸ್ ವಾರ್ತೆ
ಸುರಪುರ :ಹುಣಸಗಿ ತಾಲೂಕಿನ ಕೊಡೇಕಲ್ ಪಟ್ಟಣದ ಆರ್.ಟಿ.ಜೆ. ಶಾಲೆಯು ಈ ಬಾರಿ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ಪಡೆದಿದೆ. ವಿದ್ಯಾರ್ಥಿಗಳಾದ ಮಲ್ಲಿಕಾರ್ಜುನ ಸಜ್ಜನ ಮತ್ತು ಶಿವರಾಜ ಹೂಗಾರ ಶೇ. 97 ಅಂಕದೊಂದಿಗೆ ಪ್ರಥಮ, ಸಂಗಮೇಶ ಹೂಗಾರ ಶೇ. 90 ಅಂಕದೊಂದಿಗೆ ದ್ವಿತೀಯ, ಕು. ಅರ್ಪಿತ್ ರಾಠಿ ಶೇ. 88 ಅಂಕದೊಂದಿಗೆ ತೃತೀಯ ಹಾಗೂ ಕು. ತನ್ವಿ ನಾಯಕ ಶೇ. 87 ಅಂಕದೊಂದಿಗೆ ಒಟ್ಟು 21 ವಿದ್ಯಾರ್ಥಿಗಳಲ್ಲಿ 10 ಅಗ್ರ ಶ್ರೇಣಿಯಲ್ಲಿ, 10 ಪ್ರಥಮ, 01 ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಒಟ್ಟಾರೆ ಶಾಲೆಯ ಫಲಿತಾಂಶ ಶೇ. 100 ಬಂದಿರುವದಕ್ಕೆ ಸಂಸ್ಥೆಯ ಅಧ್ಯಕ್ಷ ಹಣಮಂತ ನಾಯಕ (ಬಬಲುಗೌಡ) ಹರ್ಷ ವಕಪಡಿಸಿ ಅಭಿನಂದಿಸಿದ್ದಾರೆ.


