ಸುರಪುರ ಬಿಜೆಪಿ ಕಚೇರಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನ್ಮದಿನ ಅಂಗವಾಗಿ ರಕ್ತದಾನ ಶಿಬಿರ

ಸುರಪುರ ಟೈಮ್ಸ್ ವಾರ್ತೆ

ಸುರಪುರ :ನಮ್ಮ ದೇಶದ ನೆಚ್ಚಿನ ಪ್ರಧಾನಮಂತ್ರಿಗಳಾದ  ನರೇಂದ್ರ ಮೋದಿಜೀ ಅವರ 75ನೇ ಹುಟ್ಟು ಹಬ್ಬದ ಅಂಗವಾಗಿ ಸುರಪುರ ಬಿಜೆಪಿ ಕಚೇರಿ ಆವರಣದಲ್ಲಿ ನಡೆದ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷರು ಹಾಗೂ ಮಾಜಿ ಸಚಿವರಾದ ನರಸಿಂಹ ನಾಯಕ ರಾಜುಗೌಡ್ರು ಉದ್ಘಾಟಿಸಿ ನಂತರ ರಕ್ತದಾನ ಮಾಡಿದರು.ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಜಾ ಹನಮಪ್ಪ ನಾಯಕ,  ಯಲ್ಲಪ್ಪ ಕುರಕುಂದಿ ದೇವತ್ಕಲ್, ರಾಜಾ ಪಾಮ ನಾಯಕ, ಡಾ.ಸುರೇಶ್ ಸಜ್ಜನ, ಎಚ್.ಸಿಪಾಟೀಲ್,ಬಲಭೀಮ ನಾಯಕ ಬೈರಿಮಡ್ಡಿ, ವೇಣುಗೋಪಾಲ್ ಜೇವರ್ಗಿ, ಸುರಪುರ ತಾಲೂಕ ಭಾ.ಜ.ಪ. ಮಂಡಲ ಅಧ್ಯಕ್ಷರಾದ  ವೇಣುಮಾದವ್ ನಾಯಕ, ಹುಣಸಗಿ ತಾಲೂಕ ಭಾ.ಜ.ಪ ಮಂಡಲ ಅಧ್ಯಕ್ಷರಾದ ಸಂಗಣ್ಣ ವೈಲಿ ಸಾಹುಕಾರ, ಶಂಕರ ನಾಯಕ,  ನಿವಾಸ ನಾಯಕ , ಸಣ್ಣ ದೇಸಾಯಿ ದೇವರಗೋನಾಲ,ಪಾರಪ್ಪ ಗುತ್ತಿಗೆದಾರರು, ಪ್ರವೀಣ್ ಡೊಣ್ಣೆಗೇರಿ ಹಾಗೂ ಇತರರು ಗಣ್ಯರು ಉಪಸ್ಥಿತರಿದ್ದರು. ಶಿಬಿರದಲ್ಲಿ 111ಮಂದಿ ಸ್ವಯಂಪ್ರೇರಿತವಾಗಿ  ರಕ್ತದಾನಿಗಳು ರಕ್ತದಾನ ಮಾಡಿದರು.

Leave a Reply

Your email address will not be published. Required fields are marked *

error: Content is protected !!