ದಸರಾ ಹಬ್ಬ ಮುಗಿದರೂ ನೀರು ಬರಲ್ಲ, ಸುರಪುರ ಜನಕ್ಕೆ ಕುಡಿಯುವ ನೀರು ಯಾವಾಗ?

ಸುರಪುರ ಟೈಮ್ಸ್ ವಾರ್ತೆ
ಸುರಪುರ : ನಗರದಲ್ಲಿ ಕಳೆದ ಕೆಲ ದಿನಗಳಿಂದ ನಿರಂತರ ನೀರು ಪೂರೈಕೆ ವ್ಯವಸ್ಥೆ ನಿಂತು ಹೋಗಿದ್ದರಿಂದ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ದಸರಾ ಹಬ್ಬ ಮುಗಿದರೂ ನೀರಿಲ್ಲದೆ ಜನ ಹೈರಾಣಾಗಿ ಹೋಗಿದ್ದಾರೆ.
ತಾಲೂಕಿನ ದೇವಾಪುರ ಗ್ರಾಮದ ಹತ್ತಿರ ನೀರಿನ ಕೊಳುವೆ ಮಾರ್ಗ ದುರಸ್ತಿ ಇದ್ದು 3-4 ದಿನ ನೀರು ಪೂರೈಕೆ ಇರುವುದಿಲ್ಲ ಸಾರ್ವಜನಿಕರು ಸಹಕರಿಸಬೇಕು ಎಂದು ನಗರಸಭೆ ಪ್ರಕಟಣೆಯಲ್ಲಿ ತಿಳಿಸಿತ್ತು. ಪ್ರಕಟಣೆ ನೋಡಿ ದಂಗಾಗಿದ್ದ ನಾಗರಿಕರು ಹಬ್ಬದ ಮುಂದೆ ನೀರಿನ ಸಮಸ್ಯೆಯಾಗಬಾರದು ಹಬ್ಬಕ್ಕೆ ನೀರು ಕೊಟ್ಟರೆ ಸಾಕು ಎಂದಿದ್ದ ಅವರಿಗೆ ಕೊನೆಗೆ ನಿರಾಸೆಯಾಯಿತು. ಕೊನೆಗೂ ದೊಡ್ಡ ಹಬ್ಬಕ್ಕೆ ನೀರಿಲ್ಲದೆ ಪರದಾಡಿದರು ನೀರು ಯಾವಾಗ ಕೊಡುತ್ತಾರೆ ಎಂಬ ಪ್ರಶ್ನೆಯಾಗಿದೆ.
ಕೊಳುವೆ ಮಾರ್ಗ ಸಕಾಲದಲ್ಲಿ ದುರಸ್ತಿಯಾಗದ ಕಾರಣ, ನೀರು ಪೂರೈಕೆ ಪ್ರಾರಂಭವಾಗಲಿಲ್ಲ. ಹೀಗಾಗಿ ನಾಗರಿಕರಿಗೆ ಹಬ್ಬಕ್ಕೆ ನೀರಿನ ಸಮಸ್ಯೆ ಕಾಣಿಸಿಕೊಂಡಿತು. ಹಗಲು-ರಾತ್ರಿ ಬೋರವೆಲ್, ಬಾವಿ ನೀರು ತಂದು ಸುಸ್ತಾಗಿ ಹೋದರು. ಸಂಬಂಧಿಸಿದವರು ಯುದ್ದೋಪಾದಿಯಲ್ಲಿ ದುರಸ್ತಿ ಕಾರ್ಯಕೊಂಡು ನೀರು ಪೂರೈಕೆ ಪುನಾರಾರಂಭಿಸಬೇಕಾಗಿತ್ತು. ಅಲ್ಲದೆ, ಪರ್ಯಾಯ ವ್ಯವಸ್ಥೆ ಮಾಡದಿದಕ್ಕೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು.
ಟ್ಯಾಂಕರ್ ವ್ಯವಸ್ಥೆ ಮಾಡಲಿಲ್ಲ : ನಗರಕ್ಕೆ ಕುಡಿಯವ ನೀರು ಸರಬರಾಜು ವ್ಯವಸ್ಥೆ ಸ್ಥಗಿತಗೊಂಡಿದ್ದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಗಂಭೀರವಾಗಿ ಪರಿಗಣಿಸಬೇಕಿತು. ಆದರೆ ನಗರಸಭೆ ಅಧ್ಯಕ್ಷರಾಗಲಿ ಉಪಾಧ್ಯಕ್ಷರಾಗಲಿ ಹಾಗೂ ಪೌರಾಯುಕ್ತರಾಗಲಿ ವಾರ್ಡ್ಗಳಲ್ಲಿ ಸಂಚರಿಸಿ, ಸಮಸ್ಯೆ ಪರಿಶೀಲಿಸಿ ಬೋರವೆಲ್ ದುರಸ್ತಿ, ಟ್ಯಾಂಕರ್ ವ್ಯವಸ್ಥೆ ಮಾಡದೇ ಇರುವುದರಿಂದ ಸುರಪುರ ಜನ ತುಂಬಾ ತೊಂದರೆಯಾಗಿ ಕುಡಿಯುವ ನೀರು ಇನ್ನೂ ಯಾವಾಗ ಬರುತ್ತದೆ ಎಂದು ಸಾರ್ವಜನಿಕರು ವಲಯದಲ್ಲಿ ಚರ್ಚೆಯಾಗುತ್ತಿದೆ .

Leave a Reply

Your email address will not be published. Required fields are marked *

error: Content is protected !!