ರಾಷ್ಟ್ರೀಯ ಐಕ್ಯತೆ ಸದಾ ಜಾಗೃತವಾಗಿರಲಿ:ಡಿವೈಎಸ್‌ಪಿ ಜಾವೇದ್ ಇನಾಮದಾರ್

ಸುರಪುರ ಟೈಮ್ಸ್ ವಾರ್ತೆ
ಸುರಪುರ:ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸುರಪುರ ಪೊಲೀಸ್ ಠಾಣೆ ವತಿಯಿಂದ ರಾಷ್ಟ್ರೀಯ ಏಕತಾ ದಿವಸ್‌ದ ನಿಮಿತ್ತ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು.

ಸರ್ದಾರ್ ವಲ್ಲಭಭಾಯಿ ಪಟೇಲ್‌ರವರ 150 ನೇ ದಿನಾಚರಣೆ ನಿಮಿತ್ತವಾಗಿ ಅವರ ಜೀವನ ಮತ್ತು ಅವರ ದೂರದೃಷ್ಟಿ ಕುರಿತು ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಅನೇಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಮಾಜಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಸುಶ್ಮಿತಾ (ಪ್ರಥಮ), ಕಲಾ ವಿಭಾಗದ ಭೀಮರಾಯಿ ಸಿದ್ದಪ್ಪ (ದ್ವಿತೀಯ), ವಾಣಿಜ್ಯಶಾಸ್ತ್ರ ವಿಭಾಗದ ಭಗವಾನ್ (ತೃತೀಯ) ಸ್ಥಾನೆ ಪಡೆದು ಬಹುಮಾನ ಸ್ವೀಕರಿಸಿದರು.

ನಂತರ ಡಿವೈಎಸ್‌ಪಿ ಜಾವೇದ್ ಇನಾಮದಾರ್ ಮಾತನಾಡಿ, ಭಾರತವು ಒಕ್ಕೂಟ ವ್ಯವಸ್ಥೆಯ ರಾಷ್ಟ್ರ ನಮ್ಮಲ್ಲಿ ರಾಷ್ಟ್ರೀಯ ಐಕ್ಯತೆ ಸದಾ ಜಾಗೃತವಾಗಿರಬೇಕು. ವಿವಿಧತೆಯಲ್ಲಿ ಏಕತೆಯನ್ನು ಕಾಣಬೇಕು. ಐಕ್ಯತೆಯ ರಾಷ್ಟ್ರೀಯ ಪ್ರಜ್ಞೆ ಸದಾ ನಮ್ಮಲ್ಲಿ ಇರಬೇಕು ಮತ್ತು ವಿದ್ಯಾರ್ಥಿಗಳು ಮಾದಕ ವಸ್ತುಗಳ ಬಗ್ಗೆ ಸೈಬರ್ ಅಪರಾಧದ ಬಗ್ಗೆ ಜಾಗೃತರಾಗಬೇಕು.

ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಅಪರಿಚಿತರೊಂದಿಗೆ ವೈಯಕಿಕ ಮಾಹಿತಿ ಸೈಬರ್ ಸೈಬರ್ ದೂರು ಹಂಚಿಕೊಳ್ಳಬೇಡಿ. ಯಾವುದೇ ವಂಚನೆಗೆ ಒಳಗಾದಗ ತಕ್ಷಣವೇ ಹೆಲ್ಸ್‌ಲೈನ್ 1930 ಕರೆ ಮಾಡಿ ದಾಖಲಿಸಿ ಎಂದು ಸಲಹೆ ನೀಡಿದರು.

ಏಕತೆಗಾಗಿ ಓಟ್ ಮ್ಯಾರಥಾನ್‌

ಪಿಐ ಉಮೇಶ ನಾಯಕ ಮಾತನಾಡಿ, ಸುರಪುರ ಪೊಲೀಸ್ ಠಾಣೆ ವತಿಯಿಂದ ರಾಷ್ಟ್ರೀಯ ಏಕತಾ ದಿವಸ್ ನಿಮಿತ್ತವಾಗಿ ಅ.31 ರಂದು ಏಕತೆಗಾಗಿ ಓಟ್ ಮ್ಯಾರಥಾನ್‌ ಆಯೋಜಿಸಿದ್ದು ತಿಮ್ಮಾಪುರದ ಹನುಮಾನ್ ಮೂರ್ತಿಯಿಂದ ಸರ್ದಾರ್ ವಲ್ಲಭಭಾಯಿ ಪಟೇಲ್
ಮೂರ್ತಿವರೆಗೆ ಓಟ ಇರುತ್ತದೆ. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭಾಗವಹಿಸಬೇಕು ಎಂದು ತಿಳಿಸಿದರು.

ಪ್ರೊ.ಪ್ರಮೋದ್ ಕುಲಕರ್ಣಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರೊ.ದೇವೇಂದ್ರ ಪಾಟೀಲ್. ಬಸವರಾಜ ಶೆಟ್ಟಿ, ಡಾ.ಕೃಷ್ಣ ಮಾರುತಿ, ಪ್ರಭುಗೌಡ, ನಾಗಪ್ಪ ಹಾಗೂ ವಿದ್ಯಾರ್ಥಿಗಳು ಇದ್ದರು. ಪೊಲೀಸ್ ಪೇದೆ ದಯಾನಂದ ಜಮಾರ್ದ ಪ್ರತಿಜ್ಞೆ ಏಕತಾ ದಿವಸದ ರಾಷ್ಟ್ರೀಯ ಬೋಧಿಸಿದರು. ಉಪನ್ಯಾಸಕರಾದ ಡಿ.ಎಸ್. ಹೆಬ್ಬಾಳ ನಿರೂಪಿಸಿದರು. ಶಾಂತು ನಾಯಕ ಸ್ವಾಗತಿಸಿದರು. ಹೊನ್ನಪ್ಪ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!