ಶಿಕ್ಷಕರ ನಿಯೋಜನೆಗೆ ಬೋನ್ಹಾಳ ಗ್ರಾಮಸ್ಥರ ಒತ್ತಾಯ
ಸುರಪುರ ಟೈಮ್ಸ್ ವಾರ್ತೆ
ಸುರಪುರ:ನಮ್ಮ ಶಾಲೆಗೆ ಶಿಕ್ಷಕರನ್ನು ನಿಯೋಜನೆ ಮಾಡುವಂತೆ ಒತ್ತಾಯಿಸಿ ತಾಲೂಕಿನ ಬೋನ್ಹಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ ಡಿ ಎಂ ಸಿ ಹಾಗೂ ಪೋಷಕರು, ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಕ್ಕೆ ಇಂದು ಮನವಿ ಸಲ್ಲಿಸಲಾಯಿತು.
ಕಳೆದ ವರ್ಷದಿಂದ ಶಾಲೆಯಲ್ಲಿ ಕಾಯಂ ಶಿಕ್ಷಕರು ಇಲ್ಲದೇ ವಿದ್ಯಾರ್ಥಿಗಳು ಪರದಾಟ ನಡೆಸಬೇಕು. ಆದರೆ, ಶಿಕ್ಷಣ ಇಲಾಖೆ ಶಿಕ್ಷಕರನ್ನು ನೇಮಕ ಮಾಡುವಂತೆ ಹಲವು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ನೇಮಕ ಮಾಡುತ್ತಿಲ್ಲ. ಕಳೆದ ವರ್ಷದಿಂದ ಮುಖ್ಯಗುರು ಇಲ್ಲ. ಎಲ್ ಕೆಯಿಂದ 1ನೇ ತರಗತಿಯಿಂದ 8 ರವರೆಗೆ 330 ವಿದ್ಯಾರ್ಥಿಗಳು ಇದ್ದು.ಕಾಯಂ ಶಿಕ್ಷಕರನ್ನು ನೇಮಕ ಮಾಡಬೇಕು ಎಂದು ಎಸ್ ಡಿ ಎಂ ಸಿ ಅಧ್ಯಕ್ಷ ಬಾಪುಗೌಡ ಬೆಳ್ಳಿ ಆಗ್ರಹಿಸಿದರು.
ಈಗಾಗಲೇ ಒಂದು ವರ್ಷದಿಂದ ಮಕ್ಕಳ ವ್ಯಾಸಂಗಕ್ಕೆ ಸಾಕಷ್ಟು ತೊಂದರೆಯಾಗಿದೆ. ಇದರಿಂದ ಮಕ್ಕಳಿಗೆ ಅನ್ಯಾಯವಾಗಿದೆ. ಇಲಾಖೆಯ ಅಧಿಕಾರಿಗಳು ಕೂಡಲೇ ಐದು ಕಾಯಂ ಶಿಕ್ಷಕರನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.
ನಲಿ-ಕಲಿಗೆ ತೊಂದರೆ: ಸರಕಾರ ಮಕ್ಕಳಿಗೆ ಆಟದೊಂದಿಗೆ ಪಾಠ ಎನ್ನುವ ದಷ್ಟಿಯಿಂದ ನಲಿ-ಕಲಿ ಯೋಜನೆ ಆರಂಭಿಸಿದೆ. ಆದರೆ, ಈ ಶಾಲೆಯಲ್ಲಿ 1ರಿಂದ 3ನೇ ತರಗತಿಯಲ್ಲಿ ಒಟ್ಟು 81 ಮಕ್ಕಳಿದ್ದು, ಈ ಮಕ್ಕಳಿಗೆ ಕಚೇರಿ ಕೆಲಸಗಳ ನಡುವೆ ಪಾಠ ಮಾಡಬೇಕಿದ್ದು, ವಿದ್ಯಾರ್ಥಿಗಳಿಗೆ ವೆಯಕ್ತಿಕ ಕಾಳಜಿಯಿಲ್ಲದಂತಾಗಿ ಈ ಯೋಜನೆ ಇದ್ದರೂ ಇಲ್ಲದಂತಾಗಿದೆ.
ಶಿಕ್ಷಕರ ಕೊರತೆ ಬಗ್ಗೆ ಅನೇಕ ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಸೂಕ್ತ ಕ್ರಮ ಕೆಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಪಿದ್ದಾರೆ.
ನ.17 ರಂದು ಶಾಲೆಗೆ ಬೀಗ್ ಹಾಕಿ ಪ್ರತಿಭಟನೆ
ವಿದ್ಯಾರ್ಥಿಗಳ ಸಮಸ್ಯೆಅರಿತು ಶಿಕ್ಷಣ ಇಲಾಖೆ ಅಧಿಕಾರಿಗಳು ಶಿಕ್ಷಕರನ್ನು ನಿಯೋಜಿಸಬೇಕು. ಒಂದು ವೇಳೆ ನಿರ್ಲಕ್ಷ್ಯ ತೋರಿದ್ದೇ ಆದಲ್ಲಿ ಇದೇ 17 ಶಾಲೆಗೆ ಬೀಗ ಹಾಕುವುದರ ಮೂಲಕ ವಿದ್ಯಾರ್ಥಿಗಳೊಂದಿಗೆಪ್ರತಿಭಟನೆ ನಡೆಸಲಾಗುವುದು ಎಂದು ವಿದ್ಯಾರ್ಥಿಗಳ ಪೋಷಕರು ಎಚ್ಚರಿಸಿದ್ದಾರೆ.
ವಿಷಯವಾರು ಶಿಕ್ಷಕರ ನೇಮಕಾತಿಗೆ ಒತ್ತಾಯ
5,6,7,8 ನೇ ತರಗತಿಯ ವಿದ್ಯಾರ್ಥಿಗಳಿಗೆ ವಿಷಯವಾರು ಗಣಿತ ವಿಜ್ಞಾನ ಇಂಗ್ಲಿಷ್ ಸಮಾಜ ಕನ್ನಡ ಹಿಂದಿ ವಿಷಯವಾರು ಶಿಕ್ಷಕರ ಶಿಕ್ಷಕರನ್ನು ನೇಮಿಸಿ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ ಬೆಳವಣಿಗೆಗೆ ಸಹಕರಿಸಬೇಕಾಗಿ ಗ್ರಾಮಸ್ಥರು ಮನವಿ ಮಾಡಿದರು.
ಹಲವು ಬಾರಿ ಮನವಿ ನೀಡಿದರು ಶಾಲೆಗೆ ಭೇಟಿ ನೀಡಿದ ಅಧಿಕಾರಿಗಳ ವರ್ಗ
ಶಾಲೆಯ ಸಮಸ್ಯೆ ಹಾಗು ಶಿಕ್ಷಕರ ನಿಯೋಜನೆ ಕುರಿತು ಬಗೆ ಹಲವು ಬಾರಿ ಮನವಿ ಮಾಡಿದರೂ ಬಿಇಓ ಬಿಆರ್ ಸಿ ಸಿ ಆರ್ ಸಿ ಹಾಗೂ ಇನ್ನಿತರ ಸಂಬಂಧಿಸಿದ ಅಧಿಕಾರಿಗಳ ವರ್ಗ ಶಾಲೆಗೆ ಭೇಟಿ ಕೋಟ್ಟು ವಿದ್ಯಾಭ್ಯಾಸದ ಬಗ್ಗೆ ವಿಚಾರಿಸಿಲ್ಲ ಎಂದು ದೂರಿದ್ದರು.
ಈ ಸಂದರ್ಭದಲ್ಲಿ ವೀರಭದ್ರಯ್ಯ ಹಿರೇಮಠ, ಮಲ್ಲಿಕಾರ್ಜುನ ಯಾದವ್ ,ಮಾಳಪ್ಪ ಮಾಲಗತ್ತಿ, ಜೇಟಪ್ಪ ಮಾಲಗತ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.


