ಕಲಬುರಗಿ-ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ನೂತನ ನಿರ್ದೇಶಕರಾಗಿ ವಿಠಲ್ ಯಾದವ ಆಯ್ಕೆ,ಯಾದವ ಸಮಾಜದ ಯುವ ಮುಖಂಡ ನಾಗರಾಜ ಯಾದವ ದೀವಳಗುಡ್ಡ ಹರ್ಷ


ಸುರಪುರ ಟೈಮ್ಸ್ ವಾರ್ತೆ

ಸುರಪುರ:ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಆಡಳಿತ ಮಂಡಳಿಗೆ ನೂತನ ನಿರ್ದೇಶಕರಾಗಿ ಆಯ್ಕೆಯಾದ ವಿಠಲ್ ಯಾದವ ಅವರು ಆಯ್ಕೆಯಾಗಿದ್ದಕ್ಕೆ ಯಾದವ ಸಮಾಜದ ಯುವ ಮುಖಂಡ ನಾಗರಾಜ ಯಾದವ ದೀವಳಗುಡ್ಡ  ಹರ್ಷ ವ್ಯಕ್ತಪಡಿಸಿದ್ದಾರೆ. ಅವರು

ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಹಿಂದುಳಿದ ಯಾದವ ಗೊಲ್ಲ ಸಮಾಜದ ನಾಯಕರು, ಕಲ್ಯಾಣ ಕರ್ನಾಟಕ ಭಾಗದ ಹಿರಿಯ ನಾಯಕ ವಿಠಲ್ ಯಾದವ್ ಅವರು ಪ್ರತಿಷ್ಠಿತ ಕೆವೈಡಿಸಿಸಿ ಬ್ಯಾಂಕಿಗೆ ನೂತನ ನಿರ್ದೇಶಕರಾಗಿ ಆಯ್ಕೆಯಾಗಿದ್ದು ಅತ್ಯಂತ ಸಂತಸ ತಂದಿದೆ. ವಿಠಲ್ ಯಾದವ್ ಅವರ ಗೆಲುವಿಗೆ ಕಾರಣೀಕರ್ತರದಾ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ, ಸುರಪುರ ಶಾಸಕರಾದ ವೇಣುಗೋಪಾಲ ನಾಯಕ್ ಮತ್ತು ಯಾದಗಿರಿ ಶಾಸಕರಾದ ಚನ್ನಾರೆಡ್ಡಿ ಪಾಟೀಲರಿಗೆ ಮತ್ತು ಪ್ರತ್ಯಕ್ಷ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಹೃತೂರ್ವಕವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ. ಹಿರಿಯರಾದ ವಿಠಲ್ ಯಾದವ್ ಅವರು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಉನ್ನತ ಮಟ್ಟದ ಸ್ಥಾನಮಾನ ಪಡೆದು ಈ ಭಾಗದಲ್ಲಿ ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಲಿ ಎಂದು ಆಶಿಸುತ್ತಾ ಶುಭ ಕೋರುತ್ತೇನೆ ಎಂದು ನಾಗರಾಜ ಯಾದವ್  ದೀವಳಗುಡ್ಡ ತಿಳಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!