ಹೊರ ಗುತ್ತಿಗೆ ಆಧಾರದ ನೇಮಕ,ತರಬೇತಿ ಇಲ್ಲದ ಬಸ್‌ ಚಾಲಕನಿಂದ ಬಾಲಕಿ ಬಲಿ!ಚಾಲಕರ ನಿರ್ಲಕ್ಷ್ಯ, ಕೌಶಲ್ಯ ಕೊರತೆಯಿಂದ ಅವಘಡ, ಗುಣಮಟ್ಟದ ಸುರಕ್ಷಿತ ಸೇವೆ ಒದಗಿಸುವಲ್ಲಿ KKRTC ವಿಫಲ:ರವಿಕುಮಾರ ನಾಯಕ ಭೈರಿಮರಡಿ

ಸುರಪುರ ಟೈಮ್ಸ್ ವಾರ್ತೆ
ಸುರಪುರ : ಹೊರ ಗುತ್ತಿಗೆ ಆಧಾರದ ಮೇಲೆ ಯಾವುದೇ ತರಬೇತಿ ಕೌಶಲ್ಯ ಕೊರತೆ ಗುಣಮಟ್ಟದ ಸುರಕ್ಷಿತ ಸೇವೆ ಇಲ್ಲದೆ ನೇಮಕಾತಿ ಮಾಡಿಕೊಂಡು ಸುರಕ್ಷಿತ ಸೇವೆ ಒದಗಿಸುವಲ್ಲಿ KKRTCಯು ಸಂಪೂರ್ಣ ವಿಫಲವಾಗಿದೆ ಎಂದು ಜಯ ಕರ್ನಾಟಕ ಜನಪರ ವೇದಿಕೆಯ ಯಾದಗಿರಿ ಜಿಲ್ಲಾ ಕಾರ್ಯಾಧ್ಯಕ್ಷ ರವಿಕುಮಾರ ನಾಯಕ ಭೈರಿಮಡ್ಡಿ ಹೇಳಿದರು.


ಅವರು ಮಂಗಳವಾರ ವ್ಯವಸ್ಥಾಪಕ ನಿರ್ದೇಶಕರು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕೇಂದ್ರ ಸದನ ಕಲ್ಬುರ್ಗಿ,ವಿಭಾಗೀಯ ನಿಯಂತ್ರಣಾಧಿಕಾರಿಗಳು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಯಾದಗಿರಿ ವಿಭಾಗ ಯಾದಗಿರಿ ಘಟಕ ವ್ಯವಸ್ಥಾಪಕರು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಯಾದಗಿರಿ ವಿಭಾಗ ಸುರಪುರ ಘಟಕದಲ್ಲಿ ಮನವಿ ಸಲ್ಲಿಸಿ ಮಾತನಾಡಿದ ಅವರು
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಬಸ್‌ ಚಾಲಕರನ್ನು ಹೊರ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಂಡು ಬಸ್ ನಡೆಸಲು ಆದೇಶ ನೀಡಿರುತ್ತಿರಿ, ಅವರಿಗೆ ಸರಿಯದ ತರಬೇತಿ ಕೊರತೆಯಿದ್ದು, ಇವರು ಲಾರಿ, ಟ್ರ್ಯಾಕ್ಟರ್, ಜೀಪು ಓಡಿಸಿದವರಾಗಿದ್ದು. ಇವರಿಗೆ ಯಾವುದೇ ರೀತಿ ಪರಿಪೂರ್ಣ ರಸ್ತೆಯ ಸುರಕ್ಷತೆ ಹಾಗೂ ಚಾಲನೆಯ ಅನುಭವ ಇರುವುದಿಲ್ಲ. ಇಂತಹ ಚಾಲಕರ ನಿರ್ಲಕ್ಷತೆಯಿಂದ ಸಾಕಷ್ಟು ಅಪಘಾತವಾಗಿ ಸಾರ್ವಜನಿಕರಿಗೆ ಜೀವವನ್ನು ಹೋಗುತ್ತಿದ್ದಾವೆ ಕೂಡಲೇ ಹೊರ ಗುತ್ತಿಗೆ ಆಧಾರದ ಮೇಲೆ ನೇಮಕವಾದ ಎಲ್ಲಾ ಚಾಲಕರು ವಜಾ ಮಾಡಬೇಕು ಎಂದು ದೂರಿದ್ದರು.


ತರಬೇತಿವಿಲ್ಲದೆ, ನಿರ್ಲಕ್ಷ್ಯತನ್ನದಿಂದ ಬಸ್‌ ಚಾಲಕನಿಂದ ಬಾಲಕಿ ಬಲಿ

ಇದೇ ತಿಂಗಳು: 15-11-2025 ರಂದು ಸುರಪುರ ತಾಲೂಕಿನ ಮಂಗಳೂರು ಗ್ರಾಮದಲ್ಲಿ ಬಸ್ಸಿನ ಚಾಲಕನ ತರಬೇತಿ ಇಲ್ಲದೆ ನಿರ್ಲಕ್ಷತನದಿಂದ ಎರಡು ವರ್ಷದ ಮಗುವಿನ ಮೇಲೆ ಬಸ್ಸು ಹರಿದು ಹೋಗಿ ಅಪಘಾತದಲ್ಲಿ ಮಗುವಿನ ಸಾವಿಗೆ ಹೊರ ಗುತ್ತಿಗೆ ಚಾಲಕನು ಕಾರಣನಾಗಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹೊರ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡ ಚಾಲಕರಿಂದಲೇ ಅತಿ ಹೆಚ್ಚು ಅಪಘಾತವಾಗುತ್ತವೆ. ಈ ಕೂಡಲೇ ಹೊರ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿರುವ ಚಾಲಕರನ್ನು ತೆಗೆದು ಹಾಕಿ ತರಬೇತಿ ಚಾಲಕರನ್ನು ನೇಮಕಾತಿ ಮಾಡಿಕೊಳ್ಳಬೇಕೆಂದು KKRTC ಸುರಪುರ ಘಟಕದಲ್ಲಿ ಮನವಿ ಮಾಡಿ ಕೊಂಡರು.

ಈ ಸಂದರ್ಭದಲ್ಲಿ ಜಯ ಕರ್ನಾಟಕ ಜನಪರ ವೇದಿಕೆಯ ತಾಲೂಕ ಅಧ್ಯಕ್ಷ ಗೋಪಾಲ ನಾಯಕ ಸತ್ಯಂಪೇಟೆ ,ಗೌರವಾಧ್ಯಕ್ಳ
ಶಿವರಾಜ ಮಕಾಶಿ ಸತ್ಯಂಪೇಟೆ, ಉಪಾಧ್ಯಕ್ಷರಾದ ಬಸವರಾಜ ಪಾಟೀಲ.
ರಾಘವೇಂದ್ರ ಸಗರ ಲಕ್ಷ್ಮೀಪೂರ ,ರಾಘವೇಂದ್ರ ಎಲಿಗಾರ,
ಸಂಚಾಲಕ ನಿಂಗಣ್ಣ ಯಾದವ ದೇವಿಕೇರಿ ,ಸಂಘಟನಾ ಕಾರ್ಯದರ್ಶಿ
ರವಿಕಿರಣ ಹೊಸಸಿದ್ದಾಪೂರ ಖಜಾಂಚಿ, ಬಸಪ್ಪ ಹೆಳವರ,ಕಾರ್ಯದರ್ಶಿ ಕೃಷ್ಣ ನಾಯಕ ಸತ್ಯಂಪೇಟೆ, ಸಹ ಕಾರ್ಯದರ್ಶಿಶಿವುಮೂರ್ತಿ, ದಿವಳಗುಡ್ಡ ಸಹ ಖಜಾಂಚಿ ಮರೆಪ್ಪ ಕೊಮಾರಿ ಸಹ ಜಂಟಿ ಕಾರ್ಯದರ್ಶಿ ರಾಘವೇಂದ್ರ ಕುಲಕರ್ಣಿ ದೇವಿಕೇರಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!