ಪತ್ರಿಕೋದ್ಯಮದ ಪ್ರಾಮಾಣಿಕತೆ, ವೃತಿ ನಿಷ್ಠೆ, ಹೋರಾಟ ಮತ್ತು ಸಂಘಟನಾ ಶಕ್ತಿಗೆ ಸಂದ‌ ಗೌರವಪತ್ರಕರ್ತರ ಸಂಘಕ್ಕೆ 2 ನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಮಲ್ಲಪ್ಪ ಸಂಕೀನ್ ಅವರಿಗೆ ವಿಶೇಷ ಸನ್ಮಾನ.

ಸುರಪುರ ಟೈಮ್ಸ್ ವಾರ್ತೆ

ಯಾದಗಿರಿ; ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾಗಿ ಸತತ 2 ನೇ ಬಾರಿಗೆ ಚುನಾಯಿತರಾಗಿರುವ ಮಲ್ಲಪ್ಪ ಸಂಕೀನ್ ಅವರನ್ನು ಡಾ.ಸಿದ್ಧರಾಜ ರೆಡ್ಡಿ ಸಂಪಾದಕತ್ವದಲ್ಲಿ ನೂತನವಾಗಿ ಆರಂಭಿಸಿರುವ ಗಿರಿ ದರ್ಶನ ಕನ್ನಡ ದಿನಪತ್ರಿಕೆಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಬುಧವಾರ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಯಾದಗಿರಿ ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಡಾ.ಶಿವರಾಜ ಪಾಟೀಲ್ ಅವರು ಸನ್ಮಾನಿಸಿದರು.
ನಂತರ ಮಾತನಾಡಿದ ಗಣ್ಯರು, ಮಲ್ಲಪ್ಪ ಸಂಕೀನ್ ಅವರ ಅನುಭವ, ಸರಳತೆ ಹಾಗೂ ಹೋರಾಟದ ಮನೋಭಾವವು ಸಂಘವನ್ನು ಇನ್ನಷ್ಟು ಬಲಿಷ್ಠಗೊಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಖಾಸಾ ಮಠದ ಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮೀಜಿ ಅವರು ಸಾನ್ನಿಧ್ಯ ವಹಿಸಿದ್ದರು. ಶಾಸಕರಾದ ಚೆನ್ನಾರೆಡ್ಡಿ ಪಾಟೀಲ್, ಶರಣಗೌಡ ಕಂದಕೂರ, ಪ್ರೊ. ಚೆನ್ನಾರೆಡ್ಡಿ ಪಾಟೀಲ್ ಕುರಕುಂದ, ಡಾ.ಸಿ.ಎಂ. ಪಾಟೀಲ್, ಚನ್ನಪ್ಪಗೌಡ ಮೋಸಂಬಿ, ಮಹೇಶರೆಡ್ಡಿ ಮುದ್ನಾಳ, ಜಿಲ್ಲಾ ಕನ್ನಡ ಪತ್ರಿಕಾ ಸಂಪಾದಕರ ಅಧ್ಯಕ್ಷ ಸಿದ್ದಪ್ಪ ಲಿಂಗೇರಿ, ಡಾ. ಸಿದ್ಧರಾಜ ರೆಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!