ಕಾಗಿನೆಲೆ ಮಹಾಸಂಸ್ಥಾನ ತಿಂಥಣಿ ಬ್ರಿಡ್ಜ್ ಕನಕ ಗುರುಪೀಠದ ಸಿದ್ದರಾಮಾನಂದಪುರಿ ಶ್ರೀಗಳ ನಿಧನಕ್ಕೆ “ಸುರಪುರ ಟೈಮ್ಸ್ ಪತ್ರಿಕೆ”ಯಿಂದ ಭಾವಪೂರ್ಣ ಶ್ರದ್ಧಾಂಜಲಿ

ಸುರಪುರ ಟೈಮ್ಸ್ ವಾರ್ತೆ
ಸುರಪುರ;ಕಾಗಿನೆಲೆ ಮಹಾಸಂಸ್ಥಾನ ತಿಂಥಣಿ ಬ್ರಿಡ್ಜ್ ಕನಕ ಗುರುಪೀಠದ ಪೂಜ್ಯರಾದ ಸಿದ್ದರಾಮಾನಂದಪುರಿ ಶ್ರೀಗಳ ನಿಧನ ಸುದ್ದಿ ನಮ್ಮೆಲ್ಲರ ಹೃದಯವನ್ನು ನೋವಿನಿಂದ ತುಂಬಿಸಿದೆ. ಧಾರ್ಮಿಕತೆ, ಮಾನವೀಯತೆ ಮತ್ತು ಸಮಾಜಸೇವೆಯ ಆದರ್ಶಗಳನ್ನು ಬದುಕಿನುದ್ದಕ್ಕೂ ಸಾರಿದ ಮಹಾತ್ಮರ ಅಗಲಿಕೆ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ.
ಪೂಜ್ಯ ಶ್ರೀಗಳು ಸರಳತೆ, ಸೌಹಾರ್ದತೆ ಮತ್ತು ಶಾಂತಿಯ ಸಂದೇಶದೊಂದಿಗೆ ಅನೇಕ ಭಕ್ತರ ಜೀವನಕ್ಕೆ ದಾರಿದೀಪವಾಗಿದ್ದರು. ಅವರ ಉಪದೇಶಗಳು ಹಾಗೂ ಆಶೀರ್ವಾದಗಳು ಸದಾ ಜನಮನಗಳಲ್ಲಿ ಅಮರವಾಗಿರಲಿವೆ.
ಪೂಜ್ಯ ಶ್ರೀಗಳ ಆತ್ಮಕ್ಕೆ ಚಿರಶಾಂತಿ ಲಭಿಸಲಿ. ಶೋಕಸಂತಪ್ತ ಭಕ್ತರು, ಶಿಷ್ಯವೃಂದ ಹಾಗೂ ಕುಟುಂಬಸ್ಥರಿಗೆ ಈ ಅಪಾರ ದುಃಖವನ್ನು ಸಹಿಸುವ ಶಕ್ತಿ ದೊರಕಲಿ ಎಂದು ಸುರಪುರ ಟೈಮ್ಸ್ ಪತ್ರಿಕೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತದೆ. 🙏

Leave a Reply

Your email address will not be published. Required fields are marked *

error: Content is protected !!