ಶೇ. 60 ರಷ್ಟು ಕನ್ನಡ ಪದ ಬಳಕೆಗೆ ಕರವೇ ಆಗ್ರಹ


ಸುರಪುರ ಟೈಮ್ಸ್ ವಾರ್ತೆ

ಸುರಪುರ : ತಾಲೂಕಿನ ಎಲ್ಲಾ ಶಾಲೆಗಳ ವಾರ್ಷಿಕೋತ್ಸವ ಕಾರ್ಯಕ್ರಮಗಳಲ್ಲಿ ಬ್ಯಾನರ್, ಪೋಸ್ಟರ್, ಸ್ಕಿನ್ ಪರದೆಗಳಲ್ಲಿ ಶೇ.೬೦ ರಷ್ಟು ಕನ್ನಡ ಪದ ಬಳಕೆ ಮಾಡಲು ತಕ್ಷಣವೇ ಆದೇಶಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡರು ಆಗ್ರಹಿಸಿದರು.
ಇಲ್ಲಿಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಗುರುವಾರ ಬಿಇಒ ಅವರಿಗೆ ಈ ಕುರಿತು ಮನವಿ ಸಲ್ಲಿಸಿದ ನಂತರ ಕರವೇ ತಾಲೂಕು ಘಟಕದ ಅಧ್ಯಕ್ಷ ವೆಂಕಟೇಶ ನಾಯಕ ಭೈರಿಮರಡಿ ಮಾತನಾಡಿ, ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಬಹುತೇಕ ಶಾಲೆಯವರು ಬ್ಯಾನರ್, ಪೋಸ್ಟರ್, ಸ್ಕಿನ್ ಪರದೆಗಳಲ್ಲಿ ಇಂಗ್ಲೀಷ್ ಪದಗಳನ್ನು ಬಳಕೆ ಮಾಡುತ್ತಿರುವುದು ಬೆಳಕಿಗೆ ಬರುತ್ತಿದೆ ಇದು ಸರಿಯಾದ ಕ್ರಮವಲ್ಲ ಎಂದು ದೂರಿದರು.
ಶಾಲಾ ವಾರ್ಷಿಕೋತ್ಸವ ಸಮಾರಂಭಗಲ್ಲಿ ಶೇ.೬೦ ರಷ್ಟು ಕನ್ನಡ ಪದ ಬಳಕೆ ಮಾಡಲು ಕೂಡಲೇ ಆದೇಶಿಸಬೇಕು. ಇಲ್ಲವಾದಲ್ಲಿ ಆಯಾ ಶಾಲೆಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ನಾವೇ ನೇರವಾಗಿ ಪ್ರವೇಶಿಸಿ ಅಡಚಣೆ ಮಾಡುವುದು ಅನಿವಾರ್ಯವಾಗುತ್ತದೆ. ಮುಂದಾಗುವ ಅನಾಹುತಗಳಿಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳೆ ನೇರ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕರವೇ ತಾಲೂಕು ಘಟಕದ ಉಪಾಧ್ಯಕ್ಷ ನಾಗೇಂದ್ರ ದೊರೆ, ಸಂಚಾಲಕ ಮಲ್ಲಿಕಾರ್ಜುನ ರೊಡ್ಡರ, ವಿವಿಧ ಗ್ರಾಮ ಶಾಖೆಯ ಪದಾಧಿಕಾರಿಗಳಾದ ರಘುವೀರ ದೇಸಾಯಿ, ಶಿವು ಸಾಹುಕಾರ, ರಾಮುಲು ಬೇವಿನಾಳ, ಅಶೋಕ ನಾಯಕ, ಬಲಭೀಮ ಬಾದ್ಯಾಪುರ, ಮೌನೇಶ ಬಡಿಗೇರ, ಮಹಾರಾಜ ಹೆಮ್ಮಡಗಿ ಸೇರಿ ಇತರರಿದ್ದರು.

Leave a Reply

Your email address will not be published. Required fields are marked *

error: Content is protected !!