ಜಮೀನು ಮಂಜೂರು ಆದೇಶ ರದ್ದುಪಡಿಸಲು ಒತ್ತಾಯ | ಹೋರಾಟದಲ್ಲಿ ಎಚ್‌ಕೆಇ ಸಂಸ್ಥೆ ಅಧ್ಯಕ್ಷ, ಸದಸ್ಯರು ಭಾಗಿ, ಶ್ರೀ ಪ್ರಭು ಕಾಲೇಜು ಮೈದಾನ ವಿವಾದ : ಸುರಪುರ ಬಂದ್ ಯಶಸ್ವಿ
ಸುರಪುರ ಟೈಮ್ಸ್ ವಾರ್ತೆ
ಸುರಪುರ : ಜಮೀನು ಮಂಜೂರು ಆದೇಶ ರದ್ದುಪಡಿಸಬೇಕು ಮತ್ತು ಇತರೆ ಬೇಡಿಕೆಗಳಿಗೆ ಒತ್ತಾಯಿಸಿ ¸ಸಾಮೂಹಿಕ ಸಂಘಟನೆಗಳ ಒಕ್ಕೂಟ ಸೋಮವಾರ ಕರೆ ನೀಡಿದ್ದ ಸುರಪುರ ಬಂದ್ ಶಾಂತಿಯುತವಾಗಿ ಯಶಸ್ವಿಯಾಯಿತು. ಬಂದ್ ಹಿನ್ನೆಲೆಯಲ್ಲಿ ಅಂಗಡಿ-ಮುಗ್ಗಟ್ಟುಗಳು ಮುಚ್ಚಿದ್ದವು. ಬಸ್ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡಿದರು. ಬೆಳಗ್ಗೆ 9 ಗಂಟೆ ಆರಂಭವಾದ ಹೋರಾಟ ಸಂಜೆ 4 ಗಂಟೆ ವರೆಗೂ ನಡೆದು ಜನ ಜೀವನ ಅಸ್ತವ್ಯಸ್ತಗೊಂಡಿತು.
ಇಲ್ಲಿಯ ಮಹಾತ್ಮ ಗಾಂಧೀಜಿ ವೃತ್ತದಲ್ಲಿ ಸಮಾವೇಶಗೊಂಡಿದ್ದ ಅನೇಕ ಹೋರಾಟಗಾರರು ಮಾತನಾಡಿ, ಶ್ರೀ ಪ್ರಭು ಕಾಲೇಜು ಮೈದಾನದ ಸರ್ವೆ ನಂ. 7/1 ರಲ್ಲಿ 2 ಎಕರೆ 26 ಗುಂಟೆ ಪೈಕಿ ವಿಸ್ತೀರ್ಣದ ಜಮೀನು ಕುರಿತು ಜಿಲ್ಲಾಧಿಕಾರಿ ಆದೇಶ ಮಾಡಿದ್ದು ಅದು ಸಾರ್ವಜನಿಕರಿಗೆ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ಆಟಗಾರರಿಗೆ, ¸ರಕಾರಿ ಕಾರ್ಯಕ್ರಮಗಳಿಗೆ ತೊಂದರೆ ಮಾಡುವ ಆದೇಶವಾಗಿರುತ್ತದೆ ಎಂದು ಆರೋಪಿಸಿದರು.
ಸುಮಾರು 75 ವರ್ಷಗಳಿಂದ ಸದರಿ ಕಾಲೇಜು ಮೈದಾನವಿದ್ದು ಮತ್ತು ಅದಕ್ಕೆ ತಡೆಗೋಡೆ ನಿರ್ಮಾಣ ಮಾಡಿದ್ದು ಇರುತ್ತದೆ. ಜಿಲ್ಲಾಧಿಕಾರಿಗಳು ಕೆಲವರ ಒತ್ತಡಕ್ಕೆ ಮಣಿದು ಆದೇಶ ಮಾಡಿರುವದು ಸುರಪುರ ಸಾರ್ವಜನಿಕರಿಗೆ ನೋವುಂಟು ಮಾಡಿದೆ. ಈ ಆದೇಶವನ್ನು ಕೂಡಲೆ ಹಿಂಪಡೆದು ಯಥಾಸ್ಥಿತಿ ಸದರಿ ಕಾಲೇಜಿನ ಮೈದಾನವು ಮುಂದುವರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಮನವಿ ಪತ್ರ ಸ್ವೀಕರಿಸಲು ಅಪರ ಜಿಲ್ಲಾಧಿಕಾರಿ ರಮೇಶ್ ಕೋಲಾರ ಆಗಮಿಸಿದಾಗ ಶ್ರೀಪ್ರಭು ಕಾಲೇಜಿಗೆ ಸಂಬಂಧಿಸಿದ ಅಂಗಡಿಗಳಿಗೆ ಹಾಕಿರುವ ಬೀಗ ತಕ್ಷಣ ತೆಗೆಸಬೇಕು. ಶ್ರೀ ಪ್ರಭು ಕಾಲೇಜಿನ ಮೈದಾನದಲ್ಲಿ ಹಾಕಿರುವ ಧ್ವಜಗಳನ್ನು ತೆರವುಗೊಳಿಸಬೇಕು, ಅಂಬೇಡ್ಕರ್ ವೃತ್ತದಲ್ಲಿ ಹಾಕಿರುವ ಟೆಂಟ್‌ನ್ನು ತೆಗೆಸಬೇಕು ಎಂದು ಹೋರಾಟಗಾರರ ಬಿಗಿ ಪಟ್ಟು ಹಿಡಿದರು. ನಾಳೆಯೇ ಅಂಗಡಿಗಳ ಬೀಗ ತೆಗೆಯಲಾಗುವುದು. 2-3 ದಿನದಲ್ಲಿ ಪೊಲೀಸ್ ಬಂದೋಬಸ್ತ್ನಲ್ಲಿ ಪ್ರಭು ಕಾಲೇಜಿನ ಮೈದಾನದಲ್ಲಿರುವ ಧ್ವಜಗಳನ್ನು ತೆರವುಗೊಳಿಸಲಾಗುವುದು. ಜಮೀನು ಮಂಜೂರಾತಿ ಆದೇಶಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ ಮನವಿ ಪತ್ರವನ್ನು ಪ್ರಾದೇಶಿಕ ಆಯುಕ್ತರಿಗೆ ಕಳಿಸಿ ಕೊಡಲಾಗುವುದು ಎಂದು ಭರವಸೆ ನೀಡಿದರು. ಅಂಗಡಿಗಳ ಬೀಗ, ಟೆಂಟ್, ಧ್ವಜಗಳನ್ನು ತೆಗೆಸುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಪ್ರತಿಭಟನಾಕಾರರು ಹೋರಾಟ ಮುಂದುವರೆಸಿದರು. ತಹಸೀಲ್ದಾರ್ ಎಚ್.ಎ.ಸರಕವಾಸ್, ಪೌರಾಯುಕ್ತ ಬಸವರಾಜ ಟಣಕೇದಾರ್, ಡಿವೈಎಸ್‌ಪಿ ಜಾವೇದ್ ಇನಾಮದಾರ್ ಇದ್ದರು.
ಹೋರಾಟದಲ್ಲಿ ಪಾಲ್ಗೊಂಡವರು
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮತ್ತು ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ, ಎಚ್‌ಕೆಇ ಸಂಸ್ಥೆಯ ಉಪಾಧ್ಯಕ್ಷ ರಾಜಾ ಭೀಮಳ್ಳಿ, ಕಾರ್ಯದರ್ಶಿ ಉದಯಕುಮಾರ ಚಿಂಚೋಳಿ, ಆಡಳಿತ ಮಂಡಳಿ ಸದಸ್ಯರಾದ ನಾಗಣ್ಣ ಘಂಟಿ, ಅರುಣಕುಮಾರ ಮರಗೋಳ, ಶರಣಬಸಪ್ಪ ಹರವಾಳ, ಪ್ರಮುಖರಾದ ವೇಣುಗೋಪಾಲ ನಾಯಕ ಜೇವರ್ಗಿ, ಡಾ.ಸುರೇಶ್ ಸಜ್ಜನ್, ರಮೇಶ ದೊರೆ ಆಲ್ದಾಳ, ಭೀಮನಗೌಡ ಲಕ್ಷ್ಮೀ ಸೋಮಶೇಖರ ಶಾಬಾದಿ, ವೆಂಕಟೇಶ ನಾಯಕ ಬೈರಿಮಡ್ಡಿ, ಶಿವಮೋನಯ್ಯ ಎಲ್‌ಡಿ ನಾಯಕ, ವೆಂಕಟೇಶ ಬೇಟೆಗಾರ, ನಾಗರಾಜ ನಾಯಕ ಪ್ಯಾಪಲಿ, ಕಾಳಪ್ಪ ಕವಾತಿ, ವಿಜಯಕುಮಾರ ಚಿಟ್ಟಿ, ದತ್ತು ಎಸ್.ಗುತ್ತೇದಾರ್, ಉಸ್ತಾದ್ ವಜಾಹತ್ ಹುಸೇನ್, ಹಣಮಂತ ಕಟ್ಟಿಮನಿ, ದಾನಪ್ಪ ಕಡಿಮನಿ, ಡಾ.ಉಪೇಂದ್ರ ನಾಯಕ ಸುಬೇದಾರ್, ಲಕ್ಷ್ಮೀಕಾಂತ ದೇವರಗೋನಾಲ, ಅಶೋಕ ಕವಲಿ, ಭೀಮು ನಾಯಕ ಮಲ್ಲಿಬಾವಿ, ದೇವಿಂದ್ರಪ್ಪಗೌಡ ಮಾಲಿ ಪಾಟೀಲ್, ಗಂಗಾಧರ ನಾಯಕ ಅರಳಹಳ್ಳಿ, ನಿಂಗಪ್ಪ ನಾಯಕ ಬಿಜಾಸಪೂರ, ಚಂದ್ರಶೇಖರ ಎಲಿಗಾರ, ಮಲ್ಲೇಶಿ ನಾಗರಾಳ, ಮಲ್ಲಣ್ಣ ಸಾಹು ಜಾಲಿಬೆಂಚಿ, ದೇವಿಂದ್ರ ವಿಶ್ವಕರ್ಮ, ಬಸವರಾಜ ಹಾದಿಮನಿ, ಮಲ್ಲು ಹೊಸಮನಿ, ಧರ್ಮಣ್ಣ ಕುಪಗಲ್, ಆನಂದ ವಿಶ್ವಕರ್ಮ ವಸಂತಕುಮಾರ ಮಲ್ಲು ಹೂಗಾರ ರಮೇಶ ಡೊಳ್ಳಿ, ಭೈರಣ್ಣ ಅಂಬಿಗೇರ್, ವಿನಾಯಕ ಕರಡಕಲ್, ದೇವಿಂದ್ರಪ್ಪ ಅಜ್ಜಿಕೊಲ್ಲಿ, ಚಂದ್ರಶೇಖರ ಕಟ್ಟಿಮನಿ. ಹಣಮಂತ ಬಿಲ್ಲವ್, ಮಾನಪ್ಪ ಶಹಾಪುರಕರ್ ಸೇರಿದಂತೆ 51 ಸಂಘಟನೆಗಳ ಮುಖಂಡರು, ಶ್ರೀ ಪ್ರಭು ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹೋರಾಟದಲ್ಲಿ ಭಾಗವಹಿಸಿದ್ದರು.










