ಮಾತೋಶ್ರೀ ಪೀತಾಂಬರಮ್ಮ ನಿಧನಕ್ಕೆ ಸಂತಾಪ: ಏಕದಂಡಿಗಿ ಮಠಕ್ಕೆ ಸಚಿವ ದರ್ಶನಾಪೂರ ಭೇಟಿ
ಸುರಪುರ ಟೈಮ್ಸ್ ವಾರ್ತೆ
ಶಹಾಪುರ: ಕರ್ನಾಟಕ ರಾಜ್ಯದ ಸಣ್ಣ ಕೈಗಾರಿಕೆ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಶರಣಬಸಪ್ಪ ದರ್ಶನಾಪೂರ ಅವರು ಇಂದು ಶಹಾಪುರದ ವಿಶ್ವಕರ್ಮ ಏಕದಂಡಿಗಿ ಮಠಕ್ಕೆ ಭೇಟಿ ನೀಡಿ, ಇತ್ತೀಚೆಗೆ ವಿಧಿವಶರಾದ ಮಾತೋಶ್ರೀ ಪೀತಾಂಬರಮ್ಮ ಅವರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಸಲ್ಲಿಸಿದರು.
ಮಾತೋಶ್ರೀ ಪೀತಾಂಬರಮ್ಮ ಅವರ ಅಗಲಿಕೆಯಿಂದ ಸಮುದಾಯಕ್ಕೆ ಮತ್ತು ಶ್ರೀಮಠಕ್ಕೆ ಅಪಾರ ನಷ್ಟ ಉಂಟಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ ಸಚಿವರು, ಸಂಕಷ್ಟದ ಪರಿಸ್ಥಿತಿಯಲ್ಲಿಯೂ ಮಠವನ್ನು ಸಮರ್ಥವಾಗಿ ಮುನ್ನಡೆಸಿದ ಅವರ ಸರಳ ಹಾಗೂ ಸೇವಾಮಯ ಜೀವನ ಎಲ್ಲರಿಗೂ ಆದರ್ಶವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಸ್ತುತ ಪೀಠಾಧಿಪತಿಗಳಾದ ಅಜೇಂದ್ರಸ್ವಾಮಿಗಳು ಹಾಗೂ ಕಾಳಹಸ್ತೇಂದ್ರ ಸ್ವಾಮಿಗಳು ಮತ್ತು ಕುಟುಂಬ ಸದಸ್ಯರಿಗೆ ಸಚಿವರು ಸಾಂತ್ವನ ಹೇಳಿದರು. ಅವರ ದುಃಖದಲ್ಲಿ ಸರ್ಕಾರ ಹಾಗೂ ಸಮಾಜ ಜೊತೆಗಿದೆ ಎಂಬ ಭರವಸೆ ನೀಡಿದರು.

