ಬ್ರೇಕಿಂಗ್ ನ್ಯೂಸ್ |ಭೀಕರ ಅಪಘಾತಕ್ಕೆ  ಕುಟುಂಬದಲ್ಲಿ 7 ಬಲಿ|ಸಿರವಾರ ಪಟ್ಟಣ ಪಂಚಾಯತ್ ಸದಸ್ಯ ಕೃಷ್ಣ ನಾಯಕ ಹಾಗೂ ಕುಟುಂಬದ 7 ಮಂದಿ ಸಾವು | ಶಾಂತಪುರ ಕ್ರಾಸ್ ಬಳಿ ಕಾರು–ವಿಆರ್‌ಎಲ್ ಬಸ್ ಡಿಕ್ಕಿ, ಬೆಂಕಿಗೆ ಆಹುತಿ

ಸುರಪುರ ಟೈಮ್ಸ್ ವಾರ್ತೆ
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಶಾಂತಪುರ ಕ್ರಾಸ್ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ  ಕುಟುಂಬವೇ ದುರಂತ ಅಂತ್ಯ ಕಂಡಿದೆ.
ಸಿರವಾರ ಪಟ್ಟಣ ಪಂಚಾಯತ್ ಸದಸ್ಯ ಕೃಷ್ಣ ನಾಯಕ, ಅವರ ಮಗಳು, ಅಳಿಯ ಹಾಗೂ ಮೊಮ್ಮಕ್ಕಳು ಸೇರಿ ಒಟ್ಟು 7 ಮಂದಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕುಟುಂಬವು ಸುರಪುರದಲ್ಲಿರುವ ಮನೆ ದೇವರ ದರ್ಶನ ಪಡೆದು ವಾಪಸ್ಸು ಸಿರವಾರ ಕಡೆಗೆ ಪ್ರಯಾಣಿಸುತ್ತಿದ್ದಾಗ, ಮಧ್ಯೆ ಶಾಂತಪುರ ಕ್ರಾಸ್ ಬಳಿ ವಿಆರ್‌ಎಲ್ ಬಸ್ ಹಾಗೂ ಕಾರಿನ ನಡುವೆ ಭೀಕರ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ತೀವ್ರತೆಗೆ ಕಾರಿಗೆ ತಕ್ಷಣ ಬೆಂಕಿ ತಗುಲಿ, ಅದರಲ್ಲಿದ್ದ ಎಲ್ಲರೂ ಸಜೀವ ದಹನಗೊಂಡಿದ್ದಾರೆ.
ಅಪಘಾತದ ಬಳಿಕ ಬಸ್ ಮತ್ತು ಕಾರು ಎರಡೂ ಬೆಂಕಿಗೆ ಆಹುತಿಯಾಗಿ ಸಂಪೂರ್ಣ ಸುಟ್ಟು ಕರಕಲಾಗಿವೆ. ಸ್ಥಳೀಯರು, ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯ ನಡೆಸಿದರೂ, ಯಾರನ್ನೂ ಉಳಿಸಲು ಸಾಧ್ಯವಾಗಲಿಲ್ಲ.
ಈ ದುರಂತ ಘಟನೆ ಸ್ಥಳೀಯರಲ್ಲಿ ಶೋಕದ ವಾತಾವರಣ ನಿರ್ಮಾಣ ಮಾಡಿದ್ದು, ಸಾವಿನ ಸಂಖ್ಯೆ ಹಾಗೂ ಇತರ ವಿವರಗಳ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
.

Leave a Reply

Your email address will not be published. Required fields are marked *

error: Content is protected !!