ಕಾಶ್ಮೀರ ಉಗ್ರರ ದಾಳಿ ಖಂಡನೀಯ; ಡಾ.ಸುರೇಶ ಸಜ್ಜನ

ಸುರಪುರ ಟೈಮ್ಸ್ ವಾರ್ತೆ
ಸುರಪುರ: ಜಮ್ಮು-ಕಾಶ್ಮೀರಕ್ಕೆ ಪ್ರವಾಸಕ್ಕೆಂದು ದೇಶದ ನಾನಾ ಭಾಗಗಳಿಂದ ತೆರಳಿದ ಪ್ರವಾಸಿಗರ ಮೇಲೆ ಪಹಲ್ಗಾವ್‌ನಲ್ಲಿ ಪಾಕ್ ಪ್ರಚೋದಿತ ಉಗ್ರ ಸಂಘಟನೆಗಳ ಉಗ್ರರು ದಾಳಿ ಮಾಡಿ 28 ಜನರು ಸಾವನ್ನಪ್ಪಿರುವ ಘಟನೆ ಎಲ್ಲರಿಗೂ ತೀವ್ರ ನೋವುಂಟು ಮಾಡಿದೆ. ನಾವೂ ಇದನ್ನು ಖಂಡಿಸುತ್ತೇವೆ, ಕೇಂದ್ರ ಸರ್ಕಾರ ಉಗ್ರರ ಮಟ್ಟ ಹಾಕಲು ಕೈಗೊಳ್ಳುವ ತೀರ್ಮಾನಕ್ಕೆ ನಮ್ಮ ಬೆಂಬಲವಿದೆ ಎಂದು ತಾಲೂಕು ವೀರಶೈವ ಲಿಂಗಾಯತ ಸಮಿತಿ ಅಧ್ಯಕ್ಷ ಡಾ. ಸುರೇಶ ಸಜ್ಜನ ತಿಳಿಸಿದ್ದಾರೆ,
ಅವರು ತಹಸೀಲ್ದಾರ ಕಚೇರಿಯಲ್ಲಿ ತಾಲೂಕು ವೀರಶೈವ ಲಿಂಗಾಯತ ಸಮಿತಿ ವತಿಯಿಂದ ತಹಸೀಲ್ದಾರ ಮೂಲಕ ಕೇಂದ್ರ ಗೃಹ ಸಚಿವಾಲಯ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು ಪಾಕ್ ಉಗ್ರರು ದೇಶದಲ್ಲಿ ಶಾಂತಿ ಕದಡುವ ದೃಷ್ಟಿಯಿಂದ ಪ್ರವಾಸಿಗರ ಜೊತೆ ವಿಕೃತವಾಗಿ ವರ್ತಿಸಿ, ಅವರನ್ನು ಕೊಲೆ ಮಾಡಿರುವುದು ಅಮಾನವೀಯ ಕೃತ್ಯ, ಕೇಂದ್ರ ಸರ್ಕಾರವೂ ಜಮ್ಮು ಕಾಶ್ಮೀರದಲ್ಲಿ ಭದ್ರತೆಯನ್ನು ಹೆಚ್ಚಿಸಿ ಉಗ್ರರಿಗೆ ಸಹಕಾರ
ನೀಡುತ್ತಿರುವ ವ್ಯಕ್ತಿಗಳಿಗೆ ಕೂಡ ಶಿಕ್ಷೆ ನೀಡಬೇಕು, ಅಂದಾಗ ಮಾತ್ರ ಅವರ ಚಟುವಟಿಕೆಗಳು ನಿಯಂತ್ರಣಗೊಳ್ಳುತ್ತವೆ ಎಂದು ಹೇಳಿದ್ದಾರೆ.
ಇಂದು ವಿಶ್ವದಲ್ಲಿ ಪಾಕಿಸ್ತಾನ ದೇಶ ಆರ್ಥಿಕವಾಗಿ ದಿವಾಳಿಯಾಗಿದೆ, ಅವರಿಗೆ ಮೊದಲಿನಿಂದ ಮುಸ್ಲಿಂ ರಾಷ್ಟ್ರಗಳು ನೀಡುತ್ತಿರುವ ಆರ್ಥಿಕ ಸಹಾಯ ಸಹಕಾರ ಕೂಡ ಸ್ಥಗೀತಗೊಳಿಸಿವೆ, ಭಾರದಲ್ಲಿ ಎಲ್ಲಾ ವರ್ಗದ ಜನರು ಶಾಂತಿ-ಸಾಮರಸ್ಯದಿಂದ ಬಾಳುತ್ತಿದ್ದಾರೆ, ಇಲ್ಲಿ ಜಾತಿಗಳ ಮದ್ಯೆ ದ್ವೇಷ ಹುಟ್ಟಿಸಲು ಕಾಶ್ಮೀರ ಸಮಸ್ಯೆಯನ್ನು ಪದೇ ಪದೇ ಪಾಕಿಸ್ತಾನ ಪ್ರಸ್ಥಾಪಿಸುತ್ತಾ ಉಗ್ರ ಸಂಘಟನೆಗಳಿಗೆ ಬೆಂಬಲ ನೀಡಿ, ಗಡಿ ಭಾಗದ ರಾಜ್ಯಗಳ ಪ್ರದೇಶಗಳಲ್ಲಿ ಭಾರತೀಯರ ಮೇಲೆ ದಾಳಿ ಮಾಡಿಸುತ್ತಿದೆ, ಇದನ್ನು ಇಡೀ ವಿಶ್ವವೇ ಗಂಭೀರವಾಗಿ ಪರಿಗಣಿಸಿದೆ, ಬರುವ ದಿನಗಳಲ್ಲಿ ಪಾಕಿಸ್ತಾನ ಬಹಳಷ್ಟು ನಷ್ಟ ಅನುಭವಿಸಲಿದೆ. ಇಲ್ಲಿಗೆ ಅವರ ಉಗ್ರ ಚಟುವಟಿಕೆಗಳು ನಿಲ್ಲಿಸಬೇಕೆಂದು ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಮಸ್ತ ವಿರೇಶ್ವವ ಲಿಂಗಾಯತ ಸಮಾಜದ ಮುಖಂಡರು ಉಪಸ್ಥಿತರಿದ್ದರು.

