ನಾಳೆ ಸತೀಶ ಜಾರಕಿಹೊಳೆ ಅಭಿಮಾನಿಗಳ ಬಳಗದ ವತಿಯಿಂದ 3ನೇ ವರ್ಷದ ಸರಳ ಸಾಮೂಹಿಕ ವಿವಾಹ
ಸುರಪುರ ಟೈಮ್ಸ್ ವಾರ್ತೆ
ಸುರಪುರ : ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್‌ರವರ 134ನೇ ಜಯಂತ್ಯುತ್ಸವ ನಿಮಿತ್ತ ಶ್ರೀ ಸತೀಶ ಜಾರಕಿಹೊಳೆ ಅಭಿಮಾನಿಗಳ ಬಳಗದ ವತಿಯಿಂದ 3ನೇ ವರ್ಷದ ಸರಳ ಸಾಮೂಹಿಕ ವಿವಾಹ ಏ.೨೭ ಭಾನುವಾರ ಮಧ್ಯಾಹ್ನ 12.30 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಬಳಗದ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಕಟ್ಟಿಮನಿ ಮತ್ತು ಅಧ್ಯಕ್ಷ ಸಾಹೇಬಗೌಡ ಟಣಕೆದಾರ ವಾಗಣಗೇರಾ ತಿಳಿಸಿದರು.
ಇಲ್ಲಿಯ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮೀಪದ ಕುಂಬಾರಪೇಟೆಯ ಎನ್.ಯು.ಕಲ್ಯಾಣ ಮಂಟಪದಲ್ಲಿ ಆಯೋಜಿಸಿರುವ ಸರಳ ಸಾಮೂಹಿಕ ವಿವಾಹ ಮಹೋತ್ಸವದ ಸಾನ್ನಿಧ್ಯವನ್ನು ಪೂಜ್ಯ ನೌಪಾಲ ಬಂತೇಜಿ ವಹಿಸುವರು. ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಪುಷ್ಪಾರ್ಚನೆ ಮಾಡುವರು. ಶಾಸಕ ರಾಜಾ ವೇಣುಗೋಪಾಲ ನಾಯಕ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಮಾಜಿ ಸಚಿವ ರಾಜುಗೌಡ, ಜಿಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ (ತಾತಾ), ಕಾಂಗ್ರೆಸ್ ಮುಖಂಡ ರವಿ ಪಾಟೀಲ್ ರಾಯಚೂರು, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಠ್ಠಲ ಯಾದವ ಘನ ಉಪಸ್ಥಿತಿ. ಬೆಂಗಳೂರಿನ ಹೈಕೋರ್ಟ್ ವಕೀಲರಾದ ಅನಂತ ನಾಯಕ, ಮಾನವ ಬಂಧುತ್ವ ವೇದಿಕೆ ಬೆಳಗಾವಿ ವಿಭಾಗೀಯ ಸಂಚಾಲಕ ತೋಳಿ ಭರಮಣ್ಣ ಮುಖ್ಯ ಭಾಷಣಕಾರರಾಗಿರುತ್ತಾರೆ ಎಂದರು.
ಬಿಜೆಪಿ ಮುಖಂಡ ಶಂಕರ ನಾಯಕ, ಯೂಥ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ, ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಡಾ.ಭೀಮಣ್ಣ ಮೇಟಿ, ಪ್ರಥಮ ದರ್ಜೆ ಗುತ್ತಿಗೆದಾರ ಬಿ.ಎಂ.ಅಳ್ಳಿಕೋಟಿ, ಹುಣಸಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ, ಪ್ರಮುಖರಾದ ಹಣಮಗೌಡ ಮರ್ಕಲ್, ದುರ್ಗಪ್ಪ ಗೋಗಿಕೇರಾ, ಶರಣಪ್ಪ ಗುಳಬಾಳ, ಸೋಮನಾಥ ಡೊಣ್ಣಿಗೇರಾ, ಅಕ್ಷಯ ಸುರೇಶ ವೀರಮುಖ, ವಿಜಯ ತಳವಾರ.
ಭೀಮಣ್ಣ ಬೇವಿನಾಳ, ನದೀಮುಲ್ಲಾ ಹುಸೇನ್ ಇನಾಮದಾರ್, ಯಲ್ಲಪ್ಪ ನಾಯಕ ಮಲ್ಲಿಬಾವಿ, ದಾವುದ್ ಮೆಡಿಕಲ್, ಶರಣು ಕಲಬುರಗಿ, ಕನಕಪ್ಪ ಶೇತಸಿಂಧಿ, ಹಣಮಂತ ಸಿಂಗೆ ಮುಖ್ಯ ಅತಿಥಿಗಳಾಗಿರುತ್ತಾರೆ. ಶರಣಗೌಡ ನಾಗನಗೌಡ ಪಾಟೀಲ್ ಸೂಗೂರು, ಚಾಂದ ಪಾಷಾ ಮುಜೇವಾರ ಕುಂಬಾರಪೇಟೆ, ಪ್ರತಾಪ ನಾಯಕ ಡೊಣ್ಣಿಗೇರೆ ವಿಶೇಷ ಸನ್ಮಾನಿತರಾಗಿರುತ್ತಾರೆ ಎಂದು ತಿಳಿಸಿದರು. ಮುಖಂಡರಾದ ಇಮಾಮಸಾಬ್ ಅರಕೇರಿ ವಾಗಣಗೇರಾ, ಮಲ್ಲಪ್ಪ ದೊಡ್ಡಮನಿ ತಳವಾರಗೇರಾ, ಶರಣು ಕೋಗಿಲೆ ವಾಗಣಗೇರಾ, ಶೇಖ್ ಅಹ್ಮದ್ ಇದ್ದರು.
ಬಾಕ್ಸ್
18 ಜೋಡಿಗಳ ವಿವಾಹ
3ನೇ ವರ್ಷದ ಸರಳ ಸಾಮೂಹಿಕ ವಿವಾಹದಲ್ಲಿ ಬೌದ್ಧ ಧರ್ಮದ ಪ್ರಕಾರ 18 ಜೋಡಿಗಳ ವಿವಾಹ ಜರುಗಲಿದೆ. ಪ್ರತಿ ಜೋಡಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ೫೦ ಸಾವಿರ ಮತ್ತು ಅಂತರಜಾತಿ ವಿವಾಹಕ್ಕೆ 3.50 ಲಕ್ಷ ಪ್ರೋತ್ಸಾಹ ಧನ ಕೊಡಿಸಲಾಗುವುದು. ಸಾಮೂಹಿಕ ವಿವಾಹ ಆಯೋಜಿಸುವದರ ಮೂಲಕ ಬಾಬಾ ಸಾಹೇಬರ ಜಯಂತಿ ಅರ್ಥಪೂರ್ಣವಾಗಿ ಆಚರಿಸಲು ಸತೀಶ ಜಾರಕಿಹೊಳಿ ಅಭಿಮಾನಿಗಳ ಬಳಗ ನಿರ್ಧರಿಸಿದೆ ಎಂದು ಬಳಗದ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಕಟ್ಟಿಮನಿ ವಿವರಿಸಿದರು.




