ಸುರಪುರ ತಹಸಿಲ್‌ನಲ್ಲಿ ಜಯಂತಿ ಪೂರ್ವಭಾವಿ ಸಭೆಆದಿ ಗುರು ಶಂಕರಾಚಾರ್ಯರ ಜಯಂತಿ ಮೇ.2ಕ್ಕೆ
ಸುರಪುರ ಟೈಮ್ಸ್ ವಾರ್ತೆ
ಸುರಪುರ : ಮೇ.2 ರಂದು ಆದಿ ಗುರು ಶ್ರೀ ಶಂಕರಾಚಾರ್ಯ ಅವರ ಜಯಂತಿಯನ್ನು ಶ್ರದ್ಧಾ-ಭಕ್ತಿಯೊಂದಿಗೆ ಆಚರಿಸಲಾಗುವುದು ಎಂದು ಗ್ರೇಡ್-೨ ತಹಸೀಲ್ದಾರ್ ಮಲ್ಲಯ್ಯ ದಂಡು ಹೇಳಿದರು.
ಇಲ್ಲಿಯ ಮಿನಿ ವಿಧಾನಸೌಧ ಆವರಣದ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಯಂತಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂದು ಬೆಳಗ್ಗೆ 8 ಗಂಟೆಗೆ ಎಲ್ಲ ಸರಕಾರಿ ಕಚೇರಿ, ಶಾಲಾ-ಕಾಲೇಜುಗಳಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಡ್ಡಾಯವಾಗಿ ಜಯಂತಿ ಆಚರಿಸಬೇಕು ಎಂದರು.
ನಂತರ ಬೆಳಗ್ಗೆ 10 ಗಂಟೆಗೆ ತಹಸಿಲ್ ಕಚೇರಿಯ ಸಭಾಂಗಣದಲ್ಲಿ ತಾಲೂಕಾಡಳಿತದ ವತಿಯಿಂದ ಜಯಂತಿ ಆಚರಿಸಲಾಗುವುದು. ಆದಿ ಗುರು ಶ್ರೀ ಶಂಕರಾಚಾರ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಗುವುದು. ಬಳಿಕ ಅವರ ಕುರಿತು ಉಪನ್ಯಾಸ ಜರುಗಲಿದೆ. ಎಲ್ಲಾ ಇಲಾಖೆಗಳ ಅನುಷ್ಟಾನ ಅಧಿಕಾರಿಗಳು ಜಯಂತಿಯಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಆರ್‌ಡಬ್ಲೂö್ಯಎಸ್ ಎಇಇ ಹಣಮಂತ್ರಾಯ ಪಾಟೀಲ್, ಉಪ ನೋಂದಣಾಧಿಕಾರಿ ಗುರುರಾಜ್ ಸಜ್ಜನ್ ಸೇರಿ ಇತರೆ ಇಲಾಖೆಗಳ ಅಧಿಕಾರಿಗಳು, ಸಮಾಜದ ಪ್ರಮುಖರಾದ ಕೇದರನಾಥ ಶಾಸ್ತ್ರೀ ಯಾಳಗಿ, ದೇವಿದಾಸ್ ಭಟ್ಟ ಕನಕಗಿರಿ, ಪ್ರಶಾಂತ ಪೂರೋಹಿತ ರಾಮ ಮಂದಿರ, ವೈ. ಪ್ರಭಂಜನ್, ವೈ.ನಾಗರಾಜ್, ಶ್ರೀನಿವಾಸ ಕುಲಕರ್ಣಿ, ಶ್ರೀಕರಭಟ್ಟ ಜೋಶಿ, ರಮೇಶ ಕುಲಕರ್ಣಿ ಗೆದ್ದಲಮರಿ, ಉಮಾಶಂಕರ ದಿಕ್ಷೀತ್ ಇತರರಿದ್ದರು.

