ಯಾದಗಿರಿ ಜಿಲ್ಲಾ ಟಾಪರ್ ವರುಣ ದರಬಾರಿಗೆ ಸನ್ಮಾನ

ಸುರಪುರ ಟೈಮ್ಸ್ ವಾರ್ತೆ
ಸುರಪುರ: ತಾಲೂಕಿನ ಕವಡಿಮಟ್ಟಿಯ ಅಕ್ಷರ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ವರುಣ ಆನಂದ ದರಬಾರಿ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು 622 (ಶೇ.99.56) ಅಂಕಗಳನ್ನು ಪಡೆದು ಯಾದಗಿರಿ ಜಿಲ್ಲೆಗೆ ಟಾಪರ್ ಆಗಿರುತ್ತಾನೆ.
ಕನ್ನಡ, ಹಿಂದಿ, ಗಣಿತ ,ವಿಜ್ಞಾನ ಹಾಗೂ ಸಮಾಜ ವಿಜ್ಞಾನ ವಿಷಯಗಳಲ್ಲಿ 100 ಕ್ಕೆ 100 ಅಂಕಗಳನ್ನು ಪಡೆಯುವುದರ ಮೂಲಕ ಜಿಲ್ಲೆಯ ಗಮನ ಸೆಳೆದಿದ್ದಾನೆ. ಇಂಗ್ಲಿಷ್ ನಲ್ಲಿ 125 ಕ್ಕೆ 122 ಅಂಕಗಳನ್ನು ಪಡೆದಿರುತ್ತಾನೆ.
ಸನ್ಮಾನ : ವರಣ ಆನಂದ ದರಬಾರಿ ನಿವಾಸಕ್ಕೆ ವರಣ ತಂದೆಯ ಗೆಳೆಯರು ತೆರಳಿ ವರುಣ ದರಬಾರಿಗೆ ಸನ್ಮಾನಿಸಿ ಗೌರವಿಸಿದರು.
ನಮ್ಮ ಆತ್ಮೀಯ ಗೆಳೆಯನ ಸುಪುತ್ರ ಅತಿ ಹೆಚ್ಚು ಅಂಕಗಳನ್ನು ಪಡೆದು ಶಾಲೆಗೂ, ಪಾಲಕರಿಗೂ, ತಾಲೂಕಿಗೆ ಕೀರ್ತಿ ತಂದಿರುವುದು ಹೆಮ್ಮಯ ವಿಷಯ ಎಂದು ಸಂತಸ ವ್ಯಕ್ತಪಡಿಸಿದರು.
ಪುರಸಭೆ ಮಾಜಿ ಸದಸ್ಯ ರಾಜಾ ರಾಮಪ್ಪ ನಾಯಕ (ಜೆಜಿ), ಭಾರತೀಯ ದಲಿತ ಪ್ಯಾಂಥರ್ ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ ಹೊಸ್ಮನಿ, ಪ್ರಮುಖರಾದ ಮರೆಪ್ಪ ಡೊಣ್ಣಿಗೇರಾ, ವಿರೇಶ ನಿಷ್ಠಿ ದೇಶಮುಖ,
ರಮೇಶ ಕುಲಕರ್ಣಿ, ಶ್ರೀನಿವಾಸ ಪ್ರತಿನಿಧಿ ಇದ್ದರು.
