ಶರಣಬಸವೇಶ್ವರ ಪ್ರೌಢಶಾಲೆಗೆ ಉತ್ತಮ ಫಲಿತಾಂಶ

ಸುರಪುರ ಟೈಮ್ಸ್ ವಾರ್ತೆ

ಸುರಪುರ : ನಗರದ ಶರಣಬಸವೇಶ್ವರ ಪ್ರೌಢಶಾಲೆ ಹಸನಾಪುರದ ಪ್ರೌಢಶಾಲೆಯ ವಿದ್ಯಾರ್ಥಿಗಳು 2024-25 ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದು ವಿದ್ಯಾ ಸಂಸ್ಥೆಗೆ ಮತ್ತು ಪೋಷಕರಿಗೆ ಕೀರ್ತಿ ತಂದಿದ್ದಾರೆ.ಪರೀಕ್ಷೆಗೆ ಹಾಜರಾದ ಒಟ್ಟು 45 ವಿದ್ಯಾರ್ಥಿಗಳಲ್ಲಿ ಅಗ್ರಶ್ರೇಣಿಯಲ್ಲಿ-14, ಪ್ರಥಮ ಸ್ಥಾನ-14, ದ್ವಿತೀಯ ಸ್ಥಾನ-03 ಬಂದಿರುತ್ತವೆ. ಅನಸುಯಾ (ಶೇ.97.92), ತನುಶ್ರೀ (ಶೇ.94.56), ಎಂಡಿ ಅಬುಬಕರ ಸಿದ್ದಿಕ್ (ಶೇ.94.4), ಅಫ್ರೀನ್ ಬೇಗಂ (ಶೇ.94.24), ಕು.ಗುಣಶ್ರೀ (5.93.28), ಮಹಮ್ಮದ್ ಪೈಸಲ್ (ಶೇ.91.68), ಮುದಾಸಿರ್ ಹುಸೇನ್ (ಶೇ.91.68), ಮಯೂರ್ ಕಟ್ಟಿಮನಿ (ಶೇ.91.02), ಸಕ್ಷಮ್ (ಶೇ.88.48), ಸುಮಧ್ವ (ಶೇ.88.32), ಪವನಕುಮಾರ ಯಾದವ (ಶೇ.87.04), ನೀತಾ ಟೋಣಪೆ (ಶೇ.86.08), ಸೋಹಮ (ಶೇ.85.92), ಅನುಷಾ(85.44) ಅಂಕ ಪಡೆದಿದ್ದಾರೆ.

ಪೂಜ್ಯರು ಹರ್ಷ: ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಪೂಜ್ಯ ಡಾ.ಶರಣಬಸಪ್ಪ ಅಪ್ಪಾ, ಉಪಾಧ್ಯಾಕ್ಷರಾದ ಪೂಜ್ಯ ನೀಲಮ್ಮ ತಾಯಿ ವಿ. ನಿಷ್ಕ್ರಿ ಹರ್ಷ ವ್ಯಕ್ತಪಡಿಸಿದ್ದಾರೆ. ಕಾರ್ಯದರ್ಶಿ ಶರಣಬಸವಪ್ಪ ವಿ. ನಿಷ್ಠೆ, ಜಂಟಿ ಕಾರ್ಯದರ್ಶಿ ದೊಡ್ಡಪ್ಪ ಎಸ್.ನಿಷ್ಠಿ, ಪ್ರಾಂಶುಪಾಲರು ಹಾಗೂ ಬೋಧಕ ಮತ್ತು ಬೋಧಕೇತರ ವರ್ಗದವರು ಸಂತಸ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!