ಎಸೆಸೆಲ್ಸಿ ಪರೀಕ್ಷೆ : ಅಕ್ಷರ ಪಬ್ಲಿಕ್ ಶಾಲೆಗೆ ಉತ್ತಮ ಫಲಿತಾಂಶ

ಸುರಪುರ ಟೈಮ್ಸ್ ವಾರ್ತೆ
ಸುರಪುರ : ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿನ ಕವಡಿಮಟ್ಟಿಯ ಅಕ್ಷರ ಪಬ್ಲಿಕ್ ಶಾಲೆಗೆ ಉತ್ತಮ ಫಲಿತಾಂಶ ಬಂದಿದ್ದು, ಪರೀಕ್ಷೆಗೆ ಬರೆದ 31 ವಿದ್ಯಾರ್ಥಿಗಳ ಪೈಕಿ 20 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ(ಡಿಸ್ಟಿಂಕ್ಷನ್) ಉತ್ತೀರ್ಣಗೊಂಡಿದ್ದು, 8 ವಿದ್ಯಾರ್ಥಿಗಳು ಪ್ರಥಮ ದರ್ಜೆ ಹಾಗೂ 2 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ.
ಶಾಲೆಯ ವಿದ್ಯಾರ್ಥಿಯಾದ ವರುಣ ಆನಂದ ದರಬಾರಿ ಶೇ.98.52(622) ಅಂಕಗಳನ್ನು ಪಡೆದು ಜಿಲ್ಲೆಗೆ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ.
ವಿದ್ಯಾರ್ಥಿಗಳಾದ ಪ್ರಿನ್ಸಕುಮಾರ-ಶೇ.98.88(618), ಆರ್.ಅಮೂಲ್ಯ-ಶೇ.98.88(618), ಶ್ರೇಯಾ ಶೇ.98.56(616), ಪೃಥ್ವಿ ಸಾತಿಹಾಳ ಶೇ.98.4(615), ವರ್ಧಿನಿ ಶೇ.98.4(615), ವಿನಯ ಪುರಾಣಿಕಮಠ ಶೇ.97.12(607), ಬೀರಲಿಂಗ ಶೇ.96.8(605), ಅಂಕಿತಾ ಶೇ.95.84(599), ಐಶ್ವರ್ಯ ಶೇ.95.68(598), ನುಸರಂಜ್ ಹಬೀಬ ಉರ್ ರಹೇಮಾನ ಶೇ.95.68(598), ನಾಗರಾಜು ಶೇ.95.36(596), ಆದಿತ್ಯ ಡಿ.ಕುಲಕರ್ಣಿ ಶೇ.94.4(590), ಕಾವೇರಿ ಶೇ.94.4(590), ವಂಶಿಕಾ ಶೇ.94.24(589), ಜಿ.ತರುಣಕುಮಾರ ಶೇ.92.64(579), ಎಸ್.ಶರಣ್ಯ ಶೇ.89.12(557), ದಿವ್ಯಪ್ರಸನ್ನ ಶೇ.87.04(544), ಕಲಶ್ ಜೈನ ಶೇ.85.92(537) ಹಾಗೂ ಪ್ರಾಚಿ ಶೇ.85.12(532) ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಮುಖ್ಯಸ್ಥರು ಹಾಗೂ ಶಿಕ್ಷಕ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
ಸುರಪುರ ತಾಲೂಕಿಗೆ ಶೇ.46.07 ಫಲಿತಾಂಶ
ಈ ಸಾಲಿನ ಎಸೆಸೆಲ್ಸಿ ಫಲಿತಾಂಶ ಶುಕ್ರವಾರದಂದು ಪ್ರಕಟವಾಗಿದ್ದು, ಈ ಬಾರಿ ತಾಲೂಕಿಗೆ ಶೇ.47.15 ರಷ್ಟು ಫಲಿತಾಂಶ ಬಂದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಸತೀಶ್ ತಿಳಿಸಿದ್ದಾರೆ.
ಈ ಸಾಲಿನ ಪರೀಕ್ಷೆಯಲ್ಲಿ ಒಟ್ಟು 4,834 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 2,279 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಹೇಳಿದ್ದಾರೆ.
ಮಲ್ಲಾ ಬಿ.ಗ್ರಾಮದ ಒಂದು ಖಾಸಗಿ ಶಾಲೆಯಲ್ಲಿ ಶೂನ್ಯ ಫಲಿತಾಂಶ ಬಂದಿದೆ ಎಂದು ಹೇಳಲಾಗಿದೆ.
