ಇಂದಿನಿಂದ ವೀರಪ್ಪ ನಿಷ್ಠಿ ಎಂಜನಿಯರಿಂಗ್ ಕಾಲೇಜಿನಲ್ಲಿ  ಜ್ಞಾನಮಂಥನ ಉತ್ಸವ

ಸುರಪುರ ಟೈಮ್ಸ್ ವಾರ್ತೆ

‌ಸುರಪುರ : ಇಲ್ಲಿಯ ವೀರಪ್ಪ ನಿಷ್ಕ್ರಿ ಎಂಜನಿಯರಿಂಗ್ ಕಾಲೇಜಿನಲ್ಲಿ ಇಂದು ಮತ್ತು ನಾಳೆ ಭಾನುವಾರ ಜ್ಞಾನ ಮಂಥನ ಉತ್ಸವ-2025 ಏರ್ಪಡಿಸಲಾಗಿದ್ದು ಎರಡು ದಿನಗಳವರೆಗೆ ತಾಂತ್ರಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ಜರುಗಲಿವೆ ಎಂದು ವೀರಪ್ಪ ನಿಷ್ಕ್ರಿ ಎಂಜನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಶರಣಬಸಪ್ಪ ಸಾಲಿ ತಿಳಿಸಿದರು. ಇಲ್ಲಿಯ ಪತ್ರಿಕಾ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜ್ಞಾನ ಮಂಥನ-2025 ಕಾರ್ಯಕ್ರಮವು ಸಂಭ್ರಮೋಲ್ಲಾಸಗಳೊಂದಿಗೆ ಆಯೋಜಿಸಲಾಗಿದ್ದು ಕಾರ್ಯಕ್ರಮದ ಯಶಸ್ಸಿಗೆ ಎಲ್ಲಾ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.

ಇಂದು ಶನಿವಾರ ಬೆಳಗ್ಗೆ 11 ಗಂಟೆಗೆ ಜ್ಞಾನ ಮಂಥನ ಕಾರ್ಯಕ್ರಮದ ಉದ್ಘಾಟನೆ ಜರುಗಲಿದೆ. ಕಲಬುರಗಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರು, ವಿದ್ಯಾಭಂಡಾರಿ ಪೂಜ್ಯ ಡಾ.ಶರಣಬಸಪ್ಪ ಅಪ್ಪಾ, ಮಾತೋಶ್ರೀ ಡಾ.ದಾಕ್ಷಾಯಿಣಿ ಎಸ್.ಅಪ್ಪಾ, ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪಾ ಸಾನ್ನಿಧ್ಯ ವಹಿಸಲಿದ್ದಾರೆ.

ವೀರಪ್ಪ ನಿಷ್ಕ್ರಿ ಎಂಜನಿಯರಿಂಗ್ ಕಾಲೇಜಿನ ಉಪಾಧ್ಯಕ್ಷೆ ನೀಲಮ್ಮ ತಾಯಿ ವಿ, ನಿಷ್ಠಿ ಮುಖ್ಯ ಪೋಷಕರಾಗಿರುತ್ತಾರೆ. ಶರಣಬಸವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ವೀರಪ್ಪ ನಿಷ್ಠಿ ఎంజనియరింగా ಕಾಲೇಜಿನ ಕಾರ್ಯದರ್ಶಿ ಡಾ.ಶಾಂತಲಾ ಎಸ್.ನಿಷ್ಕ್ರಿ, ಜಂಟಿ ಕಾರ್ಯದರ್ಶಿ ದೊಡ್ಡಪ್ಪ ಎಸ್.ನಿಷ್ಕ್ರಿ ಅವರು ಪೋಷಕರಾಗಿರುತ್ತಾರೆ ಎಂದು ಹೇಳಿದರು. ಕಲಬುರಗಿಯ ವಿಟಿ ಆರ್‌ಒ ಪ್ರಾದೇಶಿಕ ನಿರ್ದೇಶಕ ಡಾ.ಬಿ.ಶಂಭು ಲಿಂಗಪ್ಪ, ಬೆಂಗಳೂರಿನ ಕ್ಯಾಡಮ್ಯಾಕ್ಸ್ ಸೋಲೆನ್ಸ್ ಪ್ರೈವೇಟ್ ಲಿಮಿಡಟ್‌ನ ಚೇರಮನ್’ ಹಾಗೂ ವ್ಯವಸ್ಥಾಪಕ

ನಿರ್ದೇಶಕರಾದ ಅರುಣಕುಮಾರ ಪಾಟೀಲ್ ಮತ್ತು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ಗುತ್ತೇದಾರ್ ಮುಖ್ಯ ಅತಿಥಿಗಳಾಗಿರುತ್ತಾರೆ. ಮೇ.25 ರಂದು ಸಂಜೆ 6 ಗಂಟೆಯ ಕಾರ್ಯಕ್ರಮದಲ್ಲಿ ಕಲಬುರಗಿಯ ಹಿರಿಯ ನ್ಯಾಯವಾದಿ ಶರಣಬಸಪ್ಪ ವಿ.ನಿಷ್ಠಿ, ಸುರಪುರ ಪೊಲೀಸ್ ಉಪ ವಿಭಾಗದ ಡಿವೈಎಸ್‌ಪಿ ಜಾವೇದ್ ಇನಾಮದಾರ್, ಸಿಪಿಐ ಎಂ.ಉಮೇಶ್, ಪಿಎಸ್‌ಐ ಕೃಷ್ಣಾ ಸುಬೇದಾ‌ರ್ ಮುಖ್ಯ ಅತಿಥಿಗಳಾಗಿರುತ್ತಾರೆ.

ಬೆಂಗಳೂರಿನ ಕೆಡಿಇಎಂ ಲೀಡ್ ಮ್ಯಾನೇಜರ್ ಸುವಿನ್ ನಾರಾಯಣ ಮತ್ತು ಕಲಬುರಗಿಯ ಕಾಮೆಡ್ಕರ್ಸ್ ಇನ್ನೋವೇಷನ್ ಹಬ್‌ನ ಕೇಂದ್ರ ವ್ಯವಸ್ಥಾಪಕ ಸಂದೀಪ್ ಸ್ಯಾಟ್ಸನ್ ಗೌರವ ಅತಿಥಿಗಳಾಗಿರುತ್ತಾರೆ. ಕಲ್ಯಾಣ ಕರ್ನಾಟಕದ ವಿವಿಧ ಎಂಜನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ. ಭಾನುವಾರದ ಜ್ಞಾನ ಮಂಥನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜೀ ಕನ್ನಡ ವಾಹಿನಿಯ ಖ್ಯಾತ ಸರಿಗಮಪ ಸಂಗೀತ ಕಾರ್ಯಕ್ರಮದ ಸ್ಪರ್ಧಿಗಳಾದ ಗಾಯಕಿ ಸುಹನಾ ಸೈಯದ್ ಮತ್ತು ಚನ್ನಪ್ಪ ಹುದ್ದಾರ ಭಾಗವಹಿಸಲಿದ್ದು ತಮ್ಮ ಸಮುಧುರ ಗಾಯನದಿಂದ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ವಿವಿಧ ವಿಭಾಗದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಚುಟುವಟಿಕೆಗಳು ನೆರವೇರಲಿವೆ ಎಂದು ವಿವರಿಸಿದರು. ಕಾಲೇಜಿನ ಪರೀಕ್ಷಾ ವಿಭಾಗದ ಮುಖ್ಯಸ್ಥರಾದ ಡಾ.ಅಶೋಕ ಪಾಟೀಲ್, ಡಿನ್ ಅಕಾಡೆಮಿಕ್ ಶರಣಗೌಡ ಪಾಟೀಲ್, ಎಂಬಿಎ ವಿಭಾಗದ ಎಚ್‌ಒಡಿ ಶಿವನಗೌಡ ಪಾಟೀಲ್‌, ಪ್ರಾಧ್ಯಾಪಕರಾದ ಆದಿನಾಥ ಮಹಾರಾಜ್, ಸೋಮನಾಥ ಪಾಟೀಲ್, ಕಾಲೇಜಿನ ಸಿದ್ದಲಿಂಗಯ್ಯಸ್ವಾಮಿ ಕಡ್ಲಪ್ಪಮಠ ಸುದ್ದಿಗೋಷ್ಠಿಯಲ್ಲಿ ಇದ್ದರು.

Leave a Reply

Your email address will not be published. Required fields are marked *

error: Content is protected !!