ದೇವತ್ಕಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಅಧ್ಯಕ್ಷ, ಉಪಾಧ್ಯಕ್ಷ  ಅವಿರೋಧವಾಗಿ ಆಯ್ಕೆ

ಸುರಪುರ ಟೈಮ್ಸ್ ವಾರ್ತೆ

ಸುರಪುರ: ತಾಲೂಕಿನ ದೇವತ್ಕಲ್ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಬಸನಗೌಡ ಶಂಕ್ರಪ್ಪ ಗೌಡ ತಾರನಾಳ, ಉಪಾಧ್ಯಕ್ಷರಾಗಿ ದ್ಯಾಮರಾಯ ಪರಮಣ್ಣ ಕಮತಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇಲ್ಲಿನ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘಕ್ಕೆ ಇತ್ತೀಚೆಗೆ ಚುನಾವಣೆ ನಡೆದಿದ್ದು, 12 ನಿರ್ದೇಶಕರನ್ನು ಹೊಂದಿರುವ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಅಬ್ದುಲ್ ಭಾಷಾ ಗೊನಲ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಬಸನಗೌಡ ತಾರನಾಳ ಮಾತನಾಡಿ ಸಹಕಾರಿ ಕ್ಷೇತ್ರದಲ್ಲಿ ಸಕಾಲಕ್ಕೆ ಸಾಲ ಮರುಪಾವತಿಯಾದಲ್ಲಿ ಸಂಘ ಬಲವರ್ಧನೆಯಾಗಲಿದೆ, ನಮ್ಮ ಕೃಷಿ ಪತ್ತಿನ ಸಹಕಾರಿ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವೆ ಎಂದು ಹೇಳಿದರು.

ಇನ್ನೂ ಚುನಾವಣೆಯಲ್ಲಿ ವಿಜೇತರಾದ ನಿರ್ದೇಶಕರಿಗೆ ಪ್ರಮಾಣ ಪತ್ರ ವಿತರಿಸಲಾಯಿತು, ಸಂದರ್ಭದಲ್ಲಿ ಮಾಜಿ ಜಿ. ಪಂ ಅಧ್ಯಕ್ಷ ಯಲ್ಲಪ್ಪ ಕುರುಕುಂದಿ, ಮುಖಂಡರಾದ ಭೀಮರಾಯ ಗೋಗಿ, ಶಾಂತಗೌಡ ಪಾಟೀಲ್, ಮಲ್ಲನಗೌಡ ಯಳವಾರ್, ಶಂಕ್ರಣ್ಣ ತೋಟದ, ಶ್ರೀಯಣ್ಣ, ಹೈಯಳಪ್ಪ ಕೊಡೆಸೂರು ಸೇರಿದಂತೆ ಅನೇಕ ಜನ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!