ಸಿಡಿಪಿಒ ಲಾಲ್ ಸಾಬ್ ಪೀರಾಪುರ ಅಧಿಕಾರ ಸ್ವೀಕಾರ
ಸುರಪುರ ಟೈಮ್ಸ್ ವಾರ್ತೆ
ಸುರಪುರ: ಇಲ್ಲಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲಾಲ್ ಸಾಬ್ ಪೀರಾಪುರ ಅವರು ಅಧಿಕಾರ ಸ್ವೀಕರಿಸಿದರು.
ಸುರಪುರ ತಾಲೂಕಿ ಹೆಗ್ಗಣದೊಡ್ಡಿಯವರಾದ ಸಿಡಿಪಿಒ ಲಾಲ್ ಸಾಬ್ ಪೀರಾಪುರ ಅವರು ಈ ಮೊದಲು ಸುರಪುರದಲ್ಲಿ ಸಿಡಿಪಿಒ ಆಗಿ 4 ವರ್ಷ ಹಾಗೂ ಯಾದಗಿರಿಯಲ್ಲಿ ಕಾರ್ಯ ನಿರ್ವಹಿಸಿದ್ದರು ನಂತರ ಬಳ್ಳಾರಿ ಜಿಲ್ಲೆಯ ಸೊಂಡೂರಿಗೆ ವರ್ಗಾವಣೆಯಾಗಿದ್ದರು. ಈಗ ಸೊಂಡೂರಿನಿಂದ ಮತ್ತೆ ಸುರಪುರಕ್ಕೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಗುರುವಾರ ಅಧಿಕಾರ ಸ್ವೀಕಾರ ಮಾಡಿದರು. ಇದೇ ಸಂದರ್ಭದಲ್ಲಿ ಇಲಾಖೆಯ ಮೇಲ್ವಿಚಾರಕಿಯರು ಹಾಗೂ ಸಿಬ್ಬಂದಿಗಳು ಸನ್ಮಾನಿಸಿದರು.

ಮೇಲ್ವಿಚಾರಕಿಯರಾದ ಗುರುದೇವಿ ಹಿರೇಮಠ, ಪದ್ಮಾವತಿ ಡಿ.ನಾಯಕ, ಸಾವಿತ್ರಿ ಗಾಳಿ, ಸುನೀತಾ.ಭೀಮಾಶಂಕರ ನಾಯಕ, ಮಹ್ಮದ್ ,ಪವನ್ ಹರೀಶ್ ಜೇವರ್ಗಿ ಸೇರಿದಂತೆ ಉಪಸ್ಥಿತರಿದ್ದರು
