ಬೆಳೆ ವಿಮೆ ನೋಂದಣಿಗೆ ಸೂಚನೆ
ಸುರಪುರ ಟೈಮ್ಸ್ ವಾರ್ತೆ
ಸುರಪುರ: ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯನ್ನು2025 -26ನೇ ಸಾಲಿನಲ್ಲಿ ತಾಲೂಕಿನ ಎಲ್ಲಾ
ರೈತರಿಗೆ ನೋಂದಣಿಗೆ ಆಹ್ವಾನಿಸಲಾಗಿದೆ
ಎಂದು ಸಹಾಯಕ ಕೃಷಿ ನಿರ್ದೇಶಕರು ರಾಮನಗೌಡ ಮಾಲಿ ಪಾಟೀಲ ತಿಳಿಸಿದ್ದಾರೆ.ಸುರಪುರ ಹಾಗೂ ಹುಣಸಗಿ ತಾಲೂಕಿನ ಪೂರ್ವ ಮುಂಗಾರು ಬೆಳೆಗಳಾದ ತೊಗರಿ, ಶೇಂಗಾ, ಸೂರ್ಯಕಾಂತಿ, ಹತ್ತಿ, ಮುಸಕಿನ ಜೋಳ, ಜೋಳ, ಸಜ್ಜೆ, ಸಾವೆ ಮತ್ತು ಈರುಳ್ಳಿ ಬೆಳೆಗಳಿಗೆ ಜು.31 ರೊಳಗೆ ಸಲ್ಲಿಸಬೇಕು. ಭತ್ತ ಮತ್ತು ತೊಗರಿ ವಿಮಾ ಕಂತು ತುಂಬಲು ಆ. 16ರೊಳಗೆ ಸಲ್ಲಿಸಬೇಕು. ವಿಮಾ ಪಾವತಿಸಲು ಪ್ರತಿ ಎಕರೆಗೆ ಬೆಳೆವಾರು ನಿರ್ದಿಷ್ಟ ಮೊತ್ತ ತುಂಬಬೇಕು. ತಾಲೂಕಿನಲ್ಲಿ ಈ ಯೋಜನೆಯ ಅನುಷ್ಠಾನಗೊಳಿಸಲು ಟಾಟಾ ಎ.ಐ.ಜಿ ಇನ್ಸೂರೆನ್ಸ್ ಕಂಪನಿ ವಿಮಾ ಸಂಸ್ಥೆ ಆಯ್ಕೆ ಮಾಡಲಾಗಿದೆ. ಬೆಳೆ ಸಾಲ ಪಡೆದ ಮತ್ತು ಪಡೆಯದ ರೈತರಿಗೆ ಬೆಳೆ ವಿಮೆ ಮಾಡಿಸುವುದು ಐಚ್ಛಿಕವಾಗಿದೆ. ಆಸಕ್ತ ರೈತರು ತಾವು ಬೆಳೆದ ಬೆಳೆಗಳಿಗೆ ವಿಮೆ ಮಾಡಿಸಲು ಸಮೀಪದ ಬ್ಯಾಂಕ್‌ಗಳು, ಸಾಮಾನ್ಯ ಸೇವಾ ಕೇಂದ್ರಗಳು ಹಾಗೂ ಗ್ರಾಮ ಕೇಂದ್ರಗಳಲ್ಲಿ ರೈತರ ಆಧಾರ, ಪಹಣಿ, ಬ್ಯಾಂಕ್ ಪಾಸ್ ಪುಸ್ತಕಗಳ ಜೆರಾಕ್ಸ್ ಪ್ರತಿಯನ್ನು ಸಲ್ಲಿಸಿ ವಿಮಾ ಮಾಡಿಸಿಕೊಳ್ಳಬೇಕು. ವಿಮಾ ಮಾಡಿಸಿದ ರೈತರು ತಪ್ಪದೇ 2025-26ನೇ ಸಾಲಿನ ಮುಂಗಾರು ರೈತ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಮೂಲಕ ತಾವು ಬೆಳೆದ ಬೆಳೆಗಳನ್ನು ದಾಖಲಿಸಲು ಈ ಲಿಂಕ್ ಮುಖಾಂತರ ಬೆಳೆ ಸಮೀಕ್ಷೆ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿಸುರಪುರ ತಾಲೂಕಿನ ರೈತರು ಜಗದೀಶ ತಾಲೂಕ ವಿಮಾ ಸಿಬ್ಬಂದಿ9148924377 ಸಂಪರ್ಕಿಸಿ,ಹುಣಸಗಿ ತಾಲೂಕಿನ ರೈತರು ಸುರೇಶಕುಮಾರ ತಾಲೂಕ ವಿಮಾ ಸಿಬ್ಬಂದಿ 9538988724 ಸಂಪರ್ಕಿಸಿ ಹಾಗೂ ಸಮೀಪದ ರೈತ ಸಂಪರ್ಕ ಕೇಂದ್ರದ ಹಾಗೂ ಅಧಿಕಾರಿಗಳನ್ನು ಭೇಟಿ ನೀಡಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

