ವಿದ್ಯಾ ಭಂಡಾರಿ ಡಾ. ಶರಣಬಸವಪ್ಪ ಅಪ್ಪ ಪುತ್ಥಳಿ ಅನಾವರಣ । ವಿವಿಧ ಮಠಾಧೀಶರು, ಗಣ್ಯರು ಭಾಗಿ ಅನ್ನ, ಜ್ಞಾನ ದಾಸೋಹಕ್ಕೆ ಡಾ. ಅಪ್ಪಾ ಕೊಡುಗೆ ಅವಿಸ್ತರಣೀಯ
ಸುರಪುರ: ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅನ್ನದಾಸೋಹದ ಜೊತೆಗೆ ಶಿಕ್ಷಣ ಸಂಸ್ಥೆ ಹುಟ್ಟು ಹಾಕಿ ವಿವಿಧ ಶಾಲಾ ಕಾಲೇಜುಗಳನ್ನು ಪ್ರಾರಂಭಿಸಿ ಜ್ಞಾನದಾಸೋಹ ಮೂಲಕ ಈ ಭಾಗದ ಶೈಕ್ಷಣಿಕ ಅಭಿವೃದ್ಧಿಗೆ ವಿದ್ಯಾಭಂಡಾರಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪರವರು ನೀಡಿರುವ ಕೊಡುಗೆ ಅಮೂಲ್ಯ ಹಾಗೂ ಅವಿಸ್ಮರಣೀಯ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿವಿಧ ಮಠಾಧೀಶರು ಹೇಳಿದರು. ಇಲ್ಲಿಯ ವೀರಪ್ಪ ನಿಷ್ಠಿ ತಾಂತ್ರಿಕ ಮಹಾ ವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹಿ ಪೀಠಾಧಿಪತಿ, ವಿದ್ಯಾಭಂಡಾರಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪರವರ ಪ್ರತಿಮೆ ಅನಾವರಣ ಕಾರ್ಯಕ್ರಮದ ನೇತೃತ್ವ ವಹಿಸಿ ಆಶೀರ್ವಚನ ನೀಡಿದ ಪೂಜ್ಯರು ಅವರು, ಶಿಕ್ಷಣ ಸಂಸ್ಥೆ ತೆಗೆಯುವದರ ಮೂಲಕ ಹಲವಾರು ಪ್ರತಿಭಾವಂತ ವಿದ್ಯಾರ್ಥಿಗಳು ಹೊರ ಹೊಮ್ಮಲು ಶರಣಬಸವೇಶ್ವರ ಸಂಸ್ಥೆ ಕಾರಣೀಭೂತರದರು ಎಂದರು.
ಅಪ್ಪಾ ಅವರು ಬಸವಣ್ಣನವರ ನಂತರ ನಮ್ಮ ನಾಡಿನ ಧಾರ್ಮಿಕ ಇತಿಹಾಸಕ್ಕೆ ಹೊಸಬೆಳಕು. ಶಕ್ತಿ ತುಂಬಿದವರು. ಕಲಬುರಗಿಯ ಶರಣಬಸವೇಶ್ವರರು ಮತ್ತು ಸಂಸ್ಥಾನ, ಸುರಪುರ ನಗರದಲ್ಲಿ ಪ್ರಾಥಮಿಕ ಹಂತದಿಂದ ಹಿಡಿದು ಪದವಿ ಹಂತ ಹಾಗೂ ಇಂಜಿನಿಯರಿಂಗ್ ಮತ್ತು ಇನ್ನಿತರ ಕೋರ್ಸುಗಳನ್ನು ಪ್ರಾರಂಭಿಸಿ ಈ ಭಾಗದ ವಿದ್ಯಾರ್ಥಿಗಳಿಗೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಹಾಗೂ ನಿಷ್ಕ್ರಿ ಮನೆತನದವರು ಅನುಕೂಲ ಮಾಡಿ ಕೊಟ್ಟಿದ್ದಾರೆ ಎಂದು ಶ್ಲಾಘಿಸಿದರು. ಅವರು 1903ರಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಸ್ಥಾಪಿಸಿ ಕಲಬುರಗಿಯಲ್ಲಿ ಮಹಿಳಾ ಕಾಲೇಜು ಪ್ರಾರಂಭಿಸಿ ಮೊಟ್ಟ ಮೊದಲು ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಟ್ಟ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದರು.
ಪಾಲಕರು ತಮ್ಮ ಮಕ್ಕಳಿಗೆ ಅಧ್ಯಾತ್ಮಿಕ ಚಿಂತನೆ ಮೂಡಿಸಬೇಕು ಅವರ ಮನಸ್ಸನ್ನು ತಿದ್ದಬೇಕು ಎಂದು ಹೇಳಿದರು. ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪ ಸಾನ್ನಿಧ್ಯ ವಹಿಸಿದ್ದರು. ನಿಷ್ಠಿ ಕಡ್ಲಪ್ಪನವರ ವಿರಕ್ತ ಮಠದ ಪ್ರಭುಲಿಂಗ ಸ್ವಾಮಿಗಳು ಉದ್ಘಾಟಿಸಿದರು. ಕೆವೈಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಾ. ಸುರೇಶ್ ಸಜ್ಜನ್, ಶರಣಬಸವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಹಾಗೂ ನಿಷ್ಠ ಇಂಜಿನಿಯರಿಂಗ್ ಕಾಲೇಜಿನ ಸಂಸ್ಥಾಪಕರು, ಹಿರಿಯ ನ್ಯಾಯವಾದಿ ಶರಣಬಸಪ್ಪ ವಿ.ನಿಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕಾಲೇಜಿನ ಕಾರ್ಯದರ್ಶಿ ಡಾ.ಶಾಂತಲಾ ಎಸ್.ನಿಷ್ಕ್ರಿ.ಜಂಟಿ ಕಾರ್ಯದರ್ಶಿ ದೊಡ್ಡಪ್ಪ ಎಸ್.ನಿಷ್ಠಿ, ಗಣ್ಯರಾದ ಆಂಬ್ರೇಶ್ ದುಖಾಂದಾರ್, ಕೋಮಲ್ ಅಂಬ್ರೇಶ್ ದುಖಾಂದಾರ್.ಡಾ. ಬಸವರಾಜೇಶ್ವರಿ ಪ್ರಭುರಾಜಪ್ಪ ಅಪ್ಪವೇದಿಕೆಯಲ್ಲಿದ್ದರು. ಪ್ರಾಚಾರ್ಯ ಡಾ.ಶರಣಬಸಪ್ಪ ಸಾಲಿ, ಪ್ರಾಂಶುಪಾಲರಾದ ನಾನಾಗೌಡ ದೇಸಾಯಿ ಭಾಗವಹಿಸಿದ್ದರು. ಮುಖ್ಯ ಶಿಕ್ಷಕ ರೇವಪ್ಪ ಪಾಟೀಲ್ ವಂದಿಸಿದರು.



