ದೇವಾಪುರ ಬಾಲಕಿಯರ ವಸತಿ ನಿಲಯಕ್ಕೆ ನ್ಯಾಯಾಧೀಶರ ಭೇಟಿ
ಸುರಪುರ ಟೈಮ್ಸ್ ವಾರ್ತೆ
ಸುರಪುರ :ತಾಲೂಕಿನ ದೇವಾಪುರ ಗ್ರಾಮದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯಕ್ಕೆ ಶನಿವಾರ ಜೆಎಂಎಫ್‌ಸಿ ಕೋರ್ಟ್‌ನ ಪ್ರಧಾನ ಸಿವಿಲ್ ನ್ಯಾಯಾಧಿಶರಾದ ಬಸವರಾಜ್ ಭೇಟಿ ನೀಡಿ ಹಾಸ್ಟೆಲ್‌ನಲ್ಲಿ ಕಳೆದ ವಾರ ವಿದ್ಯಾರ್ಥಿನಿಯರ ಅಸ್ವಸ್ಥ ಘಟನೆ ಬಗ್ಗೆ ವಿಚಾರಿಸಿ ಪರಿಶೀಲಿಸಿದರು.

ವಸತಿ ನಿಲಯದಲ್ಲಿ ಕೊಡುವ ಊಟದ ಬಗ್ಗೆ ವಿದ್ಯಾರ್ಥಿನಿಯರಿಗೆ ವಿಚಾರಿಸಿ ಮಾಹಿತಿ ಪಡೆದರು. ಅಡುಗೆ ಕೋಣೆ, ಅಡುಗೆ ಸ್ವಚ್ಛತೆ ನಿಲಯ ಸಾಮಾಗ್ರಿಗಳ ನೋಡಿದರು. ವಸತಿ ಆವರಣದ ಪರಿಸರ ನೋಡಿದರು. ವಿದ್ಯಾರ್ಥಿನಿಯರಿಗೆ ಗುಣಮಟ್ಟದ ಆಹಾರ, ಪ್ರತಿದಿನ ಶುದ್ಧವಾದ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು. ಬಿಸಿಎಂ ಅಧಿಕಾರಿ ತಿಪ್ಪಾರೆಡ್ಡಿ ಪಾಟೀಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
