ಡಾ.ಸುರೇಶ್ ಆರ್ ಸಜ್ಜನ್ ಅವರಿಗೆ ಮಾತೃ ವಿಯೋಗ
ಸುರಪುರ ಟೈಮ್ಸ್ ವಾರ್ತೆ
ಸುರಪುರ: ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಹಾಗೂ ಕಲ್ಬುರ್ಗಿ ಹಾಗೂ ಯಾದಗಿರಿ ಕೆವೈಡಿಸಿಸಿ ಉಪಾಧ್ಯಕ್ಷ ಸುರಪುರ ತಾಲೂಕು ವೀರಶೈವ ಲಿಂಗಾಯತ ಸಮಿತಿಯ ಅಧ್ಯಕ್ಷ ಡಾ.ಸುರೇಶ ಸಜ್ಜನ್ , ಖ್ಯಾತ ಉದ್ಯಮಿ ಬಸವರಾಜ ಸಜ್ಜನ್,ನಗರ ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ಪ್ರಕಾಶ ಸಜ್ಜನ್ ಅವರಿಗೆ ಮಾತೃ ವಿಯೋಗವಾಗಿದೆ.
ರಂಗಂಪೇಟಿಯ ನಿವಾಸಿಯಾದ ಮಹಾನಂದಮ್ಮ ರಾಜಶೇಖರಪ್ಪ ಸಜ್ಜನ್ (90)ಅವರು ಭಾನುವಾರ ಕಲಬುರ್ಗಿಯ ನಿವಾಸದಲ್ಲಿ ನಿಧನ ಹೊಂದಿದರು.
ಮೃತರಿಗೆ ಮೂವರು ಪುತ್ರರು, ಒರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ. ಡಾ. ಚೆನ್ನ ಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀ ಗಿರಿ ಸಂಸ್ಥಾನ ಲಕ್ಷ್ಮೀಪುರ, ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಸಿ.ಪಾಟೀಲ್,ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ನಿಕಟ ಪೂರ್ವ ಸದಸ್ಯ ಅಮರಯ್ಯ ಸ್ವಾಮಿ ಜಾಲಿಬೆಂಚಿ ಸೇರಿದಂತೆ ಹಲವಾರು ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ
ಅವರ ಅಂತ್ಯಕ್ರಿಯೆ ಸೋಮವಾರ ಮಧ್ಯಾಹ್ನ 1 ಗಂಟೆಗೆ ಕಲಬುರ್ಗಿಯ ರಾಮ ಮಂದಿರದಿಂದ ಶಹಾಬಾದ್ ಹೋಗುವ ರೈಲ್ವೆ ಬ್ರಿಡ್ಜ್ ಹತ್ತಿರ ಡಾ.ಸುರೇಶ ಸಜ್ಜನ್ ಅವರ ತೋಟದಲ್ಲಿ ನೆರವೇರುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

