ನ್ಯಾನೋ ಡಿಎಪಿ, ರಸಗೊಬ್ಬರ ಬಳಸಿ; ರಾಮನಗೌಡ ಪಾಟೀಲ್
ಸುರಪುರ ಟೈಮ್ಸ್ ವಾರ್ತೆ
ಸುರಪುರ;ರೈತರು ಬೆಳೆಗೆ ನ್ಯಾನೋ ಡಿಎಪಿ ಮತ್ತು ನ್ಯಾನೋ ರಸಗೊಬ್ಬರ ಬಳಕೆ ಮಾಡಬೇಕು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಾಮನಗೌಡ ಪಾಟೀಲ್ ಹೇಳಿದರು.
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೃಷಿ ಇಲಾಖೆಯು ರೈತ ಸಂಪರ್ಕ ಕೇಂದ್ರಗಳ ಮೂಲಕ ಆತ್ಮಯೋಜನೆಯಡಿ ನ್ಯಾನೋ ರಸಗೊ ಬ್ಬರಗಳು ಮತ್ತು ಸೂಕ್ಷ್ಮ ಪೋಷ ಕಾಂಶಗಳ ಬಳಕೆ ಕುರಿತು ಗ್ರಾಮ ಮಟ್ಟದ ಅರಿವು ಮೂಡಿಸುವ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.2025-26ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಕ್ಷೇತ್ರದಲ್ಲಿ ಶೇ.75 ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿದ್ದು ಶೇ.25 ರ ಪ್ರದೇಶದಲ್ಲಿ ಭತ್ತ ನಾಟಿ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಈಗಾಗಲೇ ಬಿತ್ತನೆಯಾದ ಬೆಳೆಗೆ ಮೇಲೂ ಗೊಬ್ಬರವಾಗಿ ಯೂರಿಯಾ ಹಾಗೂ ಡಿಎಪಿ ರಸಗೊಬ್ಬರಗಳನ್ನು ಬಳಸುವುದು ವಾಡಿಕೆಯಾಗಿದೆ ಆದರೆ ವಿಶ್ವದಲ್ಲಿ ಯುದ್ಧದ ಕಾರ್ಮೋಡ ಕವಿದಿರುವ ದರಿಂದ ರಸಗೊಬ್ಬರ ತಯಾರಿಕೆ ಕಚ್ಚಾ ವಸ್ತುಗಳು ವಿದೇಶಗಳಿಂದ ಪೂರೈಕೆಯಾ ಗುತ್ತಿಲ್ಲ. ಅದರ ಬದಲಾಗಿ ನೂತನವಾಗಿ ಅವಿಷ್ಕರಿಸಲಾದ ನ್ಯಾನೋ ಯೂರಿಯಾ ಹಾಗೂ ನ್ಯಾನೋ ಡಿಎಪಿ ರಸಗೊಬ್ಬರಗಳನ್ನು ರೈತರು ಬಳಸಬಹುದು ಎಂದರು.
ಕೀಟನಾಶಕ ಸಿಂಪರಣೆ ಮಾಡುವಾಗ ಸದರಿ ದ್ರಾವಣಗಳನ್ನು ಸೇರ್ಪಡಿಸಿ ಸಿಂಪಡಿಸಿ ದಲ್ಲಿ ಖರ್ಚು, ವೆಚ್ಚ ತಗ್ಗಿಸಬಹುದು. ಕೃಷಿ ಪರಿಕರ ಮಾರಾ ಟಗಾರರಲ್ಲಿ ನ್ಯಾನೋ ಯೂರಿಯಾ ಹಾಗೂ ನ್ಯಾನೋ ಡಿಎಪಿ ಲಭ್ಯವಿದ್ದು ಬಿತ್ತನೆ ಯಾದ 25-30 ದಿನ ಹಾಗೂ 40-50 ದಿನಗಳ ಅಂತರದಲ್ಲಿ ಸಿಂಪರಣೆ ಮಾಡಬಹುದು. ಪ್ರತಿ ಲೀಟರ್ ನೀರಿಗೆ 5 ಎಂಎಲ್ ದ್ರಾವಣವನ್ನು ಬೆರಸಿ ಸಿಂಪರಣೆ ಮಾಡಿದಲ್ಲಿ, ಯೂರಿಯಾ ಹಾಗೂ ಡಿಎಪಿ ರಸಗೊಬ್ಬರದ ಫಲಿತಾಂಶವನ್ನು ದ್ರವರೂಪದ ರಸಗೊಬ್ಬರದಲ್ಲಿಯೂ ಕೂಡ ಕಾಣಬಹುದಾಗಿದೆ ಎಂದು ಹೇಳಿದರು. ಕೃಷಿ ಅಧಿಕಾರಿಗಳು, ರೈತರು ಉಪಸ್ಥಿತರಿದ್ದರು.

