ಶ್ರಾವಣ -ಶ್ರವಣ ಶಿವಾನುಭವ ಚಿಂತನೆ ನಾಳೆಯಿಂದ ;ಪ್ರಭುಲಿಂಗ ಮಹಾಸ್ವಾಮೀಜಿ
ಸುರಪುರ ಟೈಮ್ಸ್ ವಾರ್ತೆ
ಸುರಪುರ ; ನಗರದ ನಿಷ್ಕ್ರಿ ಕಡ್ಡಪ್ಪನವರ ವಿರಕ್ತ ಮಠದ ಯಾತ್ರಿ ನಿವಾಸದಲ್ಲಿ ಸೋಮವಾರದಿಂದ ಶ್ರಾವಣ ಮಾಸದ ಪ್ರತಿ ಸೋಮವಾರ ಸಂಜೆ 7.15ಕ್ಕೆ ಶ್ರಾವಣ-ಶ್ರವಣ ಶಿವಾನುಭವ ಚಿಂತನ ಏರ್ಪಡಿಸಲಾಗಿದೆ ಎಂದು ಮಠದ ಪೀಠಾಧಿಪತಿ ಪ್ರಭುಲಿಂಗ ಮಹಾಸ್ವಾಮೀಜಿ ತಿಳಿಸಿದ್ದಾರೆ.
ಮಠದ ಪ್ರಭುಲಿಂಗ ಸ್ವಾಮೀಜಿ ನಾಳೆ ಕಾರ್ಯಕ್ರಮದ ಸಾನ್ನಿಧ್ಯ, ಉಪನ್ಯಾಸಕ ರಜಾಕ್ ಭಾಗವಾನ ಅವರು ವಚನ ಸಾಹಿತ್ಯದಲ್ಲಿ ಮಾಲ್ಯಗಳು ಕುರಿತು ಉಪನ್ಯಾಸ ನೀಡುವರು. ವಿಎನ್‌ಇ ಕಾಲೇಜಿನ ಉಪನ್ಯಾಸಕ ಸೋಮನಾಥ ಪಾಟೀಲ್ ಉಪಸ್ಥಿತಿ. ಆ.4 ರಂದು ವಚನ ಸಾಹಿತ್ಯದಲ್ಲಿ ದಾಸೋಹ ಪರಿಕಲ್ಪನೆ ಬಗ್ಗೆ ಹಸನಾಪುರದ ಬಸವರಾಜಪ್ಪ ಅಪ್ಪ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಮೋಹನರೆಡ್ಡಿ ದೇಸಾಯಿ ಮಾತನಾಡುವರು. ನೇಕಾರ ಸಹಕಾರಿ ಸಂಘದ ನಿರ್ದೇಶಕ ನಿಂಗಣ್ಣ ರಾಯಚೂರಕರ್ ಭಾಗವಹಿಸುವರು.
ಆ.11 ರಂದು ಕಸಾಪ ಗೌರವ ಕಾರ್ಯದರ್ಶಿ ಎಚ್.ವೈ.ರಾಠೋಡ್ ಅವರು ಅಧುನಿಕ ಜೀವನಕ್ಕೆ ವಚನ ಸಾಹಿತ್ಯ ಅವಶ್ಯಕತೆ ಕುರಿತು ತಿಳಿಸುವರು. ಮಂಜುನಾಥ ಜಾಲಹಳ್ಳಿ ಅಧ್ಯಕ್ಷತೆ. ಆ.18 ರಂದು ವಚನ ಸಾಹಿತ್ಯ ಮತ್ತು ಬಸವಣ್ಣ ಬಗ್ಗೆ ವಿಎನ್‌ಇ ಕಾಲೇಜಿನ ಉಪನ್ಯಾಸಕ ಪ್ರಶಾಂತ ಶೇರಿಕಾರ ಉಪನ್ಯಾಸ ನೀಡಲಿದ್ದಾರೆ. ಶರಣ ಸೇವಾ ಸಂಸ್ಥೆ ಅಧ್ಯಕ್ಷ ಶಿವರಾಜ ಕಲಕೇರಿ ಉಪಸ್ಥಿತರಿರುತ್ತಾರೆ. ಸಂಗೀತ ಕಲಾವಿದರಾದ ಶರಣಯ್ಯಸ್ವಾಮಿ ಬಳ್ಳುಂಡಗಿಮಠ, ಮೋಹನರಾವ್ ಮಾಳದಕರ್, ಶ್ರೀಹರಿರಾವ್ ಆದೋನಿ, ನರಸಿಂಹ ಬಂಡಿ, ಪ್ರಾಣೇಶರಾವ್ ಕುಲಕರ್ಣಿ, ವಿಜಯಲಕ್ಷ್ಮೀ ಯಾದವ, ಪ್ರಿಯಾಂಕ್ ವಿಶ್ವಕರ್ಮ, ಜಗದೀಶ್ ಮಾನು, ತಬಲಾವಾದಕರಾದ ರಾಜಶೇಖರ ಗೆಜ್ಜಿ, ಸುರೇಶ ಅಂಬೂರೆ, ಉಮೇಶ ಯಾದವ, ರಮೇಶ ಕುಲಕರ್ಣಿ, ಮಹಾಂತೇಶ ಶಹಾಪುರರಕರ್ ಭಾಗವಹಿ ಸಲಿದ್ದಾರೆ. ಶಿಕ್ಷಕರಾದ ರಾಜಶೇಖರ ದೇಸಾಯಿ, ಎಚ್.ರಾಠೋಡ, ವೆಂಕಟೇಶ ಪಾಟೀಲ್, ಉಪನ್ಯಾಶಕ ಡಿ.ಎಸ್.ಹೆಬ್ಬಾಳ ನಿರೂಪಣೆ ಮಾಡಲಿದ್ದಾರೆ ಎಂದು ಮಠದ ಪೂಜ್ಯರು ತಿಳಿಸಿದ್ದಾರೆ.

