ಪಿಕಾರ್ಡ ಬ್ಯಾಂಕ್ 64ನೇ ವಾರ್ಷಿಕ ಮಹಾಸಭೆ, 104.14 ಲಕ್ಷ ರೂ. ಶೇರು ಬಂಡವಾಳ ಶೇ. 80ರಷ್ಟು ವಸೂಲಾತಿ; ಅಧ್ಯಕ್ಷ ಬಸನಗೌಡ ಪಾಟೀಲ ದೇವಾಪುರ

ಸುರಪುರ ಟೈಮ್ಸ್ ವಾರ್ತೆ
ಸುರಪುರ: ತಾಲೂಕಾ ಪಿಕಾರ್ಡ್ ಬ್ಯಾಂಕಿನ (ಪ್ರಾಥಮಿಕ
ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್) 64ನೇ ವಾರ್ಷಿಕ ಮಹಾಸಭೆ ಬ್ಯಾಂಕಿನ ಅಧ್ಯಕ್ಷ ಬಸನಗೌಡ ಪಾಟೀಲ ದೇವಾಪುರ ಅಧ್ಯಕ್ಷತೆಯಲ್ಲಿ ಜರುಗಿತು. ಬ್ಯಾಂಕ್ 10,090 ಸದಸ್ಯರನ್ನು ಹೊಂದಿದ್ದು, 104.18 ರೂ. ಲಕ್ಷ ಶೇರು ಬಂಡವಾಳ ಇರುತ್ತದೆ. ಇದರಲ್ಲಿ 4.174 ಸಾಲಗಾರ ಸದಸ್ಯರು ಇದ್ದು, ಕಳೆದ ಮಾರ್ಚ್ ತಿಂಗಳಲ್ಲಿ ಶೇ. 80ರಷ್ಟು ಸಾಲ ವಸೂಲಾತಿ ಸಾಧಿಸಲಾಗಿದೆ. 2024-25ನೇ ಸಾಲಿಗಾಗಿ ಟ್ರ್ಯಾಕ್ಟ‌ರ್ ಹಾಗೂ ವಿವಿಧ ಯೋಜನೆಗಳಲ್ಲಿ 272.38 ಲಕ್ಷ ರೂ ಆರ್ಥಿಕ ಹಂಚಿಕೆ ಮಾಡಲಾಗಿದೆ ದೇವಾಪುರ ತಿಳಿಸಿದರು.
ಉಪಾಧ್ಯಕ್ಷ ಶೆಟ್ಟಿನಾಯಕ ಬೈಲಾಪುರ ತಾಂಡಾ, ನಿರ್ದೇಶಕರಾದ ವಾಮನರಾವ ದೇಶಪಾಂಡೆ, ರಾಮನಗೌಡ ಸುಬೇದಾರ, ರಾಮಚಂದ್ರ ಪೂಜಾರಿ, ಧರೆಪ್ಪ ಮೇಟಿ, ಪ್ರಕಾಶ ಸಜ್ಜನ್, ಬಸನಗೌಡ ಪಾಟೀಲ ಕೋಳಿಹಾಳ, ರಾಜಾ ಸುಭಾಶ್ಚಂದ್ರ ನಾಯಕ.ಬಸಣ್ಣ ಕಮತಗಿ, ಮಲ್ಲಿಕಾರ್ಜುನ ಕೆಂಗೂರಿ, ಮರೆಮ್ಮ ಕಚಕನೂರು ಉಪಸ್ಥಿತರಿದ್ದರು. ಬ್ಯಾಂಕಿನ ವ್ಯವಸ್ಥಾಪಕ ನಾಗಣ್ಣ ಯಲ್ಲೆ ಲೆಕ್ಕಪತ್ರ ಮಂಡಿಸಿದರು. ಬಸವರಾಜ ಪರಾಪುರ ನಿರೂಪಿಸಿದರು. ಕ್ಷೇತ್ರಾಧಿಕಾರಿ ನಿಂಗಪ್ಪ ಹೆಚ್. ವಂದಿಸಿದರು. ಕಿರಿಯ ಕ್ಷೇತ್ರಾಧಿಕಾರಿ ಸಂಜೀವಕುಮಾರ, ಸಿಬ್ಬಂದಿ ತೋಟೇಂದ್ರ ಪಾಟೀಲ ಹಾಗೂ ಬ್ಯಾಂಕಿನ ಹಲವಾರು ಸದಸ್ಯರು ಉಪಸ್ಥಿತರಿದ್ದರು
ಸುರಪುರ ಬ್ಯಾಂಕ್‌ಗೆ ಪ್ರಶಸ್ತಿ
ಕಸ್ಟರ್ಡ್ ಬ್ಯಾಂಕ್ ಶೇ.70 ರಷ್ಟು ಹೆಚ್ಚು ಸಾಲ ವಸೂಲಾತಿ ಮಾಡಿದ ಬ್ಯಾಂಕ್ ಗಳಿಗೆ 1.15 ಕೋಟಿ ಸಾಲ ವಿತರಿಸುತ್ತದೆ. ಯಾದಗಿರಿ ಜಿಲ್ಲೆಯ ಮೂರು ಪಿಕಾರ್ಡ್ ಬ್ಯಾಂಕ್ ಗಳು ಸಾಲ ವಸೂಲಾತಿಯಲ್ಲಿ ಪ್ರಗತಿ ಸಾಧಿಸಿರುತ್ತವೆ. ಸುರಪುರ ಪಿಕಾರ್ಡ್ ಬ್ಯಾಂಕ್ ಸಹ ನಮ್ಮ ಕೇಂದ್ರ ಕಚೇರಿಯಿಂದ ನೀಡುವ ಜಿಲ್ಲಾ ಮಟ್ಟದ ಅತ್ಯುತ್ತಮ ಬ್ಯಾಂಕ್ ಪ್ರಶಸ್ತಿ ಪಡೆದಿರುತ್ತದೆ. ಅದಕ್ಕೆ ಮೂಲ ಕಾರಣೀಕರ್ತರು ರೈತರು.
ಸಕಾಲಕ್ಕೆ ಸಾಲ ಮರುಪಾವತಿ ಮಾಡಿದರೆ
ಬ್ಯಾಂಕ್‌ನ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದು ಕಲಬುರಗಿ ಕಸ್ಟಾರ್ಡ್ ಬ್ಯಾಂಕನ್ ಡಿಜೆಎಂ ಅಜೇಯ್ ಪಾಟೀಲ್ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!