ಸೆ. 22 ರಿಂದ ಅ 01ವರೆಗೆ, 10ದಿನಗಳ ಕಾಲ 39ನೇ ವರ್ಷದ ನಾಡಹಬ್ಬ ಅದ್ದೂರಿ ಉತ್ಸವಾಚರಣೆ – ರಾಜಾ ಮುಕುಂದ ನಾಯಕ
ಸುರಪುರ ಟೈಮ್ಸ್ ವಾರ್ತೆ
ಸುರಪುರ:ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಕನ್ನಡ ಸಾಹಿತ್ಯ ಸಂಘ ಹಾಗೂ ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ಸಹಯೋಗದಲ್ಲಿ 39ನೇ ವರ್ಷದ ನಾಡಹಬ್ಬ ಉತ್ಸವಾಚರಣೆ ಕಾರ್ಯಕ್ರಮವು ಸೆ. 22 ರಿಂದ ಅ 01ವರೆಗೆ ವಿಜೃಂಭಣೆಯಿಂದ 10 ದಿನಗಳ ಕಾಲ ಆಚರಿಸಲಾಗುವುದು ಎಂದು ನಾಡಹಬ್ಬ ಮಹೋತ್ಸವ ಸಮಿತಿಯ ಅಧ್ಯಕ್ಷ ರಾಜಾ ಮುಕುಂದ ನಾಯಕ ಹೇಳಿದರು. ನಗರದ ಪಬ್ಲಿಕ್ ರಿಕ್ರಿಯೆಷನ್ ಕ್ಲಬ್ ಆವರಣದಲ್ಲಿ ನಡೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಳೆದ 38 ವರ್ಷಗಳ ಹಿಂದೆ ಸ್ಥಾಪನೆಗೊಂಡು ಅನೇಕ ಮಹನೀಯರು ನಡೆಸಿಕೊಂಡು ಬಂದಿರುವ ಕನ್ನಡ ಸಾಹಿತ್ಯ ಸಂಘಕ್ಕೆ ತನ್ನದೇ ಆದ ಹಿರಿಮೆ ಇದೆ. ಸಾಂಸ್ಕೃತಿಕ ರಾಯಭಾರಿಗಳೆಂದು ಹೆಸರು ಪಡೆದಿದ್ದ ಮಾಜಿ ಸಚಿವ ದಿ. ರಾಜಾ ಮದನಗೋಪಾಲ ನಾಯಕರವರ ನೇತೃತ್ವದಲ್ಲಿ ಸಮಿತಿಯ ಮೂಲಕ ನಾಡಹಬ್ಬ ಸೇರಿ ವಿವಿಧ ಸಾಹಿತ್ಯಕ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತಿದೆ. ಈ ಬಾರಿ ಕೂಡಾ 39ನೇ ನಾಡಹಬ್ಬ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದರು. ಸೆಪ್ಟೆಂಬರ್ 22ರಂದು ವೇಣುಗೋಪಾಲಸ್ವಾಮಿ ದೇವಸ್ಥಾನ ಆವರಣದಿಂದ ಗರುಡಾದ್ರಿ ಕಲಾ ಮಂದಿರವರೆಗೆ ನಾಡದೇವಿಯ ಭಾವಚಿತ್ರದ ಹಾಗೂ ವಿವಿಧ ಕಲಾತಂಡಗಳ ಭವ್ಯ ಮೆರವಣಿಗೆಗೆ ಸುರಪುರ ಸಂಸ್ಥಾನ ಅರಸು ವಂಶಸ್ಥರಾದ ರಾಜಾ ಕೃಷ್ಣಪ್ಪ ನಾಯಕ ಹಾಗೂ ಶಾಸಕ ರಾಜಾ ವೇಣುಗೋಪಾಲ ನಾಯಕ ಚಾಲನೆ ನೀಡಲಿದ್ದಾರೆ. ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಪ್ರಕಾಶ ಗುತ್ತೇದಾರ, ರಾಜಾ ಪಾಮ ನಾಯಕ, ಉದ್ದಿಮೆದಾರ ಗ್ಯಾನಚಂದ ಜೈನ, ತಾಲೂಕಾ ಆರೋಗ್ಯಾಧಿಕಾರಿ ಡಾ. ಆರ್.ವಿ. ನಾಯಕ ಇತರರು ಪಾಲ್ಗೊಳ್ಳುವರು. ಅಂದು ಸಂಜೆ 7ಕ್ಕೆ ಸಮಿತಿ ಗೌರವಾಧ್ಯಕ್ಷ ರಾಜಾ ಪಾಮ ನಾಯಕ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸುವರು. ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ ಅಧ್ಯಕ್ಷತೆ ವಹಿಸುವರು. ರಾಜಾ ಮುಕುಂದ ನಾಯಕ, ರಾಜಾ ಹರ್ಷವರ್ಧನ ನಾಯಕ, ಕಿಶೋರಚಂದ ಜೈನ, ಸುರೇಶ ಸಜ್ಜನ್ ಉಪಸ್ಥಿತರಿರುವರು. 22ರಂದು ಶರಣಬಸವ ಪಬ್ಲಿಕ್ ಸ್ಕೂಲ್ ಹಸನಾಪುರ್, ಆನಂದ ವಿದ್ಯಾಲಯ ಹಾಗೂ ಶ್ರೀಮತಿ ಲಕ್ಷ್ಮೀದೇವಿ ಜೇವರ್ಗಿ ಸರಕಾರಿ ಹಿ.ಪ್ರಾ.ಶಾಲೆ, ದಿ. 23ರಂದು ಸರ್ವೋದಯ ಶಿಕ್ಷಣ ಸಂಸ್ಥೆ, ದಿ.24ರಂದು ಗಾಯತ್ರಿ ಶಿಕ್ಷಣ ಸಂಸ್ಥೆ, ದಿ. 25ರಂದು ಸರಕಾರಿ ಮಾದರಿಯ ಪ್ರಾಥಮಿಕ ದರಬಾರ ಶಾಲೆ, 26ರಂದು ಸರಕಾರಿ ಹಿ.ಪ್ರಾ.ಶಾಲೆ ಖುರೇಷಿ ಮೊಹಲ್ಲಾ ಹಾಗೂ ಸರಕಾರಿ ಬಾಲಕಿಯರ ಪ್ರೌಢಶಾಲೆ,ದಿ. 27ರಂದು ಶ್ರೀಮತಿ ರಾಣಿ ಜಾನಕಿದೇವಿ ಶಾಲೆ ಹಾಗೂ ಸನ್ ಶೈನ್ ಶಾಲೆ ,ದಿ. 28ರಂದು ಬೆಳ್ಳಿಗೆ 10:30ಗಂಟೆಗೆ ಅಶ್ವಥ್ ನಾರಾಯಣ ವೃಕ್ಷದ ಕಲ್ಯಾಣೋತ್ಸವ, ಮಹಾಪ್ರಸಾದ ಮತ್ತು ಸಂಜೆ ಕರ್ನಾಟಕ ಪಬ್ಲಿಕ್ ಶಾಲೆ ರಂಗಂಪೇಟ್ ಹಾಗೂ ಸರಕಾರಿ ಕಿ. ಪ್ರಾ. ಶಾಲೆ ಕುರಬರಗಲ್ಲಿ, ದಿ. 29ರಂದು ತಕ್ಷಶೀಲ ಶಿಕ್ಷಣ ಸಂಸ್ಥೆ ರಂಗಂಪೇಟ್, ದಿ. 30ರಂದು ವಿನಾಯಕ ಆಂಗ್ಲ ಮಾಧ್ಯಮ ಶಾಲೆ, ದಿ. ಅ. 1ರಂದು ಅಕ್ಷರಧಾಮ, ಪ್ಯಾರಾ ಮೆಡಿಕಲ್ ಕಾಲೇಜು, ಸ್ಪಂದನ ಮೆಲೋಡಿಸ್ ರಸಮಂಜರಿ ಕಾರ್ಯಕ್ರಮ, ಸಂಜೆ 7ಕ್ಕೆ ಸಮಾರೋಪ ಸಮಾರಂಭ ಜರುಗಲಿದ್ದು ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ನರಸಿಂಹ ನಾಯಕ, ಜಯಲಲಿತಾ ಪಾಟೀಲ, ರಾಜಾ ಹನುಮಪ್ಪ ನಾಯಕ (ತಾತಾ), ಶರಣಬಸಪ್ಪ ಯಾಳವಾರ, ಯಲ್ಲಪ್ಪ ಕಾಡ್ಲೂರ, ಪಂಡಿತ್ ನಿಂಬೂರೆ, ಬಸವರಾಜ ಜಮದ್ರಖಾನಿ, ಜೆ.ಆಗಸ್ಟಿನ್, ಪ್ರಕಾಶ್ ಸಜ್ಜನ್, ಶ್ರೀನಿವಾಸ ಜಾಲವಾದಿ ಉಪಸ್ಥಿತರಿರುವರು. ಹಾಗೂ ನಾಡಹಬ್ಬ ಪ್ರಯುಕ್ತ ವಿದ್ಯಾರ್ಥಿಗಳಿಗೆ ಲೇಖನ,ಭಕ್ತಿಗೀತೆ, ಭಾಷಣ, ಜಾನಪದ ಹಾಡು, ಕ್ರೀಡೆ ಹಾಗೂ ರಂಗೋಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಉಪಾಧ್ಯಕ್ಷ ಕಿಶೋರಚಂದ ಜೈನ, ಪ್ರಧಾನ ಕಾಯದರ್ಶಿ ಶಿವಕುಮಾರ ಮಸ್ಕಿ, ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ, ಗೋವರ್ಧನ ಝಂವ್ಹಾರ, ಶ್ರೀನಿವಾಸ ಜಾಲವಾದಿ, ಭೀಮನ್ ಗೌಡ ಲಕ್ಷ್ಮಿ ಹೇಮನೂರ, ಭೀಮುನಾಯಕ ಮಲ್ಲಿಬಾವಿ, ಸೋಮರೆಡ್ಡಿ ಮಂಗಿಹಾಳ, ವೆಂಕಟೇಶ್, ಪಾರಪ್ಪ ಗುತ್ತೇದಾರ, ಹಣಮಂತ, ಮಹೇಶ ಜಾಗೀರದಾರ, ರಾಜಶೇಖರ ದೇಸಾಯಿ, ಶ್ರೀಶೈಲ ಯಂಕಂಚಿ, ದೇವು ಹೆಬ್ಬಾಳ, ಪ್ರಕಾಶ ಬಣಗಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.






