ಬಸವೇಶ್ವರ ಪತ್ತಿನ ಸಹಕಾರದ 30 ನೇ ವಾರ್ಷಿಕ ಮಹಾಸಭೆ ಸಂಘಕ್ಕೆ 72ಲಕ್ಷ ಲಾಭ; ಅಧ್ಯಕ್ಷ ಹೆಚ್.ಸಿ.ಪಾಟೀಲ್

ಸುರಪುರ ಟೈಮ್ಸ್ ವಾರ್ತೆ
ಸುರಪುರ : ಸರ್ವ ಸದಸ್ಯರ ಸಹಕಾರದಿಂದ ಇಲ್ಲಿಯ ಬಸವೇಶ್ವರ ಪತ್ತಿನ ಸಹಕಾರ ಸಂಘವು 2024-25ನೇ ಸಾಲಿನಲ್ಲಿ 72 ಲಕ್ಷ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಹೆಚ್.ಸಿ.ಪಾಟೀಲ್ ಹೇಳಿದರು.
ಸಮೀಪದ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ 30 ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘ 3395 ಸದಸ್ಯರನ್ನು ಹೊಂದಿದೆ. ಸಂಘವು ತನ್ನ ಷೇರು ಬಂಡವಾಳ ಹಾಗೂ ಠೇವಣಿಗಳನ್ನು ಹೆಚ್ಚಿಸಿಕೊಂಡು ಸುಭದ್ರವಾಗಿ ಸಾಗುತ್ತಿದೆ ಎಂದರು.
30 ವರ್ಷ ಕಾರ್ಯನಿರ್ವಹಿಸಿ ಅತ್ಯುತ್ತಮ ಸಾಧನೆಗೈದು ವಿವಿಧ ಭಾಗಗಳಲ್ಲಿ ಶಾಖೆಗಳನ್ನು ಹೊಂದಿ ಹೆಚ್ಚಿನ ಲಾಭಾಂಶವನ್ನು ಹೊಂದಿದೆ. ಆರ್ಥಿಕ ಭದ್ರತೆಯೊಂದಿಗೆ ಮುನ್ನುಗ್ಗುತ್ತಿರುವ ಹೆಮ್ಮೆಯ ಸಹಕಾರಿ ಸಂಘ ನಮ್ಮದಾಗಿದೆ. ಕಟ್ಟು ಬಾಕಿದಾರರ ವಸೂಲಾತಿಗಾಗಿ ಕಾನೂನು ಕ್ರಮಜರುಗಿಸಲಾಗಿದೆ ಎಂದು ತಿಳಿಸಿದರು.
ನಿರ್ದೇಶಕ ಮತ್ತು ಕೆವೈಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ್ ಸಜ್ಜನ್ ಸಭೆಯಲ್ಲಿ ಹಲವು ಸಲಹೆ ಸೂಚನೆ ನೀಡಿದರು. ಅನೇಕ ಷೇರುದಾರು ವಾರ್ಷಿಕ ವರದಿಯ ಮಾಹಿತಿ ಕೇಳಿದರು. ಪ್ರಾರಂಭದಲ್ಲಿ ಅಶ್ವಾರೂಢ ಜಗಜ್ಯೋತಿ ಬಸವೇಶ್ವರರ ಪುತ್ಥಳಿಗೆ ಮತ್ತು ಕಾರ್ಯಕ್ರಮದಲ್ಲಿ ಬಸವೇಶ್ವರ ಮತ್ತು ಸಹಕಾರಿ ಸಂಘಗಳ ಪಿತಾಮಹ ಸಿದ್ದನಗೌಡ ಪಾಟೀಲ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಸಂಘದ ಉಪಾಧ್ಯಕ್ಷ ವಿರೇಶ ನಿಷ್ಠಿ ದೇಶಮುಖ, ನಿರ್ದೇಶಕರಾದ ರವೀಂದ್ರ ಅಂಗಡಿ, ವಿಜಯಕುಮಾರ ಬಂಡೋಳಿ, ಮಲ್ಲಿಕಾರ್ಜುನ ಜಾಲಹಳ್ಳಿ, ವೀರಭದ್ರಪ್ಪ ಕೆಂಭಾವಿ, ಮಂಜುನಾಥ ಜಾಲಹಳ್ಳಿ, ವಿರೇಶ ಪಂಚಾಂಗಮಠ, ಕೃಷ್ಣಾರೆಡ್ಡಿ ಹೊಸಮನಿ, ಜಯಲಲಿತಾ ಪಾಟೀಲ್, ನೀಲಮ್ಮ ಕುಂಬಾರ, ನಾಮ ನಿರ್ದೇಶಿತ ಸದಸ್ಯರಾದ ವಿಶ್ವರಾಧ್ಯ ಸತ್ಯಂಪೇಟೆ, ಪ್ರಕಾಶ ಅಂಗಡಿ ಕನ್ನೆಳ್ಳಿ, ಸಿದ್ದನಗೌಡ ಹೆಬ್ಬಾಳ, ಸಿದ್ದಲಿಂಗಯ್ಯಸ್ವಾಮಿ ಕಡ್ಲಪ್ಪ ಮಠ, ಪ್ರಶಾಂತ ಹಿರೇಮಠ, ಉಪ ಸಮಿತಿ ಸದಸ್ಯರು, ಸಹಕಾರ ಸಂಘಟನಾ ಸಲಹಾ ಸಮಿತಿಯವರು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶರಣಗೌಡ ದೇಸಾಯಿ ಕಿರದಳ್ಳಿ, ಪ್ರಧಾನ ವ್ಯವಸ್ಥಾಪಕಿ ಅನ್ನಪೂರ್ಣ ಜಕರೆಡ್ಡಿ, ಜಯಶ್ರೀ ಗಲಗಿನ, ಸುರೇಶ ಖಾದಿ, ಹುಣಸಗಿ, ಕೆಂಭಾವಿ ಶಾಖಾ ವ್ಯವಸ್ಥಾಪಕರಾದ ಶಿವರಾಜ ಹೊನ್ನಳ್ಳಿ, ಅಮರೇಶ ಶಿರಗೋಜಿ, ಕಕ್ಕೇರಾದ ಶಶಿಕಲಾ ಅಂಗಡಿ, ಕೊಡೇಕಲ್ ಶಾಖೆಯ ಶಿವಯ್ಯ ಹಿರೇಮಠ ಬೂದಿಹಾಳ ಸೇರಿ ಹಲವಾರು ಸಂಖ್ಯೆಯಲ್ಲಿ ಷೇರುದಾರರು ಇದ್ದರು.

ಫೋಟೊ :ಸುರಪುರ ರಂಗಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ಬಸವೇಶ್ವರ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾ ಸಭೆ ಜರುಗಿತು.

Leave a Reply

Your email address will not be published. Required fields are marked *

error: Content is protected !!