ಬೆಳೆ ಹಾನಿ ಪರಿಶೀಲಿಸಿದ ಕೃಷಿ ಅಧಿಕಾರಿಗಳು
ಸುರಪುರ ಟೈಮ್ಸ್ ವಾರ್ತೆ
ಸುರಪುರ: ಕಳೆದ ಆಗಸ್ಟ್ ತಿಂಗಳಿನಿಂದ ಈ ಸೆಪ್ಟೆಂಬರವರೆಗೆ ವಾಡಿಕೆಗಿಂತ ಹೆಚ್ಚು ತಾಲೂಕಿನಲ್ಲಿ ಮಳೆಯಾಗಿದ್ದರಿಂದ ಬೆಳೆ ಹಾನಿ ಸಂಭವಿಸಿದ ಹಿನ್ನೆಲೆಯಲ್ಲಿ ಕೃಷಿ ಮತ್ತು ಕಂದಾಯ ಇಲಾಖೆಗಳ ಜಂಟಿ ಸಮೀಕ್ಷೆ ಕೈಗೊಳ್ಳಲಾಗಿದ್ದು 2,974 ಹೆಕ್ಟರ್ ಬೆಳೆ ಹಾನಿ ಸಂಭವಿಸಿದೆ ಎಂದು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ರಾಮನಗೌಡ ಪಾಟೀಲ್ ತಿಳಿಸಿದ್ದಾರೆ. ಬೆಳೆ ಹಾನಿಯಾದ ಹೊಲಗಳಿಗೆ ತೆರಳಿ ಪರಿಶೀಲಿಸಿದ ಅವರು, ಈ ಪೈಕಿ 1,137 ಹೆಕ್ಟರ್ ತೊಗರಿ ಹಾಗೂ 1,809 ಹೆಕ್ಟರ್ ಹತ್ತಿ ಬೆಳೆ ಹಾನಿಯಾಗಿದೆ. ಸಮೀಕ್ಷೆ ಪ್ರಗತಿಯಲ್ಲಿದೆ ಟಾಟಾ ಎಐಜಿ ಜನರಲ್ ಇನ್ಸೂರೆನ್ಸ್ ಕಂಪನಿಯವರಿಗೆ ಬೆಳೆ ವಿಮೆ ತುಂಬಿದಂತಹ ರೈತರು ತಮ್ಮ ಹೊಲದಲ್ಲಿ ಬೆಳೆ ಹಾನಿಯಾಗಿದ್ದರೆ 18002093536 ನಂಬರ್‌ಗೆ ಹಾನಿಯಾದ 72 ಗಂಟೆಗಳ ಒಳಗಾಗಿ ಕರೆ ಮಾಡಿ ದೂರು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಂಪನಿಯ ಸಿಬ್ಬಂದಿಗಳಾದ ಸುರೇಶ-ಹುಣಸಗಿ ತಾಲೂಕಾ 9538988724 ಹಾಗೂ ಜಗದೀಶ-ಸುರಪುರ ತಾಲೂಕಾ 9148924377 ಅವರನ್ನು ಸಂಪರ್ಕಿಸುವಂತೆ ಅವರು ಕೋರಿದ್ದಾರೆ. ಜಿಲ್ಲಾ ಉಪ ಕೃಷಿ ನಿರ್ದೇಶಕ ವೈ.ಎಲ್. ಹಂಪಣ್ಣ, ಸಹಾಯಕ ಕೃಷಿ ಅಧಿಕಾರಿ ವಿನಾಯಕ ಉಪಸ್ಥಿತರಿದ್ದರು.

