ಗಾಂಧೀಜಿ , ಶಾಸ್ತ್ರಿಜಿ ತತ್ವ ಸಿದ್ಧಾಂತ ಪಾಲಿಸೋಣ-  ಪೌರಾಯುಕ್ತ ಬಸವರಾಜ್ ಟನಕೇದಾರ್.

ಸುರಪುರ ಟೈಮ್ಸ್ ವಾರ್ತೆ

ಸುರಪುರ : ಗಾಂಧೀಜಿ ಕೇವಲ ಸ್ವಾತಂತ್ರ್ಯ ಹೋರಾಟಗಾರರು ಮಾತ್ರವಲ್ಲ ಚಿಂತಕ, ಸುಧಾರಕ, ತತ್ವಜ್ಞಾನಿ ಕೂಡ ಆಗಿದ್ದರು ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜೀವನ ಮೌಲ್ಯಗಳನ್ನು ಮುಂದಿನ ಪೀಳಿಗೆ ಅನುಕರಣೀಯ ಮಾಡುವುದು ಬಹಳ ಮಖ್ಯವಾದ ಸ್ವಾತಂತ್ರ ಹೋರಾಟಗಾರರ ಅವರು ಮಾಡಿದ ಸತ್ಯಾಗ್ರಹಗಳ ಬಗ್ಗೆ ಕ್ರಾಂತಿ ಹೋರಾಟದ ಬಗ್ಗೆ ಇಂದಿನ ಯುವ ಪೀಳಿಗೆಯ ಯುವಕರಲ್ಲಿ ಸಂಪೂರ್ಣ ವಿವರವಾದ ಮಾಹಿತಿಯನ್ನು ತಿಳಿಸುವುದು ನಮ್ಮ ನಿಮ್ಮೆಲ್ಲರ ಪಾಲಿಸೋಣ ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಇಂದಿನ ಯುವಕರಲ್ಲಿ ದೇಶದ ಪ್ರಗತಿಯ ಬಗ್ಗೆ ಒಗ್ಗಟ್ಟಿನ ಸೂತ್ರ ಇಂದಿನ ಯುವ ಜನತೆ ಮೈಗುಡಿಸಿಕೊಳ್ಳಬೇಕು ಇಂದಿನ ಯುವಕರು ದುಚ್ಛಟಗಳಿಂದ ದೂರು ಉಳಿಯಬೇಕು.ಅಹಿಂಸಾ ಮಾರ್ಗವನ್ನು ಹಾಕಿ ಕೊಟ್ಟವರು ಮಹಾತ್ಮ ಗಾಂಧೀಜಿ. ಸ್ವಚ್ಛತೆಗೆ ಪ್ರಾಮುಖ್ಯತೆಯನ್ನು ಕೊಡಬೇಕು ಎಂಬುದು ಅವರ ಕನಸು ಹಾಗೂ ತತ್ವ ಸಿದ್ದಾಂತವಾಗಿದೆ. ಈ ನಿಟ್ಟಿನಲ್ಲಿ ನಾವೇಲ್ಲರೂ ಸ್ವಚ್ಛತೆಗೆ ಪ್ರಾಮುಖ್ಯತೆಯನ್ನು ನೀಡಿ ನಮ್ಮ ಸುತ್ತ-ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳೋಣ ಎಂದು ನಗರ ಸಭೆ ಕಾರ್ಯಾಲಯದಲ್ಲಿ ಪೂಜೆ ಸಲ್ಲಿಸಿ ನಗರ ಸಭೆ ಪೌರಾಯುಕ್ತರಾದ ಬಸವರಾಜ ಟಣಕೇದರ ತಿಳಿಸಿದರು .ಸುರಪುರ ನಗರ ಸಭೆ ವತಿಯಿಂದ ನಗರದ ನಗರಸಭೆ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ ಅವರ ಜಯಂತಿ ಹಾಗೂ ಭಾರತದ ಮಾಜಿ ಪ್ರಧಾನಿ ದಿವಂಗತ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನದ ಅಂಗವಾಗಿ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಜನ್ಮದಿನ ಆಚರಣೆ ಮಾಡಿದರು. ಇದೇ ವೇಳೆ ‌ ಮಾತನಾಡಿದ ನಗರಸಭೆ ವ್ಯವಸ್ಥಾಪಕರಾದ ಯಲ್ಲಪ್ಪ ನಾಯಕ್ ಅವರು ಗಾಂಧೀಜಿಯವರ ಸಂದೇಶಗಳು ಸರ್ವಕಾಲಿಕ. ಇಡೀ ಜಗತ್ತಿಗೆ ಶಾಂತಿ ತತ್ವವನ್ನು ಹೇಳಿಕೊಟ್ಟ ಮಹಾನ್ ಮಹಾತ್ಮರಾಗಿದ್ದರೂ ಇವರ ಈ ತತ್ವ ಸಿದ್ಧಾಂತ ಎಂದೆಂದಿಗೂ ಪ್ರಸ್ತುತದಲ್ಲಿದೆ. ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜೀವನ ಮೌಲ್ಯ, ಸಂದೇಶಗಳನ್ನು ಎಲ್ಲರೂ ಪಾಲಿಸಿ ಸಂಸ್ಕೃತ,ಬಲಿಷ್ಠ ಭಾರತ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಕರೆ ನೀಡಿದರು.ಇದೇ ಸಂದರ್ಭದಲ್ಲಿ ನಗರ ಸಭೆಯ ಎಲ್ಲಾ ಕಾರ್ಮಿಕ ಸಿಬ್ಬಂದಿ ವರ್ಗದವರಿಗೆ ಕಾರ್ಮಿಕರ ಕಿಟ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರು, ಹಾಗೂ ನಗರಸಭೆ ಅಧಿಕಾರಿಗಳಾದ ಶಾಂತಪ್ಪ ಹೆಸರೂರ, ಸಮುದಾಯದ ಅಧಿಕಾರಿಗಳಾದ ದುರ್ಗಪ್ಪ ನಾಯಕ್ , ಹನುಮಂತ ಯಾದವ್ ಗುರುಸ್ವಾಮಿ ಹಾಗೂ ಕಾಂಗ್ರೆಸ್ ಮುಖಂಡರಾದ  ಶಕೀಲ್ ಅಹ್ಮದ್, ನಗರ ಸಭೆ ಸದಸ್ಯರಾದ ಜಂಬಣ್ಣ ಕೆಂಗೇರಿ , ನಾಸಿರ್ ಕುಂಡಾಲೆ , ಮುಖಂಡರಾದ ಸೋಮರಾಯ ಶೆಖಾಪುರ್ , ಪ್ರಕಾಶ್ , ಸಿದ್ದರಾಮ್ ಎಲಿಗರ್ ಹಾಗೂ ನಗರಸಭೆಯ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!