ಸೂಗುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಪ್ಪಗಲ ಗ್ರಾಮದಲ್ಲಿ ಆದಿ ಕರ್ಮಯೋಗಿ ಅಭಿಯಾನ
ಸುರಪುರ ಟೈಮ್ಸ್ ವಾರ್ತೆ
ಸುರಪುರ; ದರ್ತಿ ಆಬಾ ಜನ ಜಾತಿಯ ಗ್ರಾಮ ಉತ್ಕರ್ಷ ಕಾರ್ಯಕ್ರಮ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ, ಜಿಲ್ಲಾ ಪಂಚಾಯಿತಿ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಸೂಗುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಗಲ ಗ್ರಾಮದಲ್ಲಿ ಗುರುವಾರ ಆದಿ ಕರ್ಮಯೋಗಿ ಅಭಿಯಾನ ಆಯೋಜಿಸಲಾಗಿತ್ತು.
ಕೇಂದ್ರದಿಂದ ಸಿಗುವ ವಸತಿ, ರಸ್ತೆ, ಚರಂಡಿ, ಕುಡಿಯುವ ನೀರು, ಅಂಗನವಾಡಿ ಕಟ್ಟಡ, ವೈದ್ಯಕೀಯ ಸೇವೆ, ಸ್ಮಶಾನ್ಯ ಅಭಿವೃದ್ಧಿ, ಸಮುದಾಯ ಭವನ ನಿರ್ಮಾಣ, ಧಾರ್ಮಿಕ ಸ್ಥಳಗಳ ಅಭಿವೃದ್ಧಿ, ಅಂಚೆ ಕಚೇರಿ, ದೂರವಾಣಿ ಸಂಪರ್ಕ, ಅನಿಲ ಸಂಪರ್ಕ, ತರಕಾರಿಗಳ ದಾಸ್ತಾನು ಮಳಿಗೆ, ಸಿಸಿ ರಸ್ತೆಗಳು, ಡಾಂಬರೀಕರಣ, ಪ್ರೌಢಶಾಲೆ ನಿರ್ಮಾಣ, ಕೃಷಿ ಯಂತ್ರೋಪಕರಣಗಳ ಕುರಿತು
ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ನವದೆಹಲಿ ಇಂದ ವಿಶೇಷ ಪ್ರತಿನಿಧಿಯಾಗಿ ಪಲ್ಲವಿ ಕುಮಾರಿ ಸಭೆಯಲ್ಲಿ ಮಾಹಿತಿ ನೀಡಿದರು.ಕಾರ್ಯಕ್ರಮದ ಅಂಗವಾಗಿ ಗ್ರಾಮದ ಪ್ರಮುಖ ಬೀದಿಯಲ್ಲಿ ಜಾಥಾ ನಡೆಸಿ ಜನರಿಗೆ ಅರಿವು ಮೂಡಿಸಲಾಯಿತು.ಸದರಿ ಗ್ರಾಮ ಸಭೆಗೆ , ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಸಿದ್ದಣ್ಣ ಅಣಭಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಖಾಧಿಕಾರಿ ಬಸವರಾಜ ಸಜ್ಜನ, ಉಪ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳು ಮಹ್ಮದ್ ಸಲಿಂ ಅಂಗನವಾಡಿಯ ಮೇಲ್ವಿಚಾರಕಿ ಸತ್ಯವ್ವ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರು ಊರಿನ ಮುಖಂಡರು ವಿವಿಧ ಇಲಾಖೆಯ ಸಿಬ್ಬಂದಿ ವರ್ಗದವರು
ಉಪಸ್ಥಿತರಿದ್ದರು .ಕುಪಗಲ್, ಕರ್ನಾಳ, ಚೌಡೇಶ್ವರಿಹಾಳ ಹಾಗೂ ಅಡ್ಡೋಡಗಿ ಗ್ರಾಮಗಳ ಕ್ರಿಯಾಯೋಜನೆಯನ್ನು ಅನುಮೋದನೆ ಪಡೆಯಲಾಯಿತು.ಇದೇ ಸಂದರ್ಭದಲ್ಲಿ ಆದಿ ಸೇವಾ ಕೇಂದ್ರದ ಉದ್ಘಾಟನೆಯನ್ನು ಮಾಡಿಸಲಾಯಿತು.






