ಕೆಂಭಾವಿಯ ಮಲ್ಲಯ್ಯನ ಬಂಡಿಯ ವಿಜೃಂಬಣೆಯ ಜಾತ್ರಾ ಉತ್ಸವ
ಸುರಪುರ ಟೈಮ್ಸ್ ವಾರ್ತೆ
ಸುರಪುರ:ಕೆಂಭಾವ ಪಟ್ಟಣದ ಮಲ್ಲಯ್ಯನ ಬಂಡಿ ಜಾತ್ರಾ ಉತ್ಸವ ಶುಕ್ರವಾರ ವಿಜೃಂಬಣೆಯಿಂದ ಜರುಗಿತು.ಮಲ್ಲಯ್ಯನ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ ಪೂಜಾ ವಿಧಿವಿಧಾನಗಳ ನಂತರ ಸಿಂಗಾರಗೊಂಡಿದ್ದ ರಥದಲ್ಲಿ ಮಲ್ಲಯ್ಯ ಏರುತ್ತಿದ್ದಂತೆ ಏಳುಕೋಟಿ ಏಳುಕೋಟಿ ಘೋಷಣೆ ಮುಗಿಲು ಮುಟ್ಟಿದವು.
ನಂತರ ಚೌಡಿ ಕಟ್ಟೆಗೆ ಆಗಮಿಸಿದ ಬಂಡಿ ಡೊಳ್ಳು..ಅಲಗ…ಸಂಬಳ ವಾದ್ಯಗಳ ನಂತರ ಸೀಬಾರ ಕ್ಷೇತ್ರಕ್ಕೆ ತೆರಳಿತು.
ಬಂಡಿ ಮುಖ್ಯ ಬಜಾರ ಬತ್ತಿದ್ದಂತೆ ನೂರಾರು ಯುವಕರು ಬಂಡಿಯನ್ನು ಹಿಂದೆ ಮುಂದೆ ಎಳೆಯುವ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆದರು. ಇದು ಮೊದಲಿನಿಂದಲು ನಡೆದುಕೊಂಡ ಬಂದ ಸಂಪ್ರದಾಯವಾಗಿದ್ದು ಜಾತ್ರೆಯಲ್ಲಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಸಾವಿರಾರು ಭಕ್ತರು ಆಗಮಿಸಿ ಜಾತ್ರೆಯನ್ನು ಕಣ್ತುಂಬಿಕೊಂಡರು.




