ಸುರಪುರ ಪತ್ರಕರ್ತರಿಂದ ಶಾಸಕರಿಗೆ ಬನ್ನಿ ವಿನಿಮಯ
ಸುರಪುರ ಟೈಮ್ಸ್ ವಾರ್ತೆ
ಸುರಪುರ: ದಸರಾ ಹಬ್ಬದ ನಿಮಿತ್ಯ ಇಂದು ಶುಕ್ರವಾರ ಸಂಜೆ ಸುರಪುರ ತಾಲೂಕು ಪತ್ರಕರ್ತ ಸಂಘದ ಸದಸ್ಯರು ಶಾಸಕ ರಾಜ ವೇಣುಗೋಪಾಲ ನಾಯಕ ಅವರ ನಿವಾಸದಲ್ಲಿ ಭೇಟಿಯಾಗಿ ಬನ್ನಿ ವಿನಿಮಯ ಮಾಡಿಕೊಂಡು ದಸರಾ ಹಬ್ಬದ ಶುಭಾಶಯ ಕೋರಿದರು ಇದೇ ಸಂದರ್ಭದಲ್ಲಿ ಶಾಸಕರು ಕೂಡ ಎಲ್ಲಾ ಪತ್ರಕರ್ತರಿಗೆ ದಸರಾ ಹಬ್ಬದ ಶುಭಾಶಯಗಳು ತಿಳಿಸಿದರು .ನಂತರ ಪತ್ರಕರ್ತ ಸಂಘದ ಅಧ್ಯಕ್ಷ ಶ್ರೀಕರ್ ಭಟ್ ಜೋಶಿ ಅವರು ಪತ್ರಿಕಾ ಭವನದ ಕಾಮಗಾರಿಯ ಪ್ರಗತಿ ಕುರಿತು ಶಾಸಕರ ಗಮನಕ್ಕೆ ತಂದರು ಕಾಮಗಾರಿಯ ವೇಗ ಹೆಚ್ಚಿಸಿ ಆದಷ್ಟು ಬೇಗನೆ ಪತ್ರಿಕಾ ಭವನ ನಿರ್ಮಿಸಿ ಕೊಡುವಂತೆ ಅಧಿಕಾರಿಗಳಿಗೆ ಸೂಚಿಸುವದಾಗಿ ಶಾಸಕರು ಪತ್ರಕರ್ತರಿಗೆ ಭರವಸೆ ನೀಡಿದರು. ಬಳಿಕ ಹಲವಾರು ವಿಷಯಗಳ ಕುರಿತು ಶಾಸಕರೊಂದಿಗೆ ಪತ್ರಕರ್ತರು ಚರ್ಚಿಸಲಾಯಿತು .ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡ ಹಾಗೂ ಶಾಸಕರ ಸಹೋದರ ರಾಜಾ ಸಂತೋಷ ನಾಯಕ ಪತ್ರಕರ್ತರ ಸಂಘದ ಗೌರವಾಧ್ಯಕ್ಷರಾದ ಗಿರೀಶ ಶಾಬಾದಿ, ಪ್ರಧಾನ ಕಾರ್ಯದರ್ಶಿ, ಕ್ಷೀರಲಿಂಗಯ್ಯ ಹಿರೇಮಠ, ಹೊನ್ನಪ್ಪ ತೇಲ್ಕೂರ್, ರಾಜು ಕುಂಬಾರ,ಪರಶುರಾಮ ನಾಯಕ ,ಪುರುಷೋತ್ತಮ ನಾಯಕ, ಮಹದೇವಪ್ಪ ಬೊಮ್ಮನಹಳ್ಳಿ , ಮಲ್ಲು ಗುಳಿಗಿ, ಹುಸ್ಮಾನ ಅಮ್ಮಾಪೂರ ಕೆ.ಕೆ ಪರದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.





