ರಾಷ್ಟೀಯ ಅಧ್ಯಕ್ಷ ಜೈನ್‌ಗೆ ಹೃದಯಸ್ಪರ್ಶಿ ಅಭಿನಂದ ಸಮಾರಂಭ |ರಾಷ್ಟಮಟ್ಟದಲ್ಲಿ ಶೂರ ನಾಡಿನ ಕೀರ್ತಿ ಜೈನ್ ಬೆಳಗಿಸಿದ್ದಾರೆ;ಡಾ ಸುರೇಶ ಸಜ್ಜನ

ಫೋಟೊ : ೩ಸುರ್೧ ಸುರಪುರ ಭುವಾಲ್ ಮಾತಾ ಮಂದಿರದ ಚಾಜೇಡ್ ಪರಿವಾರದ ರಾಷ್ಟಿçÃಯ ಅಧ್ಯಕ್ಷ ಕಿಶೋರಚಂದ ಜೈನ್‌ಗೆ ಹೃದಯಸ್ಪರ್ಶಿಯಾಗಿ ಸನ್ಮಾನಿಸಲಾಯಿತು.

ಸುರಪುರ:ನಗರದ ಕಿಶೋರಚಂದ ಜೈನ್ ಅವರು ರಾಜಸ್ತಾನದ ಬಿರಾಮಿ ಗ್ರಾಮದಲ್ಲಿನ ಭುವಾಲ್ ಮಾತಾ ದೇವಸ್ಥಾನದ ಚಾಚೇಡ್ ಪರಿವಾರದ ರಾಷ್ಟೀಯ ಅಧ್ಯಕ್ಷರಾಗಿ ಎರಡನೇ ಬಾರಿಗೆ ಆಯ್ಕೆಯಾಗುವ ಮೂಲಕ ರಾಷ್ಟಮಟ್ಟದಲ್ಲಿ ಶೂರರ ನಾಡಿನ ಕೀರ್ತಿ ಮೊತ್ತಮ್ಮೆ ಬೆಳಗಿಸಿದ್ದಾರೆ ಎಂದು ಕಲಬುರಗಿ-ಯಾದಗಿರಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಾ.ಸುರೇಶ ಸಜ್ಜನ ಹೇಳಿದರು.
ನಗರದ ಜೈನ್ ನಿವಾಸದ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಭುವಾಲ್ ಮಾತಾ ಮಂದಿರದ ಚಾಜೇಡ್ ಪರಿವಾರದ ರಾಷ್ಟೀಯ ಅಧ್ಯಕ್ಷರಾಗಿ ಆಯ್ಕೆಯಾಗಿ ಪ್ರಥಮ ಬಾರಿಗೆ ನಗರಕ್ಕೆ ಆಗಮಿಸಿದ ಕಿಶೋರಚಂದ ಜೈನ್ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಜೈನ್ ಅವರು ಪ್ರಥಮ ಬಾರಿಗೆ ಅಧ್ಯಕ್ಷರಾದಾಗ ಚಾಜೇಡ್ ಪರಿವಾರದ ಪ್ರೀತಿ-ವಾತ್ಸಲ್ಯ ಗೆದ್ದು ಅಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಧಾರ್ಮಿಕತೆಗೆ ಆದ್ಯತೆ ನೀಡಿ, ಕಟ್ಟಡ ನಿರ್ಮಾಣ, ಭಕ್ತರಿಗೆ ಗೆಸ್ಟ್ ಹೌಸ್ ಸೇರಿ ಇನ್ನಿತರ ಪ್ರಗತಿಪರ ಕೆಲಸ ಮಾಡಿರುವುದರಿಂದ ಎರಡನೇ ಬಾರಿಗೂ ವಿಜಯಶಾಲಿಯಾಗಿ ಮತ್ತೊಮ್ಮೆ ಸಮಾಜದ ರಾಷ್ಟೀಯ ಅಧ್ಯಕ್ಷರಾಗಿರುವುದು ನಿಜಕ್ಕೂ ಪ್ರಶಂಸನೀಯ. ಸಹೋದರ ಗ್ಯಾನಚಂದ ಜೈನ್ ಅವರ ಸೇವಾ ಮನೋಭಾವ ಶ್ಲಾಘನೀಯ. ಇಬ್ಬರೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಚ್.ಸಿ.ಪಾಟೀಲ್ ಮಾತನಾಡಿ, ಕಿಶೋರಚಂದ ಜೈನ್ ಅವರು ದೈವಿ ಭಕ್ತರು. ದೇವಿಯ ಆಶೀರ್ವಾದಿಂದ ಅವರು ಎರಡನೇ ಬಾರಿಗೆ ಗೆಲುವು ಸಾಧಿಸಿ ರಾಷ್ಟೀಯ ಅಧ್ಯಕ್ಷರಾಗಿದ್ದಾರೆ. ಯಾವ ಮನುಷ್ಯ ಸಮಾಜಕ್ಕೆ ಒಳ್ಳೆಯ ಕೆಲಸ ಮಾಡುತ್ತಾನೆ ಅಂತಹವರಿಗೆ ದೇವರು ಯಾವತ್ತು ಕೈಬಿಡುವುದಿಲ್ಲ. ಅದಕ್ಕೆ ತಾಜಾ ಉದಾಹರಣೆ ಜೈನ್ ಆಗಿದ್ದಾರೆ ಎಂದರು.
ಜೈನ್ ಮತ್ತು ಅವರ ಸಹೋದರ ಗ್ಯಾನಚಂದ ಜೈನ್ ಅಣ್ಣ, ತಮ್ಮಂದಿರ ಸೌಹಾರ್ದತೆ ಶ್ಲಾಘನೀಯ. ಪ್ರತಿಯೊಬ್ಬರು ಇವರನ್ನು ನೋಡಿ ಕಲಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.ಇವರಿಗೆ ದೇವರು ಎಲ್ಲವನ್ನೂ ಕೊಟ್ಟಿದ್ದಾನೆ. ದೇವಿಯ ಆಶೀರ್ವಾದದಿಂದ ಅವರ ಸಮಾಜಕ್ಕೂ ನಮ್ಮ ಜಿಲ್ಲೆ ಮತ್ತು ತಾಲೂಕಿಗೆ ಇನ್ನಷ್ಟು ಒಳ್ಳೆಯ ಕಾರ್ಯಗಳನ್ನು ಮಾಡಲಿ ಎಂದು ಹಾರೈಸಿದರು.
ಜಿಪಂ ಮಾಜಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ್ ವಜ್ಜಲ್ ಮಾತನಾಡಿ, ಸುರಪುರ ತಾಲೂಕಿಗೆ ಹೆಮ್ಮೆಯ ಕಿರೀಟ ತರುವ ಕೆಲಸ ಕಿಶೋರ ಮಾಡಿದ್ದಾರೆ. ರಾಷ್ಟ ಮಟ್ಟದಲ್ಲಿ ಒಂದು ಸಮಾಜ, ದೇವಸ್ಥಾನದ ಅಧ್ಯಕ್ಷರಾಗುವುದು ಸಾಮಾನ್ಯವಲ್ಲ. ಅವರು ಮಾಡಿದ ಅಭಿವೃದ್ದಿ ಕೆಲಸ ಕಾರ್ಯಗಳಿಂದ ಎರಡನೇ ಬಾರಿಗೆ ಅವಕಾಶ ಸಿಕ್ಕಿದೆ. ಅವರು ಸಮಾಜಕ್ಕೆ ಶ್ರಮಪಟ್ಟು ಶ್ರದ್ದಾ-ಭಕ್ತಿಯಿಂದ, ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿರುತ್ತಾರೆ. ಅವರ ಯಶಸ್ವಿಗೆ ಅವರ ಸಹೋದರ ಗ್ಯಾನಚಂದ ಜೈನ್ ಶಕ್ತಿ ಮತ್ತು ಹುರುಪು ಕಾರಣ ಎಂದು ಬಣ್ಣಿಸಿದರು.
ಯಾದಗಿರಿ ಯೂಥ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಿಶೋರಚಂದ ಜೈನ್ ಅವರ ಶಿಸ್ತು, ಸಂಯಮ, ತಾಳ್ಮೆ, ಸಹಕಾರ ಮನೋಭಾವ ಮತ್ತು ಸಮಾಜ ಸೇವೆ ನಿಜಕ್ಕೂ ಮಾದರಿಯವಾಗಿದೆ. ಅವರ ಅಭಿವೃದ್ಧಿ ಮನೋಭಾವ, ಸೇವಾ ಕಾರ್ಯವನ್ನು ಮೆಚ್ಚಿ ಭುವಾಲ್ ಮಾತಾ ದೇವಸ್ಥಾನದ ಚಾಚೇಡ್ ಪರಿವಾರದವರು ಎರಡನೇ ಬಾರಿಗೆ ರಾಷ್ಟೀಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ ಇದು ಸಾಮಾನ್ಯ ಮಾತಲ್ಲ ಎಂದರು.
ಸನ್ಮಾನ ಸ್ವೀಕರಿಸಿ ಕಿಶೋರಚಂದ ಜೈನ್ ಮಾತನಾಡಿ, ಪ್ರಥಮ ಬಾರಿಗೆ ಅಧ್ಯಕ್ಷನಾದ ಸಮಯದಲ್ಲಿ ಮಾಡಿದ ಸಮಾಜದ ಅನೇಕ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮೆಚ್ಚಿ ಮತ್ತೊಮ್ಮೆ ನನಗೆ ಗೆಲ್ಲಿಸಿ ಎರಡನೇ ಬಾರಿಗೆ ರಾಷ್ಟೀಯ ಅಧ್ಯಕ್ಷನನ್ನಾಗಿ ಮಾಡಿದ್ದಾರೆ. ಸಮಾಜದ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಸೇವೆ ಮಾಡುವೆ ಎಂದು ಭರವಸೆ ನೀಡಿದ ಅವರು, ನನ್ನ ಗೆಲುವಿನಲ್ಲಿ ಸಹೋದರ ಗ್ಯಾನಚಂದ ಜೈನ್ ಅವರ ಶ್ರಮವೂ ಅಪಾರವಾಗಿದೆ ಎಂದರು.
ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ರಾಜಾ ಮುಕುಂದ ನಾಯಕ, ಬೃಹತ್ ಉದ್ಯಮಿ ಗ್ಯಾನಚಂದ ಜೈನ್ ವೇದಿಕೆಯಲ್ಲಿದ್ದರು. ನಗರದ ಗಣ್ಯರು, ಪ್ರಮುಖರು, ವಿವಿಧ ಪಕ್ಷಗಳ ಮುಖಂಡರು, ವೈದ್ಯರು, ಗಂಜ್ ಮತ್ತು ಕಿರಾಣಿ ವರ್ತಕರು, ನಾನಾ ಇಲಾಖೆಯ ಅಧಿಕಾರಿಗಳು, ಇತರೆ ವ್ಯಾಪಾರಿಗಳು, ನಾಗರಿಕರು ಭಾಗವಹಿಸಿ ಕಿಶೋರಚಂದ ಜೈನ್ ಅವರಿಗೆ ಸನ್ಮಾನಿಸಿ ಗೌರವಿಸಿದರು. ಪ್ರಕಾಶ ಅಂಗಡಿ ಕನ್ನೆಳ್ಳಿ ನಿರೂಪಿಸಿ ವಂದಿಸಿದರು.

ಜನ್ಮಭೂಮಿ, ಕರ್ಮ ಭೂಮಿ ಮರೆಯಲಾರೆ
ನನ್ನಗೆ ಜನ್ಮಕೊಟ್ಟ ಭೂಮಿ, ಅನ್ನಕೊಟ್ಟ ಕರ್ಮ ಭೂಮಿಯನ್ನು ಯಾವತ್ತು ಮರೆಯಲಾರೆ. ಭುವಾಲ್ ಮಾತಾ ಮಂದಿರ ಸಾಕಷ್ಟು ಸಮೃದ್ದಿ ಹೊಂದಿದೆ. ಅನೇಕ ಧಾರ್ಮಿಕ ಕಾರ್ಯಗಳ ಜತೆಯಲ್ಲಿ ಚಾಚೇಡ್ ಪರಿವಾರದ ದೇವಸ್ಥಾನಗಳ ಜೀರ್ಣೋದ್ಧಾರ, ಸಮಾಜದ ಬಾಂಧವರಿಗೆ ಆರ್ಥಿಕ ಸಹಾಯ ಸೇರಿ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಇನ್ನಷ್ಟು ಒಳ್ಳೆಯ ಕಾರ್ಯಗಳ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸುವೆ ಎಂದು ಕಿಶೋರಚಂದ ಜೈನ್ ತಿಳಿಸಿದರು.

ಈ ಬಾರಿಯ ಚುನಾವಣೆ ಭಾರೀ ಪೈಪೋಟಿಯಿಂದ ಕೂಡಿತ್ತು. ಹೊರ ದೇಶದಲ್ಲಿರುವವರು ಸಹ ಸ್ಪರ್ಧಿಸಿದ್ದರು. ದೇವಿಯ ಆಶೀರ್ವಾದ, ಶ್ರದ್ಧೆ-ಭಕ್ತಿ ಮತ್ತು ಪ್ರಥಮ ಬಾರಿಗೆ ನಾನು ಅಧ್ಯಕ್ಷನಾದಾಗ ಮಾಡಿದ ಅನೇಕ ಅಭಿವೃದ್ಧಿ ಕೆಲಸಗಳು ನನ್ನ ಕೈಯಿಡಿದು ಎರಡನೇ ಬಾರಿಗೆ ಒಂದು ಸಮಾಜದ ರಾಷ್ಟೀಯ ಅಧ್ಯಕ್ಷನಾಗಿ ಆಯ್ಕೆಯಾದೆ ಎಂದು ಹೇಳಲು ಸಂತೋಷವೆನ್ನಿಸುತ್ತದೆ ಎಂದರು.

ಫೋಟೊ :  ಸುರಪುರ ಭುವಾಲ್ ಮಾತಾ ಮಂದಿರದ ಚಾಜೇಡ್ ಪರಿವಾರದ ರಾಷ್ಟೀಯ ಅಧ್ಯಕ್ಷ ಕಿಶೋರಚಂದ ಜೈನ್‌ಗೆ ಹೃದಯಸ್ಪರ್ಶಿಯಾಗಿ ಸನ್ಮಾನಿಸಲಾಯಿತು

Leave a Reply

Your email address will not be published. Required fields are marked *

error: Content is protected !!