ಅಂತೂ ಇಂತೂ ಸುರಪುರ ನಗರಕ್ಕೆ 24/7 ನೀರು ಬಂತು!
ಸುರಪುರ ಟೈಮ್ಸ್ ವಾರ್ತೆ
ಸುರಪುರ : ನಗರದಲ್ಲಿ ಕಳೆದ ಕೆಲ ದಿನಗಳಿಂದ ನಿರಂತರ ನೀರು ಪೂರೈಕೆ ವ್ಯವಸ್ಥೆ ನಿಂತು ಹೋಗಿದ್ದರಿಂದ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ದಸರಾ ಹಬ್ಬ ಮುಗಿದರೂ ನೀರಿಲ್ಲದೆ ಜನ ಹೈರಾಣಾಗಿ ಹೋಗಿದ್ದರು.ತಾಲೂಕಿನ ದೇವಾಪುರ ಗ್ರಾಮದ ಹತ್ತಿರ ನೀರಿನ ಕೊಳುವೆ ಮಾರ್ಗ ದುರಸ್ತಿ ಇದ್ದು 3-4 ದಿನ ನೀರು ಪೂರೈಕೆ ಇರುವುದಿಲ್ಲ ಸಾರ್ವಜನಿಕರು ಸಹಕರಿಸಬೇಕು ಎಂದು ನಗರಸಭೆ ಪ್ರಕಟಣೆಯಲ್ಲಿ ತಿಳಿಸಿತ್ತು. ಸಂಪೂರ್ಣ ಸ್ಥಗಿತ ಗೊಂಡಿದ್ದ ಪೈಪ್ ಲೈನನ್ನು ಸುಮಾರು 6 ದಿನಗಳ ನಂತರ ದುರಸ್ತಿ ಮಾಡಿ ಶುಕ್ರವಾರ ರಾತ್ರಿಯಿಂದ ಸುರಪುರ ನಗರ ಸಭೆಯ ಎಲ್ಲಾ ವಾರ್ಡ್‌ಗಳಿಗೂ ಕುಡಿಯುವ ನೀರು ಸರಬರಾಜು ಹಾಗುತ್ತದೆ. ಹಬ್ಬಕ್ಕೆ ನೀರು ಕೊಟ್ಟರೆ ಸಾಕು ಎಂದಿದ್ದ ಸಾರ್ವಜನಿಕರು ಹಬ್ಬ ಮುಗಿದ ಮೇಲೆ ಆದರೂ ಅಂತೂ ಇಂತೂ ಕುಡಿಯುವ ನೀರು ಬಂತು ಎಂದು ನಿಟ್ಟುಸಿರು ಬಿಟ್ಟರು.



