ಆರ್.ಎಸ್.ಎಸ್.ಶತಮಾನೋತ್ಸವ ಹಿನ್ನಲೆ ಗಣವೇಶ ಹಾಕಿದ ಬಾಲಕ

ಸುರಪುರ ಟೈಮ್ಸ್ ವಾರ್ತೆ

ಹುಣಸಗಿ: ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್.ಎಸ್.ಎಸ್) ತನ್ನ ಶತಮಾನೋತ್ಸವದ ಸಂಭ್ರಮವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ, ಕೇವಲ ಎರಡು ವರ್ಷದ ಬಾಲಕ ಶ್ಲೋಕ್ ವಡವಡಗಿ ಗಣವೇಷ ಧರಿಸಿ ಎಲ್ಲರ ಗಮನ ಸೆಳೆದಿದ್ದಾನೆ.
ಪಟ್ಟಣದ ವೆಂಕಟೇಶ ಮತ್ತು ವಿದ್ಯಾ ಕುಲಕರ್ಣಿ ಪುತ್ರನಾದ ಶ್ಲೋಕ್ ವಡವಡಗಿಯು ಗಣವೇಶದಲ್ಲಿ ಅತ್ಯಂತ ಸುಂದರವಾಗಿ ಕಾಣುತ್ತಿದ್ದು, ನೋಡುಗರ ಗಮನ ಸೆಳೆಯುತ್ತಿದೆ.
ಶ್ಲೋಕ್ ತಾಯಿ ವಿದ್ಯಾ ಅವರು, ಖಾಕಿ ಪ್ಯಾಂಟ್, ಬಿಳಿ ಅಂಗಿ, ಮತ್ತು ಕಪ್ಪು ಫೆಟಾ ಧರಿಸಿ ಮಗುವಿಗೆ ಗಣವೇಶ ಹಾಕಿ ಸಿದ್ಧಮಾಡಿದ್ದರು. ಇದೀಗ ಈ ಫೋಟೋ ವೈರಲ್ ಆಗಿದ್ದು, ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ.

ಗ್ರಾಮಸ್ಥರು ಮತ್ತು ಸಂಘದ ಕಾರ್ಯಕರ್ತರು ಈ ದೃಶ್ಯವನ್ನು ಸಂಭ್ರಮದಿಂದ ಸ್ವಾಗತಿಸಿದರು. ಇದು ಸಂಘದ ತತ್ವಗಳಿಗೆ ಕುಟುಂಬದಿಂದಲೇ ಬರುವ ಬದ್ಧತೆಯ ಉದಾಹರಣೆ ಎಂದು ಆರ್.ಎಸ್.ಎಸ್. ಪ್ರಮುಖ ಮನೋಹರ್ ಪತ್ತಾರ ಅಭಿಪ್ರಾಯಪಟ್ಟರು. ಬಾಲಕನ ನಿಷ್ಕಪಟ ನಗು ಮತ್ತು ಸರಳವಾದ ಹೆಜ್ಜೆಗಳು ಸಂಭ್ರಮಕ್ಕೆ ಹೊಸ ಬಣ್ಣ ತುಂಬಿದವು.

ಆರ್‌ಎಸ್‌ಎಸ್ ಸಂಘಟನೆಯು ತನ್ನ ೧೦೦ನೇ ವರ್ಷದ ಪ್ರವೇಶವನ್ನು ದೇಶವ್ಯಾಪಕವಾಗಿ ವಿವಿಧ ಕಾರ್ಯಕ್ರಮಗಳ ಮೂಲಕ ಆಚರಿಸುತ್ತಿದೆ. ಹುಣಸಗಿಯ ಈ ಬಾಲಕನ ಗಣವೇಶ ಫೋಟೋ ದೇಶಭಕ್ತಿ ಮತ್ತು ಸೇವಾ ಮನೋಭಾವ ಬೆಳೆಸುವ ಸಂಕೇತವಾಗಿ ಎಲ್ಲರ ಮನಸ್ಸನ್ನು ಮುಟ್ಟಿದೆ ಎಂದು ಆರ್.ಎಸ್.ಎಸ್.ನ ನಂದಲಾಲ್ ಠವಾಣಿ ಹೇಳಿದರು.

ಪೋಟೋ :ಹುಣಸಗಿ ಪಟ್ಟಣದ ವಿದ್ಯಾ ಮತ್ತು ವೆಂಕಟೇಶ ದಂಪತಿಯ ಪುತ್ರ ಶ್ಲೋಕ್ ವಡವಡಗಿ ಅವರು ಆರ್‌ಎಸ್‌ಎಸ್ ಶತಮಾನೋತ್ಸವ ಹಿನ್ನಲೆಯಲ್ಲಿ ಗಣವೇಶ ಹಾಕಿ ಸಂಭ್ರಮಿಸಿದ

Leave a Reply

Your email address will not be published. Required fields are marked *

error: Content is protected !!