ಜನ ಸಾಮಾನ್ಯರ ವೇದಿಕೆಯ ವತಿಯಿಂದ ಯುವ ಪರಿವರ್ತನೆ ಯಾತ್ರೆಗೆ ಸುರಪುರ ಜನತೆಯಿಂದ ಅಭೂತಪೂರ್ವ ಬೆಂಬಲ
ಸುರಪುರ ಟೈಮ್ಸ್ ವಾರ್ತೆ
ಸುರಪುರ:ಜನ ಸಾಮಾನ್ಯರ ವೇದಿಕೆಯ ವತಿಯಿಂದ ಹತ್ತು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೀದರದಿಂದ ಬೆಂಗಳೂರಿನವರೆಗೆ 1,200 ಕಿ.ಮೀ ದೂರದ ಹಾದಿಯಲ್ಲಿ ನಡೆಯುತ್ತಿರುವ “ಯುವ ಪರಿವರ್ತನೆ ಯಾತ್ರೆ” ಇಂದು ಸುರಪುರ ನಗರದ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆಯೊಂದಿಗೆ ಸಾಗಿತು..ಈ ಯಾತ್ರೆಗೆ ತಾಲೂಕಿನ ಯುವಕರಿಂದ ಭಾರಿ ಪ್ರಮಾಣದ ಬೆಂಬಲ ವ್ಯಕ್ತವಾಗಿ, ಸಾರ್ವಜನಿಕರು ಭಾಗವಹಿಸಿ, ಯಾತ್ರೆಯ ಗುರಿಯನ್ನು ಶಕ್ತಿಯಾಗಿ ಬೆಂಬಲಿಸಿದ್ದರು. ವಕೀಲ ಯಲ್ಲಪ್ಪ ಹೆಗ್ಗಡೆ ಅವರ ನೇತೃತ್ವದಲ್ಲಿ ಅಕ್ಟೋಬರ್ 2ರಿಂದ 13ರವರೆಗೆ ನಡೆಯುತ್ತಿರುವ ಈ ಯಾತ್ರೆ, ರಾಜ್ಯದ ಹಲವು ಜಿಲ್ಲೆಗಳ ಮೂಲಕ ಸಾಗುತ್ತಿದೆ ಎಂದರು.
ಪ್ರತಿಯೊಂದು ಶಾಲೆಗೆ ಮೂಲಭೂತ ಸೌಕರ್ಯ ಒದಗಿಸಬೇಕು. ಸರ್ಕಾರಿ ವಿಶ್ವವಿದ್ಯಾಲಯಗಳು ಉನ್ನತಿಕರಿಸಬೇಕು. ಯುಪಿಎಸ್ಸಿ ಮಾದರಿಯಲ್ಲಿ ಕೆಪಿಎಸ್ಸಿ ಸುಧಾರಿಸಬೇಕು. ಕೈಗಾರಿಕೆಯಲ್ಲಿ ಉದ್ಯೋಗ ಮೀಸಲಾತಿ ನೀಡಬೇಕು. ಸರ್ಕಾರಿ ಹುದ್ದೆಗಳು ಭರ್ತಿ ಮಾಡಬೇಕು. ತಾಲೂಕಿಗೊಂದು ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಬೇಕು. ವಿದ್ಯುತ್ ವಲಯ ಖಾಸಗಿಕರಣ ಮಾಡುವುದನ್ನು ನಿಲ್ಲಿಸಬೇಕು. ಕೃಷಿ ಉತ್ಪನ್ನಗಳಿಗೆ ಖಾತ್ರಿ ಬೆಲೆ ಒದಗಿಸಬೇಕು. ಸರಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಎಸ್ಸಿ, ಎಸ್ಟಿ ಮತ್ತು 2ಎ ವರ್ಗಕ್ಕೆ ಮೀಸಲಾತಿ ಒದಗಿಸಬೇಕು ಎನ್ನುವ ಹಲವಾರು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಈ ಯಾತ್ರೆ ಕೈಗೊಳ್ಳಲಾಗಿದೆ ಯಾತ್ರೆಯ ಸಂಚಾಲಕ ಯಲ್ಲಪ್ಪ ಹೆಗಡೆ ಅವರು ಹೇಳಿದ್ದಾರೆ.ನಮ್ಮ ಯಾತ್ರೆ ಸಾಗುವ ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದು. ಕೊನೆಗೆ ಅ. 13 ರಂದು ಯಾತ್ರೆಯು ಬೆಂಗಳೂರಿಗೆ ತಲುಪಲಿದೆ. ಅಂದು ಮಧ್ಯಾಹ್ನ 2 ಗಂಟೆಗೆ ಫ್ರೀಡ್ಂ ಪಾರ್ಕ್ ನಲ್ಲಿ ಯಾತ್ರೆಯು ಮುಕ್ತಾಯಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜಯ ಕರ್ನಾಟಕ ರಕ್ಷಣಾ ಸೇನೆ ಸುರಪುರ ತಾಲೂಕ ಅಧ್ಯಕ್ಷ ಮಲ್ಲಪ್ಪ ನಾಯಕ ಕಬಾಡಗೇರ, ಕಾರ್ಯಧ್ಯಕ್ಷ ಶಿವರಾಜ ವಗ್ಗರ್, ವಿಜಯ ಕುಮಾರ ಬಾದ್ಯಾಪುರ,ಕೃಷ್ಣ ಹಾವಿನ ಕುಂಬರಪೇಟ, ಹನುಮಂತ ಬಂಡಾರಿ, ಶಿವಕುಮಾರ ದೀವಳಗುಡ್ಡ,ಹಣಮಂತ ಶುಕ್ಲ,ರಂಗಪ್ಪ ರುಕ್ಮಾಪುರಾ, ಚಂದ್ರು ಏಲಿಗಾರ ತಾಲೂಕ ಅಧ್ಯಕ್ಷರು ನೆರವು ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಸಂಘ,ಮುಖಂಡರುಗಳಾದ ವಿಜಯ ಕುಮಾರ್ ಬಾದ್ಯಪುರ ರಾಜು ಕಲಾಲ್,ವಿಶ್ವರಾಜ ಒಂಟುರ್, ಸಚಿನ ಕುಮಾರ ನಾಯಕ,ಬಸ್ಸು ಡಿ ಆರ್,ಚನ್ನಪ್ಪ , ಹನಮಂತ ಸತ್ಯಂಪೇಟೆ,ಫಯಾಜ್ ರಂಗಂಪೆಟ,ಲೋಕೇಶ ಸುರಪುರ ಮತ್ತು ಇನ್ನು ಅನೇಕ ವಿದ್ಯಾರ್ಥಿಗಳು, ಮುಖಂಡರುಗಳು, ಹೋರಾಟಗಾರರು ಹಾಗೂ ಇನ್ನಿತರರು ಯುವ ಪರಿವರ್ತನಾ ಯಾತ್ರೆಗೆ ಬೆಂಬಲಿಸಿ ಯಶಸ್ವಿಯಾಗಲೆಂದು ಶುಭ ಹಾರೈಸಿದರು.






