ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ

ಸುರಪುರ ಟೈಮ್ಸ್ ವಾರ್ತೆ

ಸುರಪುರ: ದಸರಾ ಉತ್ಸವ ಪ್ರಯುಕ್ತ ಮಹಿಯರಿಗೆ ಉಡಿ ತುಂಬುವ ಮೂಲಕ ನಮ್ಮ ಹಳೆಯ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗಲು ಹಾಗೂ ಉಡಿ ತುಂಬುವ ಮಹತ್ವದ ಬಗ್ಗೆ ಮಹಿಳೆಯರಿಗೆ ಅರಿವು ಹಾಗೂ ಜಾಗೃತಿ ಮೂಡಿಸುವ ಕೆಲಸ ಉತ್ತಮವಾಗಿದೆ’ ಬನಶಂಕರಿ ಪ್ರದಾನ ಅರ್ಚಕ ಲಿಂಗಯ್ಯ ಸ್ವಾಮಿ ಹಿರೇಮಠ ತಿಳಿಸಿದರು.

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿರುವ ಶ್ರೀ ಬನಶಂಕರಿ ಈಶ್ವರಗುಡಿಯ ಮಹಾ ನವಮಿಯಂದು ( ಆಯುಧ ಪೂಜೆ) ಮಹಾಪೂಜೆ ಏರ್ಪಡಿಸಿದ ಸಂದರ್ಭದಲ್ಲಿ 125 ಜನ ಮುತ್ತೈದರಿಗೆ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.‘ಮಹಿಳೆಯ ರನ್ನು ಒಗ್ಗೂಡಿಸುವುದರ ಜತೆ ಅವರು ಪಾಲಿಸಬೇಕಾದ ಸಂಪ್ರದಾಯಗಳನ್ನು ತಿಳಿ ಹೇಳುವ ಕೆಲಸ ಮಾಡುತ್ತಿರುವುದು. ದೇವರ ಧ್ಯಾನ ಹಾಗೂ ಬದುಕಿನ ಜಂಜಾಟದ ನಡುವೆ ಎಲ್ಲಾ ಮಹಿಳೆಯರೂ ಒಟ್ಟಿಗೆ ಸೇರಿ ಆಚರಿಸುವ ಉಡಿ ತುಂಬುವ ಕೆಲಸ ಅತ್ಯಂತ ಪುಣ್ಯದ ಕಾಯಕವಾಗಿದೆತಿಳಿಸಿದರು. ಬನಶಂಕರಿ ದೇವಿಗೆ ವಿಶೇಷವಾಗಿ ಅಲಂಕರಿಸಲಾಗಿತ್ತು. ಅರ್ಚಕ ಲಿಂಗಯ್ಯಸ್ವಾಮಿ ಹಿರೇಮಠ ನೇತೃತ್ವದಲ್ಲಿ ಹೋಮ ಹವನಾದಿ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ದೇವಸ್ಥಾನ ಸಮಿತಿಯ ಮಲಕಾಜಪ್ಪ ಮಿಟ್ಟಾ, ಶರಣಪ್ಪ ಗುಮ್ಮಾ, ಲಿಂಗಣ್ಣ ರಾಯಚೂರಕರ, ಚಂದ್ರಶೇಖರ ಮುದನೂರು, ಶರಣಪ್ಪ ಗುಮ್ಮಾ ಪೊಲೀಸ್, ಈರಣ್ಣ ನಾಲವಾರ, ಸಿದ್ದಪ್ಪ ಚೆಟ್ಟಿ, ಶ್ರೀಶೈಲ ನಿಂಬಾಳ, ಶರಣು ಚೆಟ್ಟಿ, ಮಲ್ಲೇಶಪ್ಪ ಸಜ್ಜನ್, ಹನುಮಂತ ನಂಬಾ.ಸೋಮಶೇಖರ ಶಾಬಾದಿ, ಸಿದ್ದಪ್ಪ ವನಗುಂಟಿ, ಸಂತೋಷಬಲ್ಲಾ, ಮಂಜುನಾಥ ಸಪ್ಪಂಡಿ, ಸಂಗಣ್ಣ ಚೆಟ್ಟಿ ಇತರರಿದ್ದರು.

ರಂಗಂಪೇಟೆಯ ಈಶ್ವರ ಬನಶಂಕರಿ ದೇವಸ್ಥಾನದಲ್ಲಿ ದಸರಾ ನವರಾತ್ರಿ ಹಬ್ಬದ ಪ್ರಯುಕ್ತ ಮಹಾ ಪೂಜೆ ಹಾಗೂ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.

Leave a Reply

Your email address will not be published. Required fields are marked *

error: Content is protected !!