ಅಂಧರ ಬಾಳಿನ ಆಶಾಕಿರಣ ಡಾ.ಕವಿ ಪುಟ್ಟರಾಜ ಗವಾಯಿಗಳು;ಲಿಂಗಯ್ಯ ಸ್ವಾಮಿ
ಸುರಪುರ ಟೈಮ್ಸ್ ವಾರ್ತೆ
ಸುರಪುರ;ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳು ಅಂಧ, ಅನಾಥ ಮಕ್ಕಳ ಬಾಳಿನ ದೀಪ ಬೆಳಗಿಸಿ ಬಾಳಿನ ಗಾನಯೋಗಿಯಾಗಿದ್ದಾರೆ’ ಎಂದು ಶ್ರೀ ಈಶ್ವರಿ ಬನಶಂಕರಿ ದೇವಸ್ಥಾನದ ಪ್ರದಾನ ಅರ್ಚಕ ಲಿಂಗಯ್ಯ ಸ್ವಾಮಿ ಅಭಿಪ್ರಾಯಪಟ್ಟರು.
ಅವರು ಸ್ನೇಹ ಸಂಗೀತ ಕಲಾವೇದಿಕೆ ವತಿಯಿಂದ ರಂಗಂಪೇಠಯ ಶ್ರೀ ಬನಶಂಕರಿ ದೇವಿ ದೇವಸ್ಥಾನದಲ್ಲಿ ಡಾ. ಪಂಡಿತ್ ಪುಟ್ಟರಾಜ ಗವಾಯಿಗಳು ಇವರ ಪುಣ್ಯ ಸ್ಮರಣೋತ್ಸವ ಅಂಗವಾಗಿ ಸಂಗೀತ ಸುಧೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅಂಧ ಕಲಾವಿದರನ್ನು ಗೌರವಿಸುವ ಪ್ರತಿ ಸ್ಥಳದಲ್ಲೂ ಪುಟ್ಟರಾಜ ಗವಾಯಿಗಳಿಗೆ ಗೌರವ ಸಲ್ಲುತ್ತದೆ. ಕಣ್ಣು ಇದ್ದವರೂ ಮಾಡದ ಕೆಲಸವನ್ನು ತಮ್ಮ ಆಂತರಿಕ ದಿವ್ಯ ದೃಷ್ಟಿಯಿಂದ ಮಾಡಿರುವ ಗವಾಯಿಗಳವರು, ಒಳಗಣ್ಣಿನ ಶಿವಯೋಗಿಯಾಗಿದ್ದರು. ಕವಿತ್ವದಲ್ಲಿ ಅಪಾರ ಜ್ಞಾನಹೊಂದಿದ್ದ ಅವರು ಹಲವು ಪುರಾಣ ಮತ್ತು ಚರಿತ್ರೆ ಬರೆದಿದ್ದಾರೆ’ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಕಲಾವಿದರಾದ ಶಿವಶರಣಯ್ಯ ಸ್ವಾಮಿ ಬಳ್ಳುಂಡಿಗಿ ಮಠ ,ಮೋಹನ್ ಮಾಳದ್ಕರ, ನರಸಿಂಹ ಬಂಡಿ , ಉಮೇಶ್ ಯಾದವ್ , ಮಹೇಶ ಗೋಗಿ, ಶ್ರೀ ಜ್ಞಾನೇಶ್ ಪಾಣಿ ಬಾತೆ ರಂಗಂಪೇಟೆ,ಸಂಗೀತ ಕಾರ್ಯಕ್ರಮ ನೀಡಿದರು.ಇವರಿಗೆ ತಬಲಸಾತುನು ರಾಜಶೇಖರ್ ಗೆಜ್ಜೆ ಸುರೇಶ ಅಂಬುರಿ ನೀಡಿದರು.ಕಾರ್ಯಕ್ರಮದಲ್ಲಿ ಶರಣಪ್ಪ ಗುಮ್ಮ, ದೇವಾಂಗ ಸಮಾಜದ ಅಧ್ಯಕ್ಷರು ಚನ್ನಪ್ಪ ಗುಂಡಾನೂರ್ ನಿಂಗಣ್ಣ ರಾಯಚೂರುಕರ ಇಸಾಕ್ ಮಮ್ಮದ್ ಗದ್ವಾಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು .




