ನಮ್ಮ ಊರು ಸುರಪುರದಲ್ಲೆ  ಇದ್ದಂತೆ ಭಾಸವಾಯಿತು; ರಾಜಾ ವೇಣುಗೋಪಾಲನಾಯಕ

ಸುರಪುರ ಟೈಮ್ಸ್ ವಾರ್ತೆ

ಸುರಪುರ: ಸುರಪುರದ ಯಾವುದೋ ಓಣಿಯಲ್ಲಿ ಇದ್ದಂತೆ ನನಗೆ ಭಾಸವಾಯಿತು. ನಿಮ್ಮ ಆದರ, ಸತ್ಕಾರ, ಪ್ರೀತಿ, ವಿಶ್ವಾಸಕ್ಕೆ ಮಾರುಹೋಗಿದ್ದೇನೆ. ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ’ ಎಂದು ಶಾಸಕ ರಾಜಾ ವೇಣುಗೋಪಾಲನಾಯಕ ಭಾವುಕರಾಗಿ ನುಡಿದರು.
ಕಲಬುರಗಿಯ ಖಾಸಗಿ ಹೊಟೆಲ್‌ನಲ್ಲಿ ಕಲಬುರಗಿ ನಗರದಲ್ಲಿ ನೆಲೆಸಿರುವ ಸುರಪುರ ತಾಲ್ಲೂಕಿನ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಭಾನುವಾರ ಏರ್ಪಡಿಸಿದ್ದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, ‘ಸಂಘದ ಧ್ಯೇಯೋದ್ದೇಶಗಳು ಚೆನ್ನಾಗಿವೆ. ಸುರಪುರದಿಂದ ಬಂದು ಇಲ್ಲಿ ನೆಲೆಸಿರುವ ನಿವಾಸಿಗಳು ಒಗ್ಗಟಾಗಿ ಪರಸ್ಪರ ಕಷ್ಟ ಸುಖಗಳಿಗೆ ಸ್ಪಂದಿಸುವುದು ಉತ್ತಮ ಕಾರ್ಯ. ಸಂಘದ ಕಚೇರಿಗೆ ನಿವೇಶನ ಒದಗಿಸುತ್ತೇನೆ’ ಎಂದು ಭರವಸೆ ನೀಡಿದರು.
ಸಂಘದ ಅಧ್ಯಕ್ಷ ಈಶ್ವರ್ ಕಟ್ಟಿಮನಿ ಮಾತನಾಡಿದರು. ಶಾರದಾ ಸಂಗೀತ ವಿದ್ಯಾಲಯದ ಮಕ್ಕಳು ಪ್ರಾರ್ಥನೆ ಗೀತೆ ಹಾಡಿದರು. ಸಂಘದ ಸಹ ಕಾರ್ಯದರ್ಶಿ ನಾಗರಾಜ ಸುರಪುರ ಪ್ರಾಸ್ತಾವಿವಾಗಿ ಮಾತನಾಡಿದರು.
ಗೌರವಾಧ್ಯಕ್ಷ ಚನ್ನಬಸವರಾಜ ನಿಷ್ಠಿ ದೇಶಮುಖ ಸ್ವಾಗತಿಸಿದರು. ಜಿ.ಜಿ. ವಣಿಕ್ಯಾಳ ನಿರೂಪಿಸಿದರು. ಉಪಾಧ್ಯಕ್ಷ ಗಂಗಾಧರ ಸುರಪುರ ವಂದಿಸಿದರು.
ಕಾರ್ಯದರ್ಶಿ ರಾಘವೇಂದ್ರ ಗುಡಗುಂಟಿ, ಖಜಾಂಚಿ ಬಾಲಕೃಷ್ಣ ಸಾಲವಾಡಗಿ ವೇದಿಕೆಯಲ್ಲಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ, ಸೇವೆಯಲ್ಲಿ ಪದೋನ್ನತಿ ಹೊಂದಿದ, ವಯೋನಿವೃತ್ತಿ ಹೊಂದಿದ ಮತ್ತು ಆದರ್ಶ ದಂಪತಿಗಳು ಸೇರಿದಂತೆ ೭೩ ಜನರನ್ನು ಸನ್ಮಾನಿಸಲಾಯಿತು.ನಿರ್ದೇಶಕರಾದ ತೇಜಸಿಂಗ ಹಜಾರೆ, ಯಂಕಪ್ಪ ನೀರಡಗಿ, ಚಂದಪ್ಪ ಹೆಮನೂರ, ರವೀಂದ್ರ ದೋಶೆಟ್ಟಿ, ಪಿಡ್ಡಪ್ಪ ಜಾಲಗಾರ, ಗೋವಿಂದಪ್ಪ ಸೇಡಂ, ವಿಜಯಕುಮಾರ ಬೈಚಬಾಳ, ವೆಂಕಟೇಶ ನೀರಡಗಿ, ವಿಶ್ವರಾಧ್ಯ ಸತ್ಯಂಪೇಟ, ಚಂದ್ರಶೇಖರ ಅನಾದಿ, ಮಲ್ಲೇಶಪ್ಪ ಗುಡೂರ, ಕನಕಪ್ಪ ಬಿಲ್ಲವ, ಚಂದ್ರಶೇಖರ ಕಕ್ಕೇರಿ, ಮಹಾದೇವ ಪಟ್ಟಣಶೆಟ್ಟಿ, ಶಿವಶಂಕರಪ್ಪ ಗುಡಗುಂಟಿ, ನಿರ್ಮಲಾ ಚವ್ಹಾಣ, ಚಂದುಬಾಯಿ ಜಾಧವ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!