ಸುರಪುರ-ಹೈದ್ರಾಬಾದ್, ಕಲಬುರ್ಗಿ ಬಸ್ ಸೇವೆ ಪುನರಾರಂಭಕ್ಕೆ ಕರವೇ ಆಗ್ರಹ
ಸುರಪುರ ಟೈಮ್ಸ್ ವಾರ್ತೆ
ಸುರಪುರ: ಸುರಪುರದಿಂದ ಹೈದರಾಬಾದ್ ಮತ್ತು ಸುರಪುರದಿಂದ ಕಲಬುರ್ಗಿಗೆ ಪ್ರತಿನಿತ್ಯ ಸಂಚರಿಸುತ್ತಿರುವ ಬಸುಗಳು ಸ್ಥಗಿತಗೊಂಡಿದ್ದು ಕೂಡಲೇ ಬಸ್ಸುಗಳನ್ನು ಪುನರಾರಂಭಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವಂತೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷ ವೆಂಕಟೇಶ್ ನಾಯಕ ಬೈರಮಡ್ಡಿ ಮಾತನಾಡಿ, ಕಳೆದ 30 ವರ್ಷಗಳಿಂದ ಸಂಚರಿಸುತ್ತಿದ್ದ ಸುರಪುರ ಹೈದರಾಬಾದ್ ಬಸ್ ಬಂದ್ ಮಾಡಲಾಗಿದ್ದು ಇದರಿಂದ ಪ್ರಯಾಣಿಕರಿಗೆ ವ್ಯಾಪಾರಸ್ಥರಿಗೆ ಬಹಳಷ್ಟು ತೊಂದರೆಯಾಗಿದೆ ಹಾಗೂ ಸುರಪುರದಿಂದ ಕಲಬುರ್ಗಿ ಹೋಗಲು ನೇರ ಬಸ್ಸುಗಳು ಇಲ್ಲದೆ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ ಹಾಗೂ ಕಲಬುರ್ಗಿಯಿಂದ ಸುರಪುರಕ್ಕೆ ಬರಲು ಸಂಜೆ ಬಸ್ ಗಳು ಸಿಗುವುದಿಲ್ಲ, ಬೆಂಗಳೂರು ಮೈಸೂರು ಧಾರವಾಡ ಇನ್ನಿತರ ಕಡೆ ಸಂಚರಿಸುವ ತಡೆ ರಹಿತ ಬಸ್ಸುಗಳು ಸುರಪುರಕ್ಕೆ ಹೋಗುವ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದಿಲ್ಲ ಮತ್ತು ಅವಮಾನಕರ ರೀತಿಯಲ್ಲಿ ಮಾತನಾಡಿ ಬಸ್ಸಿನಿಂದ ಕೆಳಗಿಳಿಸುತ್ತಾರೆ ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದ್ದು ಕೂಡಲೇ ಸುರಪುರದಿಂದ ಹೈದರಾಬಾದ್ ಮತ್ತು ಸುರಪುರದಿಂದ ಕಲಬುರ್ಗಿಗೆ ಪ್ರತಿನಿತ್ಯ ಸಂಚರಿಸುವ ಬಸ್ ಗಳನ್ನು ಪುನರಾರಂಭಿಸುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಹುಣಸಗಿ ತಾಲೂಕಾಧ್ಯಕ್ಷ ಬಸವರಾಜ ಚನ್ನೂರ,ಜಿಲ್ಲಾ ಸಂಚಾಲಕರಾದ ಶರಣು ಹುಣಸಗಿ, ತಾಲೂಕ ಪದಾಧಿಕಾರಿಗಳಾದ ಹಣಮಗೌಡ ಶಖಾಪೂರ, ನಾಗೇಂದ್ರ ದೊರೆ ,ಮೌನೇಶ ದೇವಾಪುರ, ಶರಣಬಸವ ದೇವಾಪುರ ಸೇರಿದಂತೆ ಇತರರು ಉಪಸ್ಥಿತರಿದ್ದರು.



