ನವೆಂಬರ್ 1ರಂದು ಮಾತ್ರವಲ್ಲದೆ ಪ್ರತಿದಿನವೂ ಕನ್ನಡಿಗರಾಗಿರಬೇಕು: ವೆಂಕಟೇಶ್ ನಾಯಕ ಭೈರಿಮಡ್ಡಿ
ಸುರಪುರ ಟೈಮ್ಸ್ ವಾರ್ತೆ
ಸುರಪುರ : ನಾವೆಲ್ಲರೂ ಬರೀ ನವೆಂಬರ್ ತಿಂಗಳಲ್ಲಿ ಕನ್ನಡಿಗರಾಗದೆ, ನಾವು ಪ್ರತಿನಿತ್ಯವೂ ಕನ್ನಡಿಗರಾಗಬೇಕು. ಪ್ರತಿಯೊಂದು ಕ್ಷೇತ್ರದಲ್ಲೂ ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ನಮ್ಮ ನಾಡು ನುಡಿಯನ್ನು, ಕಲೆ, ಸಂಸ್ಕೃತಿಯನ್ನು ಉಳಿಸಿ ಮುಂದಿನ ಪೀಳಿಗೆಗೆ ನೀಡುವ ಜವಾಬ್ದಾರಿ ನಮ್ಮದು ಎಂದು ಕರವೇ ತಾಲೂಕು ಅಧ್ಯಕ್ಷ ವೆಂಕಟೇಶ ನಾಯಕ ಭೈರಿರಡ್ಡಿ ಹೇಳಿದರು.
ನಗರದ ಕರವೇ ಕಾರ್ಯಾಲಯದಲ್ಲಿ 70 ನೇ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಪೂರ್ವಭಾವಿ ಸಭೆಯನ್ನು ಮಾತನಾಡಿದ ಅವರು ನವ್ಹೆಂಬರ್ 1 ರಂದು ನಗರಗಳಲ್ಲಿ , ಹೋಬಳಿಗಳಲ್ಲಿರುವ , ಗ್ರಾಮಗಳಲ್ಲಿರುವ ಧ್ವಜಸ್ತಂಭಗಳಿಗೆ ಬಣ್ಣ ಬಳಿದು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಧ್ವಜಾರೋಹಣ ನೆರವೇರಿಸಬೇಕು ಎಂದರು. ಸಂಘಟನೆಯನ್ನು ಇನ್ನಷ್ಟು ಬಲಪಡಿಸಲು ತಾವೆಲ್ಲರೂ ಶ್ರಮಿಸಬೇಕು. ಕನ್ನಡ ನಾಡು, ನುಡಿ, ನೆಲ, ಜಲ, ಗಡಿ, ಭಾಷೆಯ ವಿಷಯಕ್ಕೆ ಧಕ್ಕೆ ಬಂದಾಗ ನಿರಂತರ ಹೋರಾಟ ಮಾಡಲು ತಾವುಗಳು ಕಟಿಬದ್ದರಾಗಿ ಹೋರಾಟ ಮಾಡಲು ಕರೆ ನೀಡಿದರು.
ಕೆಂಭಾವಿಯಲ್ಲಿ 21 ನೇ ಕರವೇ ರಾಜ್ಯೋತ್ಸವ ಸಂಭ್ರಮ
ಈ ವರ್ಷದ ನಮ್ಮ ತಾಲೂಕಿನ 21 ನೇ ಕರವೇ ರಾಜ್ಯೋತ್ಸವ ಸಂಭ್ರಮ ಕಾರ್ಯಕ್ರಮವನ್ನು ಸುರಪುರ ತಾಲೂಕಿನ ಕೆಂಭಾವಿ ಯಲ್ಲಿ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿ ಎಂದು ತಿಳಿಸಿದರು. ಕೆಂಭಾವಿ ಹೋಬಳಿ ವಲಯದ ಎಲ್ಲಾ ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಗಲಿರುಳು ಶ್ರಮಿಸಿ ಇದು ನಮ್ಮ ಹಬ್ಬ, ಕನ್ನಡಿಗರ ಹೆಮ್ಮೆಯ ಹಬ್ಬವನ್ನು ಸಂಭ್ರಮಿಸಿ ಅದ್ದೂರಿಯಾಗಿ ಆಚರಣೆ ಮಾಡಬೇಕೆಂದು ಕರೆ ನೀಡಿದರು.
ಈ ಪೂರ್ವಭಾವಿ ಸಭೆಯಲ್ಲಿ ತಾಲೂಕ ಪದಾಧಿಕಾರಿಗಳಾದ ಹಣಮಗೌಡ ಶಖಾಪೂರ, ನಾಗೇಂದ್ರ ದೊರೆ ,ಮಲ್ಲು ವಿಷ್ಣು ಸೇನಾ , ಆನಂದ ಮಾಚಗುಂಡಾಳ, ಶ್ರೀ ಶೖಲ ಕಾಚಾಪೂರ ,ನಾಗರಾಜ ಡೊಣ್ಣಿಗೇರಿ , ಸಾಯಬಣ್ಣ ದೊರಿ , ಪ್ರಕಾಶ ಹೆಗ್ಗಣದೊಡ್ಡಿ , ಲಕ್ಷ್ಮಣ ಭೋವಿ , ಲಕ್ಷ್ಮಣ ಯಾದವ,ವಿನೋದ ನಾಯಕ, ಮಲ್ಲಿಕಾರ್ಜುನ ರೊಡ್ಡರ , ಆಟೋಘಟಕದ ಆನಂದ ರತ್ತಾಳ , ಹೊನ್ನಪ್ಪ ಗೌಡ, ಬಸವರಾಜ, ನಗರ ಘಟಕದ ನಿಂಗಣ್ಣ ಮಾಲಗತ್ತಿ , ಸಿದ್ದು ತುಮಕೂರ, ವಿಧ್ಯಾರ್ಥಿ ಘಟಕದ ಆಂಜನೇಯ ದೇವರಗೋನಾಲ , ಭೀಮರಾಯ ಗುರು ಯುವಘಟಕದ ವಿಜಯಕುಮಾರ ನರಸಿಂಗಪೇಟ , ಹೋಬಳಿ ವಲಯದ ಮಲ್ಲಣ್ಣ ಗೌಡ ಕಕ್ಕೇರಿ , ಶಿವು ಮಲ್ಲಿಭಾವಿ , ದೇವು ಹಡಪದ, ರಮೇಶ ಚಿಂಚೋಳಿ , ವಿಠ್ಠಲ್ ವಾರಸ್ಠಾರ, ನಿಂಗಪ್ಪ ಪೂಜಾರಿ , ಚಿದಾನಂದ ವಿವಿಧ ಗ್ರಾಮಶಾಖೆಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳಾದ ರಾಮನಗೌಡ ಶಖಾಪೂರ, ಬೀಮು ಜಾಲಿಬೆಂಜಿ, ತಿರುಪತಿ ತಳ್ಳಳ್ಳಿ , ಷಣ್ಮುಖ ಅಡ್ಡೊಡಗಿ, ಅಂಬ್ರೇಶ ಕವಡಿಮಟ್ಟಿ , ಬಲಭೀಮ ಬೊಮ್ಮನಹಳ್ಳಿ , ಮೌನೇಶ ಬಡಿಗೇರ , ಮಹಾರಾಜ ಹೆಮ್ಮಡಿಗಿ ,ರಾಮುಲು ಬೇವಿನಾಳ, ಭೀಮರಾಯ ಬಾದ್ಯಾಪೂರ , ನಾಗರಾಜ ಹೆಗ್ಗಣದೊಡ್ಡಿ , ತಿಪ್ಪಣ್ಣ ಬಾಡದ, ಮಲ್ಲಪ್ಪ ಕುರಿ, ಮರೆಪ್ಪ ಅಡ್ಡೊಡಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.







