ಮಾದಕ ವ್ಯಸನ ಮುಕ್ತ ಸುಸ್ಥಿರ ಸಮಾಜ ನಿಮಾರ್ಣ ಗುರಿ: ಮಾಳಪ್ಪ ಪೂಜಾರಿ
ಮಾದಕ ವ್ಯಸನ ಮುಕ್ತ ಸುಸ್ಥಿರ ಸಮಾಜ ನಿಮಾರ್ಣ ಗುರಿ
ಯುವಜನರಲ್ಲಿ ಮಾದಕ ದ್ರವ್ಯ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ನಶಾ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಮಾದಕ ವ್ಯಸನ ಮುಕ್ತ ಸುಸ್ಥಿರ ಸಮಾಜ ನಿಮಾರ್ಣ ಪ್ರತಿಯೊಬ್ಬರ ಆದ್ಯತೆಯಾಗಬೇಕು ಎಂದು MRW ಅಧಿಕಾರಿ ಮಾಳಪ್ಪ ಪೂಜಾರಿ ಹೇಳಿದರು.
ಅವರು ನಗರದ ತಾಲೂಕು ಪಂಚಾಯತ ಆವರಣದಲ್ಲಿ ಜಿಲ್ಲಾಡಾಳಿತ ಜಿಲ್ಲಾ ಪಂಚಾಯತ ಯಾದಗಿರಿ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ತಾಲೂಕು ಪಂಚಾಯತ ಸುರಪುರ ವತಿಯಿಂದ ಶನಿವಾರ ನಶಾ ಮುಕ್ತ ಭಾರತ ಅಭಿಯಾನದಲ್ಲಿ ಪ್ರತಿಜ್ಞೆ ವಿಧಿ ಬೋಧಿಸಿ, ಮಾತನಾಡಿದರು ಮಾದಕ ವ್ಯಸನವು ಬಹುದೊಡ್ಡ ಸಾಮಾಜಿಕ ಪಿಡುಗಾಗಿದ್ದು, ಕೆಲವರು ಅತೀ ಚಿಕ್ಕ ವಯಸ್ಸಿಗೆ ಮಾದಕ ವಸ್ತುಗಳ ದಾಸರಾಗಿ ತಮ್ಮ ಅಮೂಲ್ಯ ಜೀವವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ವ್ಯಕ್ತಿಯು ಯಾವುದೇ ವ್ಯಸನಕ್ಕೆ ಒಳಗಾದಲ್ಲಿ ಕುಟುಂಬ, ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಲ್ಲದೇ ಅಪರಾಧ ಕೃತ್ಯಗಳಲ್ಲಿ ಪಾಲ್ಗೊಳ್ಳಲು ಪ್ರೇರೇಪಿಸುತ್ತದೆ ಎಂದರು.
ನಾಗರಾಜ್ ಚಂದುಕರ್, ವಿಜಯ್ ಕುಮಾರ್ ಜೋಶಿ, ಫಕ್ರುದ್ದೀನ್, ಕೆಂಚಪ್ಪ ,ವೆಂಕನಗೌಡ ,ಜಲ್ ಕಿಂಗ್ ,ಪರಶುರಾಮ್ ರಾಮ್, ಕೋಟೆಪ್ಪ ಜರಿನ ಬೇಗಮ್ ಸೇರಿದಂತೆ ತಾಲೂಕು ಪಂಚಾಯತ ಸಿಬ್ಬಂದಿ ವರ್ಗ, VRW ಸಿಬ್ಬಂದಿಗಳು ಹಾಗೂ NRLM ಸಿಬ್ಬಂದಿಗಳು ಉಪಸ್ಥಿತರಿದ್ದರು .


